ಬೈತೂರಪ್ಪ ವಾರ್ಷಿಕ ಉತ್ಸವ; ನಾಡಿನ ಎತ್ತ್ ಪೂರಾಟ್ ಹಾಗೂ ಅಕ್ಕಿ ಅಳೆಯುವ ಶಾಸ್ತ್ರ
ವಿರಾಜಪೇಟೆ: ಕೊಡಗಿನ ಶ್ರೀ ಆದಿ ಬೈತೂರಪ್ಪ, ಉಳಿಕ್ಕಲ್‍ನ ವಾಯತ್ತೂರು ಕಾಲಿಯಾರ್ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವದ ಸಲುವಾಗಿ ಕೊಡಗಿನಿಂದ ನಾಡಿನ ಜನರ ಎತ್ತು ಪೋರಾಟ್ ಹಾಗೂ ಅಕ್ಕಿ ಅಳೆಯುವ ಶಾಸ್ತ್ರ ಶುಕ್ರವಾರ ನಡೆಯಿತು. ಊಟು ಹಬ್ಬದ ಅಕ್ಕಿಯನ್ನು ಕೊಡಗಿನಿಂದ ದೇವಸ್ಥಾನಕ್ಕೆ ತರಲಾಯಿತು.
ದೇವಸ್ಥಾನದಲ್ಲಿ ಅಕ್ಕಿ ಹಾಗೂ ಎತ್ತುಗಳೊಂದಿಗೆ ಆಗಮಿಸಿದ ಕೊಡವರನ್ನು ಸಂಪ್ರದಾಯದಂತೆ ಬರಮಾಡಿಕೊಂಡರು. ಬಳಿಕ ಕೊಡಗಿನಿಂದ ತಂದ ಅಕ್ಕಿಯನ್ನು ಅಳೆಯಲಾಯಿತು.
ಈ ಬಾರಿ ಹೆಚ್ಚು ಅಕ್ಕಿ ದೇವಸ್ಥಾನಕ್ಕೆ ಎತ್ತ್ ಪೋರಾಟ್ ಮೂಲಕ ತಲುಪಿತು. ಎಂದಿನಂತೆ ಹಬ್ಬದ ಪ್ರಯುಕ್ತ ಶ್ರೀ ಭೂತಬಲಿ, ವಿಶೇಷ ಪೂಜೆ, ನೈವೇದ್ಯ, ಪುಗ್ಗೆರ ಮನೆಯವರ ಪೂಜಾ ಕೈಂಕರ್ಯಗಳು, ನಾಡಿನವರ ಪೂಜಾ ಕೈಂಕರ್ಯಗಳು, ಕೊಡವರ ಸಾಂಪ್ರಾದಾಯಿಕ ದುಡಿಕೊಟ್ಟ್ ಪಾಟ್, ಸಂಜೆ ದೀಪಾಂಜಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದೇವಾಲಯದ ತಕ್ಕರಾದ ಪುಗ್ಗೇರ ಪೊನ್ನಪ್ಪ, ಭಕ್ತ ಜನ ಸಂಘದ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು, ಟ್ರಸ್ಟಿಗಳು, ಪುಗ್ಗೆರ ರಂಜಿ, ಪುಗ್ಗೇರ ನಂದ, ಶಿವಕುಮಾರ್, ಸ್ಥಳೀಯ ಹಾಗೂ ಕೊಡಗಿನ ಭಕ್ತಾಧಿಗಳು, ದೇವಾಲಯದ ಪ್ರದಾನ ಅರ್ಚಕರು, ಕೋಮರತಚ್ಚನ್ ಸೇರಿದಂತೆ ಇತರರು ಹಾಜರಿದ್ದರು.
ವರದಿ:ರಜಿತ ಕಾರ್ಯಪ್ಪ
What's Your Reaction?
Like
0
Dislike
0
Love
0
Funny
0
Angry
0
Sad
1
Wow
0
