ಮೈಸೂರಿನಲ್ಲಿ ತಲೆ ಎತ್ತಲಿದೆ ವಿಶಿಷ್ಠ, ವೈವಿಧ್ಯಮಯವಾದ ಏಕತಾ ಮಾಲ್‌ : ಸಂಸದ ಯದುವೀರ್‌ ಒಡೆಯರ್‌

Jul 28, 2025 - 20:21
Jul 29, 2025 - 11:28
 0  78
ಮೈಸೂರಿನಲ್ಲಿ ತಲೆ ಎತ್ತಲಿದೆ ವಿಶಿಷ್ಠ, ವೈವಿಧ್ಯಮಯವಾದ ಏಕತಾ ಮಾಲ್‌ : ಸಂಸದ ಯದುವೀರ್‌ ಒಡೆಯರ್‌

ಮೈಸೂರು: ದೇಶದ ಏಕತೆ ಹಾಗೂ ಸಮಗ್ರತೆಯನ್ನು ಕಾಪಾಡುವುದಕ್ಕಾಗಿ ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಏಕತಾ ಮಾಲ್‌ ವೈವಿಧ್ಯಮಯ ತಾಣವಾಗಿ ಹೊರಹೊಮ್ಮಲಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ. ಮೈಸೂರು ವಸ್ತುಪ್ರದರ್ಶನದ ಮೈದಾನದಲ್ಲಿ ತಲೆ ಎತ್ತಲಿರುವ ಈ ಏಕತಾ ಮಾಲ್‌ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಸಂಸದರು ಮಾತನಾಡಿದರು.

 ಇದು ಕೇಂದ್ರದ ಮಹತ್ವದ ಯೋಜನೆಯಾಗಿದೆ. ಜಿಲ್ಲೆಗಳ ವೈವಿಧ್ಯಮಯ ಮತ್ತು ವಿಶಿಷ್ಠವಾದ ಉತ್ಪನ್ನಗಳು ಒಂದೇ ಸೂರಿನಲ್ಲಿ ಸಿಗಬೇಕು ಎಂಬ ದೃಷ್ಟಿಯಿಂದ ಇದು ನಿರ್ಮಾಣವಾಗಲಿದೆ ಎಂದು ತಿಳಿಸಿದರು. ಭಾರತೀಯ ಉತ್ಪನ್ನಗಳು, ಮೇಕ್‌ ಇನ್‌ ಇಂಡಿಯಾ ಉತ್ಪನ್ನಗಳು, ಸ್ಥಳೀಯ ಪ್ರತಿಭೆಗಳು ತಮ್ಮ ವಸ್ತುಗಳನ್ನು ಪ್ರದರ್ಶಿಸಲು ಇಲ್ಲಿ ಅವಕಾಶ ನೀಡಲಾಗಿದೆ. ವೈವಿಧ್ಯತೆಯನ್ನು ಜಗದಗಲ ಪಸರಿಸಲು ಈ ಏಕತಾ ಮಾಲ್‌ ನೆರವಾಗಲಿದೆ ಎಂದು ಸಂಸದರು ತಿಳಿಸಿದರು. ಒಂದು ಜಿಲ್ಲೆ, ಒಂದು ಉತ್ಪನ್ನ ಎಂಬ ವಿಶೇಷ ಪ್ರೋತ್ಸಾಹ ದೊರೆಯಲಿದೆ. ಗ್ರಾಮೀಣ ಕಲಾವಿದರಿಗೆ, ವಿವಿಧ ಜಿಲ್ಲೆಯ ಕಲಾಕಾರರಿಗೆ ಇಲ್ಲಿ ಅವಕಾಶ ಸಿಗಲಿದೆ. ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಯದುವೀರ್‌ ವಿವರಿಸಿದರು. ಉದ್ಯೋಗದ ಸೃಷ್ಟಿಕರ್ತರಾಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ. ಕೇಂದ್ರ ಸರ್ಕಾರದ ಅನುದಾನ ಹಾಗೂ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಈ ಯೋಜನೆ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.

 ಪರಿಸರ ಸ್ನೇಹಿ ಕ್ರಮ:

ಏಕತಾ ಮಾಲ್‌ ನಿರ್ಮಾಣವನ್ನು ಪರಿಸರ ಸ್ನೇಹಿಯಾಗಿ ಮಾಡಲಾಗುತ್ತಿದೆ. ಯಾವುದೇ ಮರಗಳನ್ನು ಕೂಡ ಕಡಿಯುತ್ತಿಲ್ಲ. ಎಲ್ಲವನ್ನೂ ಉಳಿಸಿಕೊಂಡು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಸ್ವಯಂ ಸೇವಾ ಸಂಸ್ಥೆಯೊಂದಿಗೆ ಚರ್ಚಿಸಿ, ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮೈಸೂರಿನ ಪಾರಂಪರಿಕ ಕಟ್ಟಡಗಳ ವಾಸ್ತುಶಿಲ್ಪದ ಆಧಾರದ ಮೇಲೆಯೇ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ೨೦೨೭ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸಂಸದರು ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಅಖಾಡವನ್ನು ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಒಲಿಂಪಿಕ್ಸ್‌ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅನುವಾಗುವಂತೆ ನಿರ್ಮಿಸಲಾಗುತ್ತಿದೆ. ಜೊತೆಗೆ ಗಿಡಗಳನ್ನು ಉಳಿಸಲಾಗುವುದು. ಪರಿಸರಕ್ಕೆ ಯಾವುದೇ ರೀತಿಯಲ್ಲೂ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಜೊತೆಗೆ ಪ್ರವಾಸೋದ್ಯಮ ಕ್ಷೇತ್ರವನ್ನೂ ಉತ್ತೇಜಿಸಲು ಈ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸಂಸದ ಯದುವೀರ್‌ ಒಡೆಯರ್‌ ತಿಳಿಸಿದ್ದಾರೆ.

 ಏಕತಾ ಮಾಲ್‌ ವೈಶಿಷ್ಟ್ಯಗಳು: ⦁

ಒಟ್ಟು ವೆಚ್ಚ: 193 ಕೋಟಿ ರೂಪಾಯಿ ⦁

 90 ಮಳಿಗೆಗಳು ⦁

ಪ್ರತಿ ರಾಜ್ಯಕ್ಕೊಂದು ಮಳಿಗೆ ⦁

ಪ್ರತಿ ಜಿಲ್ಲೆಗೊಂದು ಮಳಿಗೆ ⦁

ವೈವಿಧ್ಯಮಯ ಆಹಾರ ಮಳಿಗೆ ⦁

 ಸರ್ಕಾರಿ-ಖಾಸಗಿ ಸಹಭಾಗಿತ್ವ ⦁

ಜಿಐ ಟ್ಯಾಗ್‌ ಉತ್ಪನ್ನಗಳ ಪ್ರದರ್ಶನ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0