ಧಮ೯ ಸಂಸ್ಕಾರ ಕಲಿಸಲು ಬ್ರಾಹ್ಮಣ ಸಮಾಜ ಮುಂದಾಗಬೇಕು;ಅನಿಲ್ ಹೆಚ್.ಟಿ ಸಲಹೆ
ಮಡಿಕೇರಿ ಜ. 26 - ಈಗಿನ ತಲೆಮಾರಿನ ಜೆನ್ ಜಿ ಪೀಳಿಗೆಗೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿಯೇ ಧಮ೯ ಮತ್ತು ಜೀವನ ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಕಾಯ೯ಯೋಜನೆ ರೂಪಿಸಬೇಕೆಂದು ಹಿರಿಯ ಪತ್ರಕತ೯ ಅನಿಲ್ ಹೆಚ್.ಟಿ. ಸಲಹೆ ನೀಡಿದ್ದಾರೆ.
ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿತ ಬ್ರಾಹ್ಣಣ ವಿದ್ಯಾಭಿವೖದ್ದಿ ನಿಧಿಯ ವಾಷಿ೯ಕ ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅನಿಲ್, ಡಿಜಿಟಲ್ ಯುಗದಲ್ಲಿ ಜನಿಸಿದ ಜೆನ್ ಜಿ ಮತ್ತು ಆಲ್ಫಾ ಪೀಳಿಗೆಯು ಮೊಬೈಲ್, ಇಂಟರ್ ನೆಟ್ ಹೊರತಾಗಿ ಜೀವನವನ್ನೇ ಯೋಚಿಸುತ್ತಿಲ್ಲ. ಹಳೇ ತಲೆಮಾರಿನ ಸಂಸ್ಕೖತಿ, ಸಂಪ್ರದಾಯ, ಲೇಖಕರು, ಸಾಹಿತ್ಯದ ಪರಿಚಯವೂ ಈ ಪೀಳಿಗೆಗೆ ಇಲ್ಲ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜವು ವಾರಕ್ಕೊಂದು ದಿನವಾದರೂ ನವಪೀಳಿಗೆಯೂ ಸೇರಿದಂತೆ ವಿದ್ಯಾಥಿ೯ಗಳಿಗೆ ಧಮ೯ ಶಿಕ್ಷಣದಂಥ ಕಾಯ೯ಕ್ರಮ ರೂಪಿಸಬೇಕೆಂದು ಕರೆ ನೀಡಿದರು.
ಆಧುನಿಕ ದಿನಗಳಲ್ಲಿ ಕೌಟುಂಬಿಕ ಸಂಬಂದಗಳು ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ವಿಷಾಧಿಸಿದ ಅನಿಲ್, ಬ್ರಿಟನ್ ಲೇಖಕ ಸ್ಟೀಫನ್ ಫ್ರೈ ಹೇಳಿದಂತೆ ಒಂದೇ ಮನೆಯಲ್ಲಿ ಐದಾರು ದೇಶಗಳ ಸಂಸ್ಕೖತಿ ಕಂಡುಬರುತ್ತಿದೆ. ಅಪ್ಪ ಅಮೇರಿಕಾದ ರಾಜಕೀಯ ಗಮನಿಸುತ್ತಿದ್ದರೆ, ಅಮ್ಮ ನ್ಯೂಜಿಲೆಂಡ್ ನಲ್ಲಿರುವ ಮಗಳೊಂದಿಗೆ ಮಾತನಾಡುತ್ತಾಳೆ. ಮಗ ರಾಕ್ ಸಂಗೀತ ಕೇಳುತ್ತಿದ್ದರೆ ಅಜ್ಜಿ ಭಾರತೀಯ ದೇವರ ಧ್ಯಾನದಲ್ಲಿ ನಿರತಳಾಗಿರುತ್ತಾಳೆ.
ಮಗಳು ಚೈನೀಸ್ ತಿಂಡಿ ಆಸ್ವಾದಿಸುತ್ತಿರುತ್ತಾಳೆ. ಹೀಗೆ ಮನೆಯೊಂದರಲ್ಲಿ ವಿವಿಧ ದೇಶಗಳ ಸಂಸ್ಕತಿ ಸಂಸ್ಕೖತಿ ಹಾಸುಹೊಕ್ಕಾಗುವಂಥ ದಿನಗಳು ಈಗಿನವು ಎಂದರು. ಪ್ರತಿಯೋವ೯ರನ್ನೂ ಬೆಸೆಯುವದಕ್ಕಾಗಿ ನೂರಾರು ಉಪಕರಣಗಳಿದ್ದರೂ ಎಲ್ಲರೂ ಒಂಟಿತನ ಅನುಭವಿಸುತ್ತಿರುವುದು ಆಧುನಿಕಕಾಲದ ಡಿಜಿಟಲ್ ಯುಗದ ವಿಪಯಾ೯ಸ ಎಂದು ವಿಶ್ಲೇಷಿಸಿದ ಅನಿಲ್, ಮನಗೆದ್ದು ಮಾರು ಗೆಲ್ಲು ಎಂಬಂತೆ ಬ್ರಾಹ್ಮಣ ಸಮಾಜದವರು ಇತರೆಲ್ಲಾ ಸಮಾಜದವರಿಗೆ ಮಾದರಿಯಾಗುವಂತೆ ಆದಶ೯ಯುತ ಜೀವನ ನಡೆಸಬೇಕೆಂದು ಕರೆ ನೀಡಿದರು.
ಆಧುನಿಕತೆಯ ಭರಾಟೆಯಲ್ಲಿ ಕೂಡುಕುಟುಂಬಗಳು, ಕೌಟುಂಬಿಕ ಸಂಬಂಧಗಳು ದೂರವಾಗದಂತೆ ಗಮನ ಹರಿಸಿ ಎಂದೂ ಅವರು ಕಿವಿಮಾತು ಹೇಳಿದರು. ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ನಿಧಿಯ ಸಭಾಂಗಣದ ಮೇಲಂತಸ್ತಿನ ಕಾಮಗಾರಿಯನ್ನು ಸಮುದಾಯಬಾಂಧವರ ಸಹಕಾರದೊಂದಿಗೆ ಈ ವಷ೯ವೇ ಕೈಗೊಳ್ಳಲಾಗುತ್ತದೆ. ಬ್ರಾಹ್ಮಣ ಸಮುದಾಯದವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ವಷ೯ಂಪ್ರತಿಯಿಂತೆಯೇ ಈ ಬಾರಿಯೂ ಕ್ರೀಡಾ ಸ್ಪಧೆ೯, ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು ಎಂದರು.
ಕೊಡಗು ಜಿಲ್ಲೆಯಾದ್ಯಂತ ಬ್ರಾಹ್ಮಣ ಸಮುದಾಯದವರ ಸಂಘಟನೆಗೆ ಮುಂದಿನ ದಿನಗಳಲ್ಲಿ ಕಾಯ೯ಯೋಜನೆ ಹಮ್ಮಿಕೊಳ್ಳಲಾಗುತ್ತದೆ ಎಂದೂ ರಾಮಚಂದ್ರ ಮೂಗೂರು ತಿಳಿಸಿದರು. ಕ್ರೀಡಾ ಸ್ಪಧೆ೯ಗಳನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿಯ ವೈದ್ಯ ಡಾ ರಾಜಾರಾಮ್ .ಸಮಾಜ ಒಂದಾಗಿ ಪ್ರತಿಬಿಂಬಿಸಲು ಕ್ರೀಡೆ ಅತ್ಯಂತ ಪ್ರಯೋಜನಕಾರಿಯಾಗಿದೆ. ದಕ್ಷಿಣ ಹಾಗೂ ಉತ್ತರ ಕೊಡಗು ಒಂದುಗೂಡಿ ಈ ಬಾರಿ ಬ್ರಾಹ್ಮಣ ಸಮಾಜದ ಕ್ರೀಡೆಯನ್ನು ಆಯೋಜಿಸಿದ್ದು,ಐಕ್ಯತೆಯ ಸೂಚಕವಾಗಿದೆ. ಸಮಾಜದ ಬಾಂಧವ್ಯ ವೃದ್ಧಿಗೆ ಇದು ಒಂದು ಉತ್ತಮವಾದ ಹಾದಿ.
ಮಹಾಭಾರತದ ಕಾಲದಲ್ಲಿ ದ್ರೋಣಾಚಾರ್ಯರು ಐಕ್ಯತೆಗಾಗಿ ಕ್ರೀಡೆಗಳನ್ನು ಬಳಸಿದ್ದರು. ಸಮಾಜದ ಒಳಿತಿಗೆ ಹಾಗೂ ಬ್ರಾಹ್ಮಣರ ಒಗ್ಗೂಡುವಿಕೆಗೆ ಈ ಹೊಸ ಮಾರ್ಗ ಮುಂದಿನ ದಿನಗಳಲ್ಲಿ,ಸಮಾಜದ ಅಭ್ಯುದಯಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
ಬ್ರಾಹ್ಮಣರಲ್ಲಿ ಸಹಜವಾಗಿ ನೆಲೆಸಿರುವಂತಹ ಗುಣಗಳೊಂದಿಗೆ, ಕ್ರೀಡೆಯಂತಹ ಮನೋಭಾವವನ್ನು ಬೆಳೆಸುವುದರ ಮೂಲಕ, ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಡಲು ಇದು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ಪರಿಣಮಿಸಲಿದೆ. ಆಟಗಾರರಿಗೆ ಹೊಸ ಜೀವನದ ಉತ್ಸಾಹ ಕೊಡುವುದರ ಜೊತೆಗೆ ಇನ್ನು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಆಟೋಟಗಳು, ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿ ಎಂದು ಡಾ. ರಾಜಾರಾಮ್ ಕರೆ ನೀಡಿದರು. ಬ್ರಾಹ್ಮಣ ವಿದ್ಯಾಭಿವೖದ್ದಿ ನಿಧಿಯ ಪ್ರಧಾನ ಕಾಯ೯ದಶಿ೯ ಬಿ.ಕೆ. ಜಗದೀಶ್ ಕ್ರೀಡಾ ಪಂದ್ಯಾವಳಿಯ ವರದಿ ವಾಚಿಸಿದರು.
ಉಪಾಧ್ಯಕ್ಷ ಭರತೇಶ್ ಖಂಡಿಗೆ ಸ್ವಾಗತಿಸಿ, ಖಜಾಂಜಿ ಜಿ.ಆರ್. ರವಿಶಂಕರ್ ಅತಿಥಿ ಪರಿಚಯ ಮಾಡಿದರು. ನಿದೇ೯ಶಕರಾದ ಸವಿತಾ ಭಟ್, ಮಂಜುಳಾ ಭಟ್, ಬಿ.ಕೆ. ಅರುಣ್ ಕುಮಾರ್, ಪಿ.ವಿ. ಅಶೋಕ್ ನಿರೂಪಿಸಿದರು. ಜಿಲ್ಲೆಯಾದ್ಯಂತಲಿನಿಂದ ಬ್ರಾಹ್ಮಣ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದಭ೯ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ವಾಷಿ೯ಕ ಕ್ರೀಡೋತ್ಸವಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಧಕರಿಗೆ ಸನ್ಮಾನ; ಬ್ರಾಹ್ಮಣ ಸಮಾಜದ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು. ಕೊಡಗು ಮೂಲದ ಸಕಲೇಶಪುರದಲ್ಲಿ ನೆಲಸಿರುವ ಕಾಫಿ ಬೆಳೆಗಾರ ಕೋಗರವಳ್ಳಿ ಶಾಮರಾವ್, ಚೇರಂಬಾಣೆಯ ವೈದ್ಯ ಡಾ. ಶಂಕರನಾರಾಯಣ ಉರಾಳ, ವಿರಾಜಪೇಟೆಯ ನಿವೖತ್ತ ಶಿಕ್ಷಕಿ ಹೆಚ್ ಜಿ. ಸಾವಿತ್ರಿ, ಗಾಂಧಾರಿ ವಿದ್ಯೆಯಲ್ಲಿ ನಿಪುಣ ಗೋಣಿಕೊಪ್ಪಲುವಿನ ಪ್ರದ್ಯೋತ್ ಕಿರಣ್ ಅವರನ್ನು ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು.