ಬಿಜೆಪಿ ಸಾವಿನ ‌ಮೇಲೆ ರಾಜಕೀಯ ಮಾಡುತ್ತಿದೆ: ಶಾಸಕ ಎಎಸ್ ಪೊನ್ನಣ್ಣ

Mar 21, 2026 - 11:52
Mar 21, 2026 - 12:05
 0  658
ಬಿಜೆಪಿ ಸಾವಿನ ‌ಮೇಲೆ ರಾಜಕೀಯ ಮಾಡುತ್ತಿದೆ: ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ;ಬಿಜೆಪಿ ರಸ್ತೆ ತಡೆ ನಡೆಸಿ ಅರಣ್ಯ ಸಚಿವರ ಬಗ್ಗೆ ಕೀಳಾಗಿ ಮಾತಾಡಿದ್ದಾರೆ. ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಯಾರೇ ಸಾವನ್ನಪ್ಪಿದ್ರು ನನಗೆ ಕುಟುಂಬ ಸದಸ್ಯರನ್ನು ಕಳೆದುಕೊಂಡಷ್ಟು ಬೇಜಾರಾಗುತ್ತದೆ ಎಂದು ಶಾಸಕರಾದ ಎಎಸ್ ಪೊನ್ನಣ್ಣ ಅಭಿಪ್ರಾಯಪಟ್ಟರು.

 ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,25 ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಆನೆ ಮಾನವ ಸಂಘರ್ಷ ಆಗಿಲ್ಲವೆ ನನ್ನ ಬಳಿ ಅದಕ್ಕೆದಾಖಲೆ ಇದೆ. ಅವರು ಸತ್ತಾಗ ಆಗ ಶಾಸಕರಾಗಿದ್ದವರು ಏನು ಮಾಡಿದ್ದರು! ಆವಾಗಿನ ಅರಣ್ಯ ಸಚಿವರು ಯಾವ ಝೂನಲ್ಲಿರಬೇಕು? ಎಂದು ಪ್ರಶ್ನಿಸಿದರು.

 ಕೊಡಗಿನಲ್ಲಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಯಾವತ್ತೂ ಈ ಈತಿಯಾಗಿ ವರ್ತಿಸಿರಲಿಲ್ಲ. ಅವರಿಗೆ ನಾನು ನೇರವಾಗಿ ಪ್ರಶ್ನೆ ಮಾಡ್ತೇನೆ, ಇವರ ಅವಧಿಯಲ್ಲಿ ಸಾವು ಸಂಭವಿಸಿದಾಗ ಏನು ಮಾಡಿದರು ಎಂಬುದನ್ನು ತಿಳಿಸಲಿ. ನಾವೂ ಅದನ್ನೇ ಮಾಡುತ್ತೇವೆ. ಎಲ್ಲರೂ ಸಕಾರಾತ್ಮಕ ವಾಗಿ ಸ್ಪಂದಿಸಬೇಕು ಎಂದರು. ಇವತ್ತಿನ ಸಂಘರ್ಷ ಕ್ಕೆ ಕಾಂಗ್ರೆಸ್ ಕಾರಣನಾ? ಅರಣ್ಯದ ವಿಚಾರದಲ್ಲಿ ಕೇಂದ್ರದ್ದೂ ಹೊಣೆಗಾರಿಕೆ ಇದೆ. ಕೇಂದ್ರದಲ್ಲಿ ಅರಣ್ಯ ಸಚಿವರಿದ್ದಾರೆ. ಅವರು ಕೇವಲ ಷೋ ಮಾಡಲು ಇರುವುದಾ? ಇವರ ಸರ್ಕಾರ ಬಂದು 12 ವರ್ಷ ಆಯ್ತು. ಕೇಂದ್ರ ಪ್ರಾಯೋಜಿತ ಯೋಜನೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ.

 ಇದನ್ನ ಮಾಜಿ ಸ್ಪೀಕರ್ ಬಿಡುಗಡೆ ಮಾಡಲಿ ಎಂದು ಪೊನ್ನಣ್ಣ ಸವಾಲು ಹಾಕಿದರು. ಕೇರಳಕ್ಕೆ ಅತಿಹೆಚ್ಚು ಅನುದಾನ ಹೋಗಿದೆ. ರಾಜ್ಯಕ್ಕೆ ಎಷ್ಟು ಬಂದಿದೆ ಎಂಬುದನ್ನು ನಮ್ಮಮಹಾನುಭಾವರು ಹೇಳಲಿ. ಆನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರ್ಕಾರದ್ದೂ ಬಹುದೊಡ್ಡ ಜವಾಬ್ದಾರಿ ಇದೆ. ಆನೆ ಯೋಜನೆ ಮತ್ತು ಹುಲಿ ಯೋಜನೆಗೆ 290 ಕೋಟಿ ರೂ ಮೀಸಲಿಟ್ಟಿದೆ. ಇದರಲ್ಲಿ ಶೇ 30. ರಷ್ಟು ಹಣ ಮಾತ್ರ ವಿನಿಯೋಗವಾಗಿದೆ‌ ಎಂದ ಅವರು ಕಳೆದ 25 ವರ್ಷಗಳಿಂದ ಬಿಜೆಪಿಗೆ ಅಧಿಕಾರ ನೀಡಿರುವ ಕೊಡಗಿಗೆ ಕೇಂದ್ರ ಸರ್ಕಾರ ಒಂದೇ ಒಂದು ಪೈಸೆ ಅನುದಾನ ನೀಡಿಲ್ಲ.

ಆನೆ ಮಾನವ ಸಂಘರ್ಷ ತಡಯಲು ಈಗಾಗಲೆ ಉನ್ನತ ಮಟ್ಟದ ಸಭೆ ನಡೆಸಿದ್ದೇನೆ. ರೈಲ್ವೆ ಬ್ಯಾರಿಕೇಡ್, ಸೋಲಾರ್ ಲೈನ್, ಆನೆ ಕಂದಕ ನಿರ್ಮಾಣಕ್ಕೆ 290 ಕೋಟಿ ರೂ ಬೇಕಾಗಿದೆ. ಕೇಂದ್ರ ಸರ್ಕಾರ ದಲ್ಲಿ ಶೇ 70 ರಷ್ಟು ಹಣ ಉಳಿದಿದೆ ಅದನ್ನು ಕೊಡಲಿ ಎಂದು‌ ಪೊನ್ನಣ್ಣ ಹೇಳಿದರು. ಮುಂದಿನ ಐದು ವರ್ಷದಲ್ಲಿ 150 km ರೈಲ್ವೆ ಬ್ಯಾರಿಕೇಡ್, 102 km ಸೋಲಾರ್ ಫೆನ್ಸಿಂಗ್ 23 ಕಿಮಿ ಆನೆ ಕಂದಕ ನಿರ್ಮಾಣಕ್ಕೆ ಯೋಜನೆ ಹಾಕಲಾಗಿದೆ.

ಕಾಡಾನೆ ಸೆರೆ ಹಿಡಿದರೆ ನಮ್ಮಮೇಲೆ ಪರಿಸರವಾದಿಗಳು ಕೇಸ್ ಹಾಕುತ್ತಾರೆ. ಇವೆಲ್ಲವನ್ನ ನಾವು ಬ್ಯಾಲೆನ್ಸ್ ಮಾಡಬೇಕು. ಯಾವುದೇ ಸರ್ಕಾರ ಇರಲಿ ಹೋಗಲಿ, ಆನೆ ಮಾನವ ಸಂಘರ್ಷ ಕೊನೆಯಾಗಬೇಕು. ಪ್ರತಿಭಟನೆ ಸಂದರ್ಭ ಮಹಿಳಾ ಅಧಿಕಾರಿ ಮೇಲೆ ಸೌಜನ್ಯ ಇಲ್ಲದೆ ವರ್ತಿಸಿದ್ದಾರೆ ಪೊನ್ನಣ್ಣ ಟೀಕಿಸಿದ್ದಾರೆ.

ಸರ್ಫೇಸಿ ಕಾಯ್ದೆ ಯಡಿ ಕಾಫಿ ತೋಟ ಹರಾಜು ಸ್ಥಗಿತ ವಿಚಾರ ಇದು ಬಿಜೆಪಿ ಸೃಷ್ಟಿ ಮಾಡಿದ ಸುಳ್ಳು ಸುದ್ದಿ ಎಂದು ಪೊನ್ನಣ್ಣ ಆರೋಪಿಸಿದ್ದಾರೆ. ಇಂದೂ ಕೂಡ ಕಾಫಿ ತೋಟಗಳ ಆನ್ಲೈನ್ ಹರಜು ನಡೆಯುತ್ತಿದೆ. ವಾಣಿಜ್ಯ ಬೆಳೆಯಾದ ಕಾಫಿ ತೋಟಕ್ಕೆ ಸರ್ಫೆಸಿ ಕಾಯ್ದೆ ಅನ್ವಯಿಸಬಹುದು.

 ಈ ಕಾನೂನನ್ನು ಬಾಯ್ಮಾತಿನಲ್ಲಿ ತಿದ್ದಲು ಆಗುವುದಿಲ್ಲ. ಸರ್ಫೆಸಿ ಕಾಯ್ದೆಗೆ ಸಂಸತ್ತಿನಲ್ಲೆ ತಿದ್ದುಪಡಿ ತರಬೇಕಾಗಿದೆ. ನಮ್ಮ ಹುದಿಕೇರಿ ಗ್ರಾಮದಲ್ಲೇ ತೋಟ ಹರಾಜಾಗಿದೆ. ಬಿಜೆಪಿಯವರು ಸುಳ್ಳಿನ ಮಹಲು ಕಟ್ಟುವವರು ಎಂದು ಪೊನ್ನಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0