ಭಾರತೀಯ ಜನತಾ ಪಾರ್ಟಿ ಜಮ್ಮಾಬಾಣೆ ಸಮಸ್ಯೆ ತೀರ್ಪಿನ ಬಗ್ಗೆ ಅಪಾರ್ಥ ಮಾಡಿಕೊಂಡಿಲ್ಲ, ವಿಚಾರದ ನೈಜ್ಯತೆಯನ್ನು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದೆ; ನೆಲ್ಲೀರ ಚಲನ್

Jan 20, 2026 - 16:50
Jan 20, 2026 - 16:54
 0  489
ಭಾರತೀಯ ಜನತಾ ಪಾರ್ಟಿ ಜಮ್ಮಾಬಾಣೆ ಸಮಸ್ಯೆ ತೀರ್ಪಿನ ಬಗ್ಗೆ ಅಪಾರ್ಥ ಮಾಡಿಕೊಂಡಿಲ್ಲ, ವಿಚಾರದ ನೈಜ್ಯತೆಯನ್ನು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದೆ; ನೆಲ್ಲೀರ ಚಲನ್

ಗೋಣಿಕೊಪ್ಪ: ಭಾರತೀಯ ಜನತಾ ಪಾರ್ಟಿ ಜಮ್ಮಬಾಣೆ ಸಮಸ್ಯೆ ತೀರ್ಪಿನ ಬಗ್ಗೆ ಅಪಾರ್ಥ ಮಾಡಿಕೊಂಡಿಲ್ಲ,ವಿಚಾರದ ನೈಜ್ಯತೆಯನ್ನು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲೀರ ಚಲನ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಜಮ್ಮಬಾಣೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ನಿರಂತರ ಹೋರಾಟವನ್ನು ಬಿಜೆಪಿ ಪಕ್ಷ ನಡೆಸಿದೆ.ಈ ಹಿನ್ನೆಲೆಯಲ್ಲಿ ಅದರ ಸಾಧಕ ಬಾದಕಗಳ ಪೂರ್ಣ ಮಾಹಿತಿ ಬಿಜೆಪಿ ಪಕ್ಷಕ್ಕೆ ಇದೆ.

ಈ ವಿಚಾರವನ್ನು ಜನರಲ್ಲಿ ಬೇರೆಯ ರೀತಿಯ ಭಾವನೆ ಮೂಡಿಸುವ ಪ್ರಯತ್ನ ಕಾಂಗ್ರೆಸ್ಸಿನ ಕೆಲವರಿಂದ ನಡೆಯುತ್ತಿದೆ.ಈ ಕಾರಣಕ್ಕೆ ಮಾಜಿ ಶಾಸಕರುಗಳು ಸತ್ಯವನ್ನು ತಿಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಕ್ತ ಚರ್ಚೆ ನಡೆಸಲು ಕೂಡ ಶಾಸಕರು ನೀಡಿದ ಅಹ್ವಾನದಂತೆ ಒಪ್ಪಿಕೊಂಡಿದ್ದಾರೆ. ಆದರೆ ,ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಸತ್ಯ ವಿಚಾರವನ್ನು ಹೊರಗಿಡಲು ಪ್ರಯತ್ನಿಸುತ್ತಿದ್ದಾರೆ, ಇದು ದಿಕ್ಕು ತಪ್ಪಿಸುವ ನಡೆಯಾಗಿದೆ.

ಅದರ ಫಲವಾಗಿಯೇ ಅಂದು ವಿದಾಯಕ ಮಂಡನೆ ಸಂದರ್ಭ ಬಂದಾಗ ಸಭಾಪತಿ ಸ್ಥಾನವನ್ನು ತ್ಯಜಿಸಲು ಮಾಜಿ ಶಾಸಕ ಕ. ಜಿ ಬೋಪಯ್ಯ ಮುಂದಾಗಿದ್ದರು.ವಿಚಾರವನ್ನು ಮಂತ್ರಿಗಳಾಗಿದ್ದ ಅಪ್ಪಚ್ಚು ರಂಜನ್ ಅವರು ಪ್ರಸ್ತಾಪಿಸಿದರು.

ವಿಚಾರ ಅಂಗೀಕಾರಕ್ಕೆ ರಾಜಪಾಲರ ಬಳಿ ಹೋದಾಗ ಸಹಿ ಮಾಡದೆ ಬಾಕಿ ಉಳಿಸಿಕೊಂಡು ಸಮಸ್ಯೆಯ ಪರಿಹಾರಕ್ಕೆ ಸುಧೀರ್ಘವಾಗಿಸಿದ್ದು ಯಾರು ಎಂದು ಪ್ರಶ್ನಿಸಿದ ಅವರು, ಹೈಕೋರ್ಟಿನಲ್ಲಿ ಪಿಟಿಸನ್ ದಾಖಲು ಮಾಡಿದವರು ಯಾರು?

ಇಂದಿನ ಶಾಸಕರ ಕಛೇರಿಯಲ್ಲಿದ್ದ ವಕೀಲರು ಮತ್ತುಅವರ ಆಪ್ತ ವಲಯದ ವಕೀಲರುಗಳು ಸಹ ಅದರಲ್ಲಿ ತೊಡಗಿಸಿಕೊಂಡಿದ್ದರು ಎಂಬುವುದು ಸತ್ಯವಾಗಿದೆ.

ಸದನದಲ್ಲಿ ಮಂಡನೆಯಾದರೂ ವಿಚಾರವನ್ನು ಜಾರಿಗೊಳಿಸುವಲ್ಲಿ ಏಕೆ ನಿಧಾನಗತಿ ಅನುಕರಣೆಯಾಯಿತು.ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಜವಾಬ್ದಾರಿ ಹೊಂದಿದ್ದೀರಿ ಆ ಸಂದರ್ಭದಲ್ಲಿಯಾದರೂ ತಮ್ಮ ಬಾಣೆ ಸಮಸ್ಯೆಯನ್ನು ಬಗೆಹರಿಸಲು ಏಕೆ ಮುಂದಾಗಲಿಲ್ಲ? ಅಂದು ಈ ವಿಚಾರವಾಗಿ ಆಸಕ್ತಿ ಹೊಂದಿದ್ದರೆ ಇಂದಿನವರೆಗೆ ಈ ಸಮಸ್ಯೆ ಮುಂದುವರೆಯುತ್ತಿರಲಿಲ್ಲ.

 ಪಟ್ಟೆದಾರ ಹೆಸರಿಗೆ ತಿದ್ದುಪಡಿ ತಂದು ಇಡೀ ಸಮಸ್ಯೆಯನ್ನು ತಾವೇ ಪರಿಹಾರ ಮಾಡಿದ್ದೀವಿ ಎಂದು ಬೀಗುತ್ತಿರುವುದು ಸರಿಯಾದ ವಿಚಾರವೇ ಎಂದು ಕೇಳಿದ್ದಾರೆ.

ಪೂರ್ಣ ಸಮಸ್ಯೆಯನ್ನು ನೀವೇ ಬಗೆಹರಿಸಿದ್ದೀರಾ ಎಂದು ಹೇಳುತ್ತಿರುವುದು ಸತ್ಯವೇ ಆಗಿದ್ದರೆ ನೀವೇ ಸವಾಲು ಒಡ್ಡಿದಂತೆ ಮುಕ್ತ ಚರ್ಚೆಗೆ ವೇದಿಕೆ ನಿರ್ಮಿಸಿ ಈ ಮೂಲಕ ಸತ್ಯಗಳನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುವ ಈ ವಿಚಾರವಾಗಿ ಬಿಜೆಪಿ ತನ್ನ ದಿಟ್ಟ ನಿಲುವನ್ನೇ ಹೊಂದಿದೆ ಎಂದು ಸವಾಲೊಡ್ಡಿದ್ದಾರೆ.

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0