Kodagu

ಅಭ್ಯತ್ ಮಂಗಲ:ಆಟೋ ಮತ್ತು ಥಾರ್ ಜೀಪ್ ನಡುವೆ ಭೀಕರ ಅಪಘಾತ

admincoorgdaily

ಅಭ್ಯತ್ ಮಂಗಲ:ಆಟೋ ಮತ್ತು ಥಾರ್ ಜೀಪ್ ನಡುವೆ ಭೀಕರ ಅಪಘಾತ

ಚೆಟ್ಟಳ್ಳಿ; ಸಮೀಪದ ಅಭ್ಯತ್ ಮಂಗಲ(ಒಂಟಿಯಂಗಡಿ) ಸಮೀಪ ಆಟೋ‌ ಮತ್ತು ಥಾರ್ ಜೀಪು ನಡುವೆ ಭೀಕರ ಅಪಘಾತ ಸಂಭವಿಸಿದ್ದು,ಆಟೋ ಚಾಲಕ ಮತ್ತು ಆಟೋದಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಥಾರ್ ಜೀಪ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದ್ದು,ಆಟೋ‌ ರಿಕ್ಷಾಗೆ ಸಂಪೂರ್ಣ ಹಾನಿಯುಂಟಾಗಿದೆ. ಚೆಟ್ಟಳ್ಳಿ ಪೊಲೀಸ್ ಠಾಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಗಾಯಾಳುಗಳಿಗೆ ಸಿದ್ದಾಪುರ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.