Kodagu

ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಗೆ ಕರ್ನಾಟಕ ಹಾಕಿ ತಂಡಕ್ಕೆ ಕೊಡಗಿನ 8 ಸರ್ಕಾರಿ ನೌಕರರ ಆಯ್ಕೆ

admincoorgdaily

ಅಖಿಲ ಭಾರತ ನಾಗರಿಕ ಸೇವಾ ಹಾಕಿ ಪಂದ್ಯಾವಳಿಗೆ ಕರ್ನಾಟಕ ಹಾಕಿ ತಂಡಕ್ಕೆ ಕೊಡಗಿನ 8 ಸರ್ಕಾರಿ ನೌಕರರ ಆಯ್ಕೆ

ಮಡಿಕೇರಿ; ಅಖಿಲ ಭಾರತ ನಾಗರಿಕ ಸೇವಾ ಹಾಕಿ ಸ್ಪರ್ಧೆ ಫೆಬ್ರವರಿ 17 ರಿಂದ 28 ರವರೆಗೆ ದೆಹಲಿಯಲ್ಲಿ ನಡೆಯುತ್ತಿರುವ ಸರ್ಕಾರಿ ನೌಕರರ ಪಂದ್ಯಾಟದಲ್ಲಿ ಕೊಡಗಿನಿಂದ 8 ಕ್ರೀಡಾಪಟುಗಳು ಕರ್ನಾಟಕ ಹಾಕಿ ತಂಡದಲ್ಲಿ ಸೇರ್ಪಡೆಗೊಂಡು ರಾಷ್ಟ್ರೀಯ ಪಂದಾಟದಲ್ಲಿ ಭಾಗವಹಿಸಲಿದ್ದಾರೆ.

ಕೊಡಗಿನ ವಿವಿದಡೆ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರಗಳಾದ ಚಂದ್ರಶೇಖರ್ ಜಿ ಎಸ್ (ನಾಯಕ), ಸೋಮಣ್ಣ ಕೆ ಎಂ (ಗೋಲ್ ಕೀಪರ್) ಮೌನ್ ಮೊಣ್ಣಪ್ಪ, ಪೂರ್ಣೇಶ್ ಬಿ ಟಿ, ಡ್ಯಾನಿ ಈರಪ್ಪ, ಜಾಗೃತ್ ಸಿ ಟಿ, ಮಾಚಯ್ಯ ಕೆ ಕೆ, ಪೂಣಚ್ಚ ಸಿ ಜಿ ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.