ಹಿಂದೂ ಸಂಗಮ‌ ಕಾರ್ಯಕ್ರಮ ಪ್ರಚಾರದ ವೇಳೆ ಹಲ್ಲೆ; ಆರೋಪಿಗಳ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲು; ಓರ್ವ ಆರೋಪಿ ಬಂಧನ

Feb 27, 2026 - 20:38
Feb 27, 2026 - 23:10
 0  2.1k
ಹಿಂದೂ ಸಂಗಮ‌ ಕಾರ್ಯಕ್ರಮ ಪ್ರಚಾರದ ವೇಳೆ ಹಲ್ಲೆ; ಆರೋಪಿಗಳ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲು; ಓರ್ವ ಆರೋಪಿ ಬಂಧನ

ನಾಪೋಕ್ಲು; ಬಿಗುವಿನ ವಾತವರಣ ಏರ್ಪಟ್ಟಿದ್ದು ಇದೀಗ ಹಿಂದೂ ಪರ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಕೊಲೆ ಯತ್ನ ಮೊಕದ್ದಮೆ ದಾಖಲು ಪಡಿಸಲಾಗಿ, ಅವರನ್ನು ಬಂಧಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

 ಇಂದು ಗೌತಮ್ ಎಂಬುವರು ಅಂಗಡಿ ಒಂದರಲ್ಲಿ ಸಾಮಗ್ರಿಗಳನ್ನು ತೆಗೆಯಲು ಹೋದಾಗ, ಅಂಗಡಿಯಲ್ಲಿದ್ದ ಹಂಸ ಅವರ ಪುತ್ರ ಸುಹೇಲ್ ಎಂಬಾತ ಗೌತಮ್ಮನ ಜೀಪಿನಲ್ಲಿ ಇದ್ದ ಕೇಸರಿ ಧ್ವಜವನ್ನು ಹಾಕಿರುವ ಬಗೆ ಪ್ರಶ್ನಿಸಿದಾಗ, ಹಿಂದೂ ಸಂಗಮದ ಬಗ್ಗೆ ಪ್ರಚಾರ ಪಡಿಸಲು ಎಂದು ಹೇಳಿದ ಕ್ಷಣ ಅಲ್ಲೇ ಇದ್ದ ಕಬ್ಬಿಣದ ರಾಡ್ ನಿಂದ ಗೌತಮಗೆ ಹೊಡೆದಿದ್ದು, ನಂತರ ಅಲ್ಲೇ ಇದ್ದ ಇಸ್ಮಾಯಿಲ್ ಅವರ ಪುತ್ರ ಸಿದ್ದಿಕ್, ನಾಫಿ , ರಾಶಿದ್ ಎಂಬುವರು ಬ್ಯಾಟ್ ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಿ ಅವ್ಯಾಚ ಶಬ್ದಗಳಿಂದ ಬೈದಿದ್ದಾರೆ ಎಂದು ದೂರು ನೀಡಲಾಗಿದೆ.

ನಂತರ ಹಲ್ಲೆ ನಡೆಸಿದ ಆರೋಪಿಗಳು ಕೆಂಪು ಬಣ್ಣದ ಕೆ. ಎ.53..52 72 ಸಂಖ್ಯೆಯ ಕಾಡಿನಲ್ಲಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಆರೋಪಿಗಳ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲು ಪಡಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ಪ್ರತಿಭಟನೆಕಾರರಿಗೆ ಮಾಹಿತಿ ನೀಡಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು. ನಾಳೆ ಬಲ್ಲಮಾವಟಿಯಲ್ಲಿ ನಡೆಯುವ ಹಿಂದೂ ಸಂಗಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಸಿದ್ಧತೆ ಜಿಲ್ಲಾ ಪೊಲೀಸ್ ಕೈಗೊಂಡಿದೆ.

What's Your Reaction?

Like Like 2
Dislike Dislike 0
Love Love 0
Funny Funny 4
Angry Angry 2
Sad Sad 6
Wow Wow 1