ಪತ್ರಕತ೯ರ ಕ್ಷೇಮಾಭಿವೖದ್ದಿ ನಿಧಿಗಾಗಿ ಸಹಾಯಾಥ೯ ಪಂದ್ಯಾಟ; ನಾಳೆ ಮಡಿಕೇರಿಯಲ್ಲಿ ಪತ್ರಕತ೯ರ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾವಳಿ
ಮಡಿಕೇರಿ ಜ. 17 - ಕೊಡಗು ಪತ್ರಕತ೯ರ ಸಂಘ ಮತ್ತು ಪತ್ರಕತ೯ರ ಕ್ಷೇಮಾಭಿವೖದ್ದಿ ಸಮಿತಿ ವತಿಯಿಂದ ಜ.18 ರಂದು ಭಾನುವಾರ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಕ್ರಾಂತಿ ಸಂಭ್ರಮ ಕ್ರಿಕೆಟ್ ಪಂದ್ಯಾಟ ಆಯೋಜಿತವಾಗಿದೆ. ಎಂದು ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮತ್ತು ಕ್ಷೇಮಾಭಿವೖದ್ದಿ ಸಮಿತಿ ಅಧ್ಯಕ್ಷ ಜಿ.ವಿ. ರವಿಕುಮಾರ್ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕ್ರಿಕೆಟ್ ಪಂದ್ಯಾಟವನ್ನು ಶಾಸಕರಾದ ಎ.ಎಸ್. ಪೊನ್ನಣ್ಣ, ಎಂ.ಪಿ. ಸುಜಾಕುಶಾಲಪ್ಪ ಉದ್ಘಾಟಿಸಲಿದ್ದಾರೆ. ಕನಾ೯ಟಕ ಸಕಾ೯ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಮೆಹರೋಜ್ ಖಾನ್ ಪಾಲ್ಗೊಳ್ಳಲಿರುವ ಸಭಾ ಕಾಯ೯ಕ್ರಮವನ್ನು ಸಮಾಜಸೇವಕರು, ಉದ್ಯಮಿಗಳಾದ ನಾಪಂಡ ಮುತ್ತಪ್ಪ ನಾಪಂಡ ಮುದ್ದಪ್ಪ ಉದ್ಘಾಟಿಸಲಿದ್ದಾರೆ. ಕ್ರೀಡಾಪಟುಗಳ ಜೆಸಿ೯ಯನ್ನು ಉದ್ಯಮಿ, ಸಮಾಜಸೇವಕ ಎಡಕೇರಿ ಪ್ರಸನ್ನ ಅನಾವರಣಗೊಳಿಸಲಿದ್ದಾರೆ. ಕೊಡಗು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ನಗರಸಭಾಧ್ಯಕ್ಷೆ ಕಲಾವತಿ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನಸಭೆಯ ಮಾಜಿ ಸಬಾಧ್ಯಕ್ಷ ಕೆ.ಜಿ.ಬೋಪಯ್ಯ, ಕನಾ೯ಟಕ ಕ್ರಿಕೆಟ್ ಅಕಾಡೆಮಿ ಸಂಚಾಲಕ ಚೇನಂಡ ಪೃಥ್ವಿ ದೇವಯ್ಯ ಹೈಕೋಟ್೯ನ ಹಿರಿಯ ವಕೀಲ ಹಾಗೂ ಕೆಪಿಸಿಸಿ ಪ್ರಧಾನ ಕಾಯ೯ದಶಿ೯ ಎಚ್.ಎಸ್. ಚಂದ್ರಮೌಳಿ, ಉದ್ಯಮಿ ಕೇಶವಪ್ರಸಾದ್ ಮುಳಿಯ, ಮಾಜಿ ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ ಸಮಾಜಸೇವಕ ಹರಪಳ್ಳಿ ರವೀಂದ್ರ ವೀರಾಜಪೇಟೆಯ ಉದ್ಯಮಿ ಶೇಖ್ ಇಮ್ರಾನ್ ಸಿದ್ದಿಕಿ, ಮಡಿಕೇರಿ ನಗರಾಭಿವೖದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಯುವಜನ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಉಪನಿದೇ೯ಶಕಿ ವಿಸ್ಮಯಿ ಚಕ್ರವರ್ತಿ , ಕೆ.ನಿಡುಗಣೆ ಗ್ರಾ.ಪಂ.ಸದಸ್ಯ ಜಾನ್ಸನ್ ಪಿಂಟೋ,,ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ಪಾಲ್ಗೊಳ್ಳಲಿದ್ದಾರೆ.
ಬಹುಮಾನ ವಿತರಣಾ ಸಮಾರಂಭ ;
ಸಂಜೆ 4 ಗಂಟೆಗೆ ಆಯೋಜಿತ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾಯ೯ಕ್ರಮದಲ್ಲಿ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ, ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್, ಕೊಡಗು ಪತ್ರಕತ೯ರ ಸಂಘದ ಗೌರವ ಸಲಹೆಗಾರರಾದ ಟಿ. ಪಿ. ರಮೇಶ್, ಬಿ. ಜಿ. ಅನಂತಶಯನ, ಸಂಘದ ಸ್ಥಾಪಕಾಧ್ಯಕ್ಷರಾದ ಎಸ್.ಎ.ಮುರಳೀಧರ್, ಕೊಡಗು ಅಭಿವೖದ್ದಿ ಸಮಿತಿಯ ಜಿಲ್ಲಾ ಸಂಘಟನಾ ಕಾಯ೯ದಶಿ೯ ಎಂ.ಎಂ. ದಾವುದ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ, ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ಖಜಾಂಜಿ ಟಿ. ಕೆ. ಸಂತೋಷ್, ಕ್ಷೇಮಾಭಿವೖದ್ದಿ ಸಮಿತಿಯ ಪ್ರಧಾನ ಕಾಯ೯ದಶಿ೯ ಅರುಣ್ ಕೂರ್ಗ್, ಸಂಘದ ಉಪಾಧ್ಯಕ್ಷ ಕವನ್ ಕಾಯ೯ಪ್ಪ, ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಸೋಮಾವಾರಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ಹೆಚ್.ಎಸ್. ಹರೀಶ್ ಕುಮಾರ್, ವೀರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಧೋಷ್ ಪೂವಯ್ಯ ,, ಪೊನ್ನಂಪೇಟೆ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷ ರಾಜ್ ಕುಶಾಲಪ್ಪ, ಪಾಲ್ಗೊಳ್ಳಲಿದ್ದಾರೆ.
ಪ್ರದಶ೯ನ ಪಂದ್ಯ;
ಸಂಕ್ರಾಂತಿ ಸಂಭ್ರಮದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ತಂಡದ ನಡುವೆ ಪ್ರದಶ೯ನ ಪಂದ್ಯಾಟ ಆಯೋಜಿತವಾಗಿದೆ. ಅಂತೆಯೇ ಕೊಡಗು ಪತ್ರಕತ೯ರ ಸಂಘದ ಸದಸ್ಯರ ಸಮೖದ್ದಿ, ಸುಗ್ಗಿ, ಸಿರಿ, ಮತ್ತು ಹೊನ್ನು ತಂಡಗಳ ನಡುವೆ ಕ್ರಿಕೆಟ್ ಸ್ಪಧೆ೯ ಆಯೋಜಿತವಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.