ಮಡಿಕೇರಿಯಲ್ಲಿ ಬ್ಯಾರಿ ಸಮ್ಮೇಳನ;ಪೂರ್ವಭಾವಿ ಸಭೆ

Feb 17, 2026 - 12:05
 0  367
ಮಡಿಕೇರಿಯಲ್ಲಿ ಬ್ಯಾರಿ ಸಮ್ಮೇಳನ;ಪೂರ್ವಭಾವಿ ಸಭೆ

ಮಡಿಕೇರಿ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್‌ ಟ್ರಸ್ಟ್‌ನ ಸಹಯೋಗದೊಂದಿಗೆ ಏಪ್ರಿಲ್‌ 28ರಂದು ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ ನಡೆಯಲಿದೆ.

 ಮಡಿಕೇರಿಯಲ್ಲಿ ನಡೆದ ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್‌ ಟ್ರಸ್ಟ್‌ನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಸಮ್ಮೇಳನದ ಅಂಗವಾಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್‌ ಟ್ರಸ್ಟ್‌ನ ಉಪಾಧ್ಯಕ್ಷ ಎಂ.ಎ. ನಾಸಿರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮರ್‌ ಯು.ಹೆಚ್.‌ ಸಮ್ಮೇಳನದ ಸ್ವರೂಪ ಮತ್ತು ಹಮ್ಮಿಕೊಳ್ಳಬಹುದಾಗ ಕಾರ್ಯಕ್ರಮಗಳ ವಿವರ ನೀಡಿದರು.

ಕೊಡಗು ಜಿಲ್ಲಾ ಬ್ಯಾರಿ ವೆಲ್ಫೇರ್‌ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಬಿ.ಎ. ಶಂಷುದ್ದೀನ್‌ ಮಡಿಕೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಟ್ರಸ್ಟ್‌ನ ನಿಕಟಪೂರ್ವ ಅಧ್ಯಕ್ಷ ಎಸ್.ಪಿ. ಮುನೀರ್‌ ಅಹ್ಮದ್‌ ಸ್ವಾಗತಿಸಿದರು. ಅ

ಬ್ದುಲ್ಲಾ ಧನ್ಯವಾದವಿತ್ತರು. ಎಂ.ಯು. ಖಾಲಿದ್‌, ಅಬ್ದುಲ್‌ ರಹಿಮಾನ್‌, ಅಹ್ಮದ್‌ ಕಬೀರ್‌, ಅಶ್ರಫ್‌, ತಾಜುದ್ದೀನ್‌, ಕಲೀಂ ಅಹ್ಮದ್‌, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಮುಹಮ್ಮದ್‌ ಶರೀಫ್‌ ಉಪಸ್ಥಿತರಿದ್ದರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0