ಜಮ್ಮಾ ಬಾಣೆ ವಿಧೇಯಕವನ್ನು ಪರಿಶೀಲಿಸಲು “ವಿಧಾನಸಭೆಯ ಆಯ್ಕೆ ಸಮಿತಿ” ರಚನೆಗೆ ಎ. ಎಸ್ ಪೊನ್ನಣ್ಣ ಮನವಿ

Aug 21, 2025 - 14:52
 0  353
ಜಮ್ಮಾ ಬಾಣೆ ವಿಧೇಯಕವನ್ನು ಪರಿಶೀಲಿಸಲು “ವಿಧಾನಸಭೆಯ ಆಯ್ಕೆ ಸಮಿತಿ” ರಚನೆಗೆ ಎ. ಎಸ್ ಪೊನ್ನಣ್ಣ ಮನವಿ

ಬೆಂಗಳೂರು:ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ವಿಧೇಯಕವನ್ನು ಸದನದಲ್ಲಿ ಮಾನ್ಯ ಕಾನೂನು ಸಚಿವರಾದ ಹೆಚ್ ಕೆ ಪಾಟೀಲ್ ಅವರು ಮಂಡಿಸಿದರು. ಈ ವಿಧೇಯಕ ಕುರಿತು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ಸ್ಪಷ್ಟಣೆ ನೀಡಿ, ಈ ವಿಧೇಯಕ ವಿಶೇಷವಾಗಿ ಕೊಡಗು ಜಿಲ್ಲೆಗೆ ಸಂಬಂಧಸಿದ್ದಾಗಿದೆ. 1964ನೇ ಕರ್ನಾಟಕ ಕಂದಾಯ ಕಾನೂನಿನಲ್ಲಿ ಕೆಲವು ಅಂಶಗಳು ಕೊಡಗು ಜನರ ಸಮಸ್ಯೆಗೆ ಕಾರಣವಾಗಿದೆ. ಅತ್ಯಂತ ಜಟೀಲವಾದ ಸಮಸ್ಯೆಯಾಗಿರುವುದರಿಂದ ಇದನ್ನು ತಿದ್ದುಪಡಿ ಮಾಡಲು ಅವಶ್ಯಕವಾಗಿರುತ್ತದೆ. ಆದುದರಿಂದ ವಿಧಾನಸಭೆಯ ಆಯ್ಕೆ ಸಮಿತಿ (Select Committee) ರಚನೆ ಮಾಡಲು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಎ. ಎಸ್ ಪೊನ್ನಣ್ಣನವರು ವಿಧಾನಸಭೆಯಲ್ಲಿ ವಿನಂತಿಸಿದರು. ಈ ಬಗ್ಗೆ ವಿಧಾನಸಭೆಯಲ್ಲಿ “ವಿಧಾನಸಭೆ ಆಯ್ಕೆ ಸಮಿತಿ” (Select Committee) ರಚನೆ ಮಾಡಲು ಒಪ್ಪಿಗೆ ನೀಡಲಾಯಿತು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1