Kodagu

ಮರಗೋಡುವಿನಲ್ಲಿ ಆಟೋ ಚಾಲಕರ ಸಂಘದಿಂದ ರಕ್ತದಾನ ಶಿಬಿರ

admincoorgdaily

ಮರಗೋಡುವಿನಲ್ಲಿ ಆಟೋ ಚಾಲಕರ ಸಂಘದಿಂದ ರಕ್ತದಾನ ಶಿಬಿರ

ಮರಗೋಡು; ಆಟೋ ಮಾಲೀಕರ ಹಾಗೂ ಚಾಲಕರ ಸಂಘ ಮರಗೋಡು. ಕೊಡಗು ಬ್ಲಡ್ ( ರಿ ) ಮಡಿಕೇರಿ, ಹಾಗೂ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ ಮಡಿಕೇರಿ,ಸ್ವಾಮಿ ವಿವೇಕಾನಂದ ಯುವಕ ಸಂಘ ಮರಗೋಡು ಸಭಾಂಗಣದಲ್ಲಿ ಯಶಸ್ವಿಯಾಗಿ ರಕ್ತಾದನ ಶಿಬಿರ ನಡೆಯಿತು.

 ಶಿಬಿರದಲ್ಲಿ ಒಟ್ಟು 40 ಯುನಿಟ್ ರಕ್ತ ಸಂಗ್ರಹಣೆ ಮಾಡಲಾಯಿತು. ಶಿಬಿರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಕೊಡಗು ಡಿ. ಸಿ ಸಿ ಬ್ಯಾಂಕ್ ನಿರ್ದೇಶಕರು ಹಾಗೂ ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕಾಂಗೀರ ಸತೀಶ್,ರಕ್ತದಾನದಂತಹ ಪುಣ್ಯ ಕಾರ್ಯ ಬೇರೊಂದಿಲ್ಲ.ನಾನು ರಕ್ತ ಮಾಡುತ್ತಾ ಬಂದಿದ್ದೇನೆ.ಆಟೋ ಚಾಲಕರು ಮಾಲೀಕರು ಏರ್ಪಡಿಸಲಾದ ಈ ಶಿಬಿರ ಅತ್ಯುತ್ತಮ. ಆಟೋಚಾಲನೆ ಕೂಡ ಸೇವೆಯ ಒಂದು ಭಾಗವಾಗಿದ್ದು. ಮುಂದಿನ ದಿನದಲ್ಲಿ ನಿಮ್ಮಿಂದ ಹೆಚ್ಚು ಸಮಾಜಮುಖಿ ಕಾರ್ಯಗಳು ಹಮ್ಮಿಕೊಳ್ಳುವಂತಾಗಲಿ,ಇದಕ್ಕೆ ತಾನು ಸಹಕಾರ ನೀಡುವದಾಗಿ ತಿಳಿಸಿದರು.

25ನೇ ಬಾರಿ ರಕ್ತ ದಾನ ಮಾಡಿದರು ಕಾರ್ಯಕ್ರಮ ಅಧ್ಯಕತೆಯನ್ನು ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ನಂದ ಕುಮಾರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರಾದ ಮುಕ್ಕಾಟಿರ ಚಿದಂಬರ,ಹಾಗೂ ಬಳಪದ ಪೂವಯ್ಯ ಹಾಜರಿದ್ದರು.

 ವೇದಿಕೆಯಲ್ಲಿ ಆಟೋ ಚಾಲಕರ ಮಾಲೀಕರ ಸಂಘದ ಉಪಾಧ್ಯಕ್ಷರಾದ ಪ್ರದೀಪ ಖಜಾಂಚಿ ರಂಜು,ಕೊಡಗು ಬ್ಲಡ್ ಡೋನಾರ್ಸ್ ಕಾರ್ಯದರ್ಶಿ ಮೈಕಲ್ ವೇಗಸ್, ನಿರ್ದೇಶಕರಾದ ಲೀಲಾವತಿ, ರಕ್ತನಿಧಿ ಕೇಂದ್ರ ಅಧಿಕಾರಿಗಳಾದ ಕರುಂಬಯ್ಯ, ಆಟೋ ಚಾಲಕರು ಹಾಗೂ ಮಾಲೀಕರು, ಗ್ರಾಮಸ್ಥರು ರಕ್ತ ನಿಧಿ ಕೇಂದ್ರ ಸಿಬ್ಬಂದಿಗಳು ಹಾಜರಿದ್ದರು. ಕೊಡಗು ಬ್ಲಡ್ ಡೋನಾರ್ಸ್ ಅಧ್ಯಕ್ಷರಾದ ಪಿ ಪಿ ಸುಕುಮಾರ್ ಸ್ವಾಗತಿಸಿ,ನಿರೂಪಿಸಿ,ವಂದಿಸಿದರು.