ಎಮ್ಮೆಮಾಡು:ಮದುವೆ ಸಮಾರಂಭದಲ್ಲಿ ದೈವ ಕೋಲಕ್ಕೆ ಅವಮಾನ‌ ಆರೋಪ; ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ

Mar 31, 2026 - 22:02
 0  1.5k
ಎಮ್ಮೆಮಾಡು:ಮದುವೆ ಸಮಾರಂಭದಲ್ಲಿ ದೈವ ಕೋಲಕ್ಕೆ ಅವಮಾನ‌ ಆರೋಪ;  ಜಮಾಅತ್  ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ದೈವ ಕೋಲಕ್ಕೆ ಅವಮಾನ ಆರೋಪಕ್ಕೆ ಸಂಬಂಧಿಸಿದಂತೆ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ಸ್ಪಷ್ಟನೆ ನೀಡಿದ್ದಾರೆ.

ಎಮ್ಮೆಮಾಡು ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹ ವ್ಯಕ್ತಿಗಳ ವಿರುದ್ದ ಜಮಾಅತ್ ನಿಯಮಗಳಿಗೆ ಅನುಗುಣವಾಗಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಸಮಿತಿ ಎಚ್ಚರಿಕೆ ನೀಡಿದ್ದಾರೆ.

 ಎಮ್ಮೆಮಾಡು ಜಮಾಅತ್ ಕಛೇರಿಯಲ್ಲಿ ಮಾಹಿತಿ ನೀಡಿ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಸಯ್ಯದ್ ಝಕರಿಯ ಸಅದಿ ಅಲ್ ಹೈದರೂಸಿ ಅವರು ಮಾತನಾಡಿ ಘಟನೆಗೆ ಸಂಭಂಧಿಸಿದಂತೆ ಜಮಾಅತ್ ತುರ್ತುಸಭೆ ನಡೆಸಿ, ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಜಮಾಅತ್ ಗೆ ಕರೆಸಿ, ವಿಚಾರಣೆ ನಡೆಸಿದ ಸಂದರ್ಭ ಮದುವೆ ಸಮಾರಂಭ ಮುಗಿದ ಬಳಿಕ ಸ್ನೇಹಿತರೆಲ್ಲರೂ ಒಗ್ಗೂಡಿದಾಗ ತಮಾಷೆಗಾಗಿ ಹೀಗೆ ವರ್ತಿಸಿದ್ದು ಯಾವುದೇ ಜಾತಿ, ಧರ್ಮವನ್ನು ನಿಂದನೆ ಮಾಡುವ ಉದ್ದೇಶವಿರಲಿಲ್ಲ ಎಂದು ಘಟನೆಯಲ್ಲಿ ಭಾಗಿಯಾದ ಎಲ್ಲರೂ ತಮ್ಮ ತಪ್ಪಿನ ಅರಿವಾಗಿ ಕ್ಷಮಾಪಣೆ ಕೇಳಿದ್ದಾರೆ.

ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಜಮಾಅತ್‌ನ ಕಠಿಣ ನಿಯಮಗಳನ್ನು ಎದುರಿಸಬೇಕಾದಿತೆಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಜಮಾಅತ್ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸಿದ್ದಲ್ಲಿ ಅಂತಹವರ ವಿರುದ್ಧ ಜಮಾಅತ್ ನಿಯಮಗಳಿಗೆ ಅನುಗುಣವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರಲ್ಲದೆ ಘಟನೆ ಯಿಂದ ಯಾವುದೇ ಧರ್ಮ ಜನಾಂಗದ ಧಾರ್ಮಿಕ ಆಚರಣೆಗಳ ದೈವಕೋಲಗಳಿಗೆ ನಿಂದನೆ ಆಗಿದೆ ಎಂಬ ಪ್ರಸ್ತಾವನೆ ಕೇಳಿ ಬಂದಿದೆ.

 ಯಾರಿಗಾದರೂ ಇದರಿಂದ ಮನನೊಂದಿದ್ದರೆ ಅವರಲ್ಲೂ ಕೂಡ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳು ಕ್ಷಮಾಪಣೆಯನ್ನು ಕೋರಿದ್ದಾರೆ. ನೀವು ಕೂಡ ಅವರಿಗೆ ಕ್ಷಮೆಯನ್ನು ನೀಡಿ ಎಲ್ಲರೂ ಸೌಹಾರ್ಧತೆಯಿಂದ ಬಾಳುವಂತೆ ಸಯ್ಯದ್ ಝಕರಿಯ ಅವರು ಮನವಿ ಮಾಡಿದರು. ಈ ಸಂದರ್ಭ ಜಮಾಅತ್ ಅಧ್ಯಕ್ಷ ಹುಸೈನ್ ಸಖಾಫಿ, ಸಹ ಕಾರ್ಯದರ್ಶಿ ಹನೀಫಾ ಉಪಸ್ಥಿತರಿದ್ದರು.

What's Your Reaction?

Like Like 5
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1