ವಿದೇಶ ಪ್ರಯಾಣಕ್ಕೆ ಶುಭ ಹಾರೈಕೆ

Apr 6, 2026 - 14:50
 0  87
ವಿದೇಶ ಪ್ರಯಾಣಕ್ಕೆ  ಶುಭ ಹಾರೈಕೆ

ಏಪ್ರಿಲ್ 06 ರಂದು ಸೋಮವಾರ ಉನ್ನತ ಶಿಕ್ಷಣಕ್ಕಾಗಿ ಮೂರು ವರ್ಷಗಳ ಅವಧಿಗೆ ಜಪಾನ್ ನ ಟೋಕಿಯ ನಗರಕ್ಕೆ ತೆರಳುತ್ತಿರುವ ಅಮ್ಮತ್ತಿ ಹೋಬಳಿ ಸಿದ್ದಾಪುರ ಕರಡಿಗೋಡು ಗ್ರಾಮದ ಮಿತ್ತೂರು ಕಾರಿಯಪ್ಪ ಮತ್ತು ಪುಷ್ಪಾವತಿರವರ ಮೊಮ್ಮಗ ಮತ್ತು ಅಬಕಾರಿ ಇಲಾಖೆಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಪ್ರದೀಪ್( ಪವನ್) ಮತ್ತು ಹಾಸನದ ರಾಜೀವ ಹಾಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಡಾ ಶಿಲ್ಪಾರವರ ಪುತ್ರ ಪರಿಣ್ ಕಾರ್ಯಪ್ಪ , ಇವರ ವಿದೇಶ ಪ್ರಯಾಣಕ್ಕೆ ದೊಡ್ಡಪ್ಪ ಪ್ರಸಾದ್ ದೊಡ್ಡಮ್ಮ ಸವಿತ ಸಹೋದರ ಹಿರೈನ್, ಸಹೋದರಿಯರಾದ ಜನ್ಯ ನಿಧಿ ಹಾಗೂ ತಾತ ಕುಯ್ಯಮುಡಿ ನಾರಾಯಣ ಅವ್ವ ದೇವಕ್ಕಿ ಮಾಮ, ಅತ್ತೆ,ಚಿಕ್ಕಪ್ಪ ಚಿಕ್ಕಮ್ಮ,ಮಕ್ಕಳು ಹಾಗೂ ಮಿತ್ತುರು ಕುಟುಂಬಸ್ಥರು ಶುಭ ಹಾರೈಸಿದ್ದಾರೆ.

ಈ ವಿದ್ಯಾರ್ಥಿಯು ಭಾರತ ಸರಕಾರವು ನಡೆಸಿದ MEXT scholarship ಪರೀಕ್ಷೆಯಲ್ಲಿ ತೇರ್ಗಡೆಯಾಗಿ ದೇಶದ ಒಟ್ಟು 12 ಜನ ವಿದ್ಯಾರ್ಥಿಗಳಲ್ಲಿ ಒಬ್ಬನ್ನಾಗಿಯೂ ಕರ್ನಾಟಕದ 3 ಜನ ವಿದ್ಯಾರ್ಥಿಗಳಲ್ಲಿ ಒಬ್ಬನ್ನಾಗಿಯೂ ಗೌಡ ಜನಾಂಗದ ಏಕೈಕ ವಿದ್ಯಾರ್ಥಿಯಾಗಿದ್ದಾರೆ. ಇವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು‌ ಕುಟುಂಬಸ್ಥರು ‌ಹಾರೈಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0