ಚೆಟ್ಟಳ್ಳಿ; ಬಾ ಅಂಗಡಿಗೆ ಹೋಗಿ ಬರೋಣ ಎಂದು ಕರೆದುಕೊಂಡು ಹೋಗಿ ಕೊಲೆ ಮಾಡಿದ ವ್ಯಕ್ತಿ; ಚೆಟ್ಟಳ್ಳಿಯ ಕೋಗಿಲೆಹಳ್ಳ ಎಸ್ಟೇಟ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದದ್ದೇನು ಗೊತ್ತಾ!
ಚೆಟ್ಟಳ್ಳಿ: ಸಮೀಪದ ಕಾನನಕಾಡು ಕೋಗಿಲೆಹಳ್ಳ ಎಸ್ಟೇಟ್ ನಲ್ಲಿ ಸೋಮವಾರ ಮಧ್ಯಾಹ್ನ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಒರಿಸ್ಸಾ ಮೂಲದ ವ್ಯಕ್ತಿಯ ಕೊಲೆಯಾಗಿದೆ. ಅಶ್ವಿನಾಗೊಮಾಗೊ(30) ಮೃತಪಟ್ಟ ವ್ಯಕ್ತಿ. ಅದೇ ಎಸ್ಟೇಟ್ ನ ಲೈನ್ ಮನೆಯಲ್ಲಿ ವಾಸಿಸುತ್ತಿದ್ದ ಮಹೇಶ್ ಕೊಲೆ ಮಾಡಿರುವ ಆರೋಪಿ.
ಅಶ್ವಿನಾಗೊಮಾಗೊ ಅವರ ಪತ್ನಿ ಸುಂಬಾರಿಗಮಂಗೊ ಅವರು ನೀಡಿದ ದೂರಿನ್ವಯ ಆರೋಪಿ ಮಹೇಶ್ ಅವರ ಮೇಲೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ 36|2026. ಕಲಂ 103(1) BNS -2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಮಹೇಶ್ ಪೊಲೀಸರಿಗೆ ಶರಣಾಗಿದ್ದಾನೆ.
ಘಟನೆಯ ವಿವರ; ಪಿರ್ಯಾದಿದಾರರ ದೊಡ್ಡಪ್ಪನ ಮಗಳು ಕುಮಾರಿ ಹಾಗೂ ಆಕೆಯ ಪತಿ ಅಶ್ವಿನಾಗೊಮಾಗೊ ರವರು 13 ವರ್ಷಗಳ ಹಿಂದೆ ಕೆಲಸಕ್ಕೆಂದು ಕೊಡಗು ಜಿಲ್ಲೆಯ ಕೋಗಿಲೆಹಳ್ಳ ಎಸ್ಟೇಟ್ ಗೆ ಬರುವಾಗ ಅವರ ಜೊತೆ ಪಿರ್ಯಾದಿಯವರನ್ನು ಕರೆದುಕೊಂಡು ಬಂದಿರುತ್ತಾರೆ.
ಕುಮಾರಿರವರಿಗೆ ಇಬ್ಬರು ಮಕ್ಕಳಿದ್ದು ಎರಡು ವರ್ಷಗಳ ವರೆಗೆ ಅಶ್ವಿನಾಗೊಮಾಗೊ ಜೊತೆ ಸಂಸಾರ ಮಾಡಿಕೊಂಡಿದ್ದು ನಂತರ ಮಗಳನ್ನು ಕರೆದುಕೊಂಡು ಶ್ರೀನಿವಾಸ್ ಎಂಬುವವರ ಜೊತೆ ಹೋಗಿರುತ್ತಾರೆ. ಕುಮಾರಿ ಶ್ರೀನಿವಾಸ್ ರವರೊಂದಿಗೆ ಹೋದ ನಂತರ ಪಿರ್ಯಾದಿಯವರು ಅಶ್ವಿನಾಗೊಮಾಗೊ ರವರ ಮೊದಲನೇ ಹೆಂಡತಿ ಕುಮಾರಿಯ ರವರ ಮಗ ವಿನೋದ್‌ರವರ ಜೊತೆ ಕೋಗಿಲೆ ಹಳ್ಳ ಎಸ್ಟೇಟ್‌ನಲ್ಲಿ ವಾಸಮಾಡಿಕೊಂಡು ಕೂಲಿಕೆಲಸ ಮಾಡಿಕೊಂಡಿರುತ್ತಾರೆ.
ಪಿರ್ಯಾದಿ ಹಾಗೂ ಅಶ್ವಿನಾಗೊಮಾಗೊ ರವರು 11 ವರ್ಷಗಳಿಂದ ಸಂಸಾರ ಮಾಡಿಕೊಂಡಿದ್ದು ಒಂದು ಹೆಣ್ಣುಮಗು ಇರುತ್ತದೆ. ಅವರು ವಾಸಮಾಡುವ ಲೈನ್ ಮನೆಯಲ್ಲಿ ಒಟ್ಟು ಆರು ಲೈನ್ ಮನೆಗಳಿದ್ದು ಪಿಯಾದಿರವರ ಲೈನ್ ಮನೆಯಿಂದ ಎರಡು ಲೈನ್ ಮನೆಯ ನಂತರ ಮಹೇಶ್ ಎಂಬುವವರು ಇವರ ತಮ್ಮಂದಿರಾದ ನಾಗೇಶ್, ಸಂದೇಶ್ ತಾಯಿ ಶಾಂತಮ್ಮ ರವರ ಜೊತೆ ಕೂಲಿಕೆಲಸ ಮಾಡಿಕೊಂಡಿರುತ್ತಾರೆ. ಸಂದೇಶ್ ಶಾಲೆಗೆ ಹೋಗುತ್ತಿರುವುದಾಗಿದೆ. ನಾಗೇಶ್‌ರವರು ಪಿರಾದಿರವರ ಲೈನ್‌ಮನೆ ಪಕ್ಕದಲ್ಲಿ ಕೆಲಸಮಾಡಿಕೊಂಡಿದ್ದು ಪಿರಾದಿರವರಿಗೆ ನಾಗೇಶ್ ರವರ ಪರಿಚಯವಿರುತ್ತದೆ.
ಪಿರ್ಯಾದಿ ಹಾಗೂ ನಾಗೇಶ್ ಲೈನ್‌ಮನೆ ಬಳಿ ಹಾಗೂ ತೋಟದಲ್ಲಿ ಕೆಲಸ ಮಾಡುವ ಸಮಯದಲ್ಲಿ ಮಾತನಾಡುವುದನ್ನು ನೋಡಿ ಈ ಹಿಂದೆ ನಾಗೇಶನ ಅಣ್ಣನಾದ ಮಹೇಶನು ಪಿರ್ಯಾಯಾದಿರವರ ಜೊತೆ ಹಲವು ಬಾರಿ ಜಗಳಮಾಡುತ್ತಿದ್ದನು. ಈ ಸಮಯದಲ್ಲಿ ಪಿರ್ಯಾದಿಯವರ ಗಂಡನಾದ ಅಶ್ವಿನಾಗೊಮಾಗೊ ರವರು ಮಹೇಶನಿಗೆ ನೀನು ನನ್ನ ಹೆಂಡತಿಯ ಬಗ್ಗೆ ಅನುಮಾನಪಡಬೇಡ, ಸುಮ್ಮನೆ ನನ್ನ ಹೆಂಡತಿಯ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಹೇಳಬೇಡ ಎಂದು ಹೇಳಿದ್ದರು. ಈ ವಿಷಯವನ್ನು ತೋಟದ ಮಾಲೀಕರಾದ ರಾಮ್‌ಬೋಪಯ್ಯ ಹಾಗೂ ತೋಟದ ರೈಟರ್ ಚಂದ್ರ ರವರಿಗೆ ತಿಳಿಸಿದಾಗ ಅವರು ಸಹ ಮಹೇಶನಿಗೆ ಬೈದು ಬುದ್ದಿ ಹೇಳಿದರು.
ಆಗಿನಿಂದ ಮಹೇಶನು ಪಿರ್ಯಾದಿರವರ ಗಂಡ ಅಶ್ವಿನಾಗೊಮಾಗೊ ರವರ ವೈಮನಸ್ಸಿಟ್ಟುಕೊಂಡಿರುತ್ತಾನೆ. ದಿನಾಂಕ 02.03.2026 ರಂದು ಪಿರ್ಯಾದಿರವರ ಮಗಳಿಗೆ ಜ್ವರವಿದ್ದುದರಿಂದ ಪಿರ್ಯಾದಿ ಹಾಗೂ ಅವರ ಗಂಡ ಅಶ್ವಿನಾಗೊಮಾಗೊರವರು ಕೆಲಸಕ್ಕೆ ರಜೆ ಮಾಡಿ ಮಗಳನ್ನು ಅಮ್ಮತ್ತಿಗೆ ಕರೆದುಕೊಂಡು ಹೋಗಿ ಔಷದಿಯನ್ನು ಕೊಡಿಸಿ ವಾಪಾಸ್ಸು 01.00 ಗಂಟೆಗೆ ಲೈನ್ ಮನೆಗೆ ಬಂದಿರುತ್ತಾರೆ. ನಂತರ 01.40 ಪಿ.ಎಂ ಗಂಟೆಗೆ ಪಿರ್ಯಾದಿಯವರ ಲೈನ್ ಮನೆಗೆ ಮಹೇಶ್‌ನು ಬಂದು ಪಿರ್ಯಾದಿರವರ ಗಂಡನ ಬಳಿ ಅಂಗಡಿಗೆ ಹೋಗಿ ಬರುವ ಎಂದು ಹೇಳುತ್ತಾನೆ ಆಗ ಪಿರಾದಿರವರ ಗಂಡ ನಾನು ಬರುವುದಿಲ್ಲ ಎಂದು ಹೇಳಿದರೂ ಬಲವಂತವಾಗಿ ಕರೆದುಕೊಂಡು ಹೋಗಿರುತ್ತಾನೆ.
ಸಮಯ ಸುಮಾರು 03.00 ಪಿ.ಎಂಗೆ ಮಹೇಶನು ಒಬ್ಬನೇ ಲೈನ್ ಮನೆಗೆ ವಾಪಾಸ್ಸ್ ಬಂದಿರುತ್ತಾನೆ. ಆಗ ಪಿಯಾದಿರವರು ಮಹೇಶ್‌ನ ಬಳಿ ಗಂಡ ಎಲ್ಲಿ ಎಂದು ಕೇಳಿದಾಗ ಬರುತ್ತಾರೆ ಎಂದು ಹೇಳಿ ಮಹೇಶನು ಅವನ ಲೈನ್ ಮನೆಗೆ ಹೋಗಿರುತ್ತಾನೆ. ಪಿರ್ಯಾದಿಯವರ ಗಂಡ ಮನೆಗೆ ಕಾಣದೆ ಪಿರ್ಯಾದಿಯವರು ಸಮಯ ಸುಮಾರು 04.30 ಪಿ.ಎಂ ಗಂಟೆಗೆ ಮಹೇಶನಿಗೆ ಫೋನ್ ಮಾಡಿದಾಗ ಪೋನ್ ತೆಗೆದಿರುವುದಿಲ್ಲ.
ಸಮಯ ಸುಮಾರು 05.30 ಪಿ.ಎಂ ಗಂಟೆಗೆ ಪಿರ್ಯಾದಿಯವರು ಲೈನ್ ಮನೆ ಹತ್ತಿರ ಇರುವ ಅಂಗಡಿಯ ಮಾಲೀಕ ನಾರಾಯಣರವರಿಗೆ ಪೋನ್ ಮಾಡಿ ಗಂಡ ಬಂದಿರುವ ಬಗ್ಗೆ ವಿಚಾರಿಸಿದಾಗ ನಿನ್ನ ಗಂಡ ಹಾಗೂ ಮಹೇಶ್‌ನು ಕೋಗಿಲೆಹಳ್ಳದ ಕಾಫಿತೋಟದ ಕಡೆಗೆ ಸಮಯ ಸುಮಾರು 02.00 ಪಿ.ಎಂ ಗಂಟೆಗೆ ಹೋದರು ಎಂದು ಪಿರ್ಯಾದಿಯವರಿಗೆ ಹೇಳಿದರು. ಪಿರ್ಯಾದಿಯವರು ಗಂಡ ಸ್ವಲ್ಪ ಸಮಯದ ನಂತರ ಬರಬಹುದೆಂದುಕೊಂಡಿದ್ದರು.
ಆದರೆ ರಾತ್ರಿ 07.30 ಗಂಟೆಯಾದರೂ ಸಹ ಪಿಯಾದಿರವರ ಗಂಡ ಮನಗೆ ಬಾರದ ಕಾರಣ ಪಿರ್ಯಾದಿ, ನಾಗೇಶ್ ಹಾಗೂ ಪಕ್ಕದ ಲೈನ್ ಮನೆಯಲ್ಲಿ ವಾಸವಾಗಿರುವ ಮಾದೇವಿ ರವರುಗಳು ಅಂಗಡಿ ಮಾಲೀಕ ನಾರಾಯಣ ರವರು ಹೇಳಿದಂತೆ ಕೋಗಿಲೆ ಹಳ್ಳದ ಕಾಫಿತೋಟಕ್ಕೆ ಹೋಗಿ ಟಾರ್ಚ್ ಬೆಳಕು ಸಹಾಯದಿಂದ ಹುಡುಕಿದಾಗ ನಾಗೇಶ್ ರವರಿಗೆ ಕಾಫಿತೋಟದ ಬಳಿ ಕಾಫಿ ಗಿಡದ ಕೆಳಗೆ ಪಿಯಾರ್ಯದಿಯವರ ಗಂಡ ಅಶ್ವಿನಾಗೊಮಾಗೊ ಮೃತದೇಹ ಸಿಕ್ಕಿರುತ್ತದೆ.
ರಸ್ತೆಯಲ್ಲಿದ್ದ ಪಿರ್ಯಾದಿಯವರ ಬಳಿಗೆ ನಾಗೇಶ್ ರವರು ಬಂದು ಗಂಡನ ಮೃತ ದೇಹವು ತೋಟದ ಬೇಲಿಯ ಬಳಿ ಕಾಫಿಗಿಡದ ಕೆಳಗೆ ಇರುವ ಬಗ್ಗೆ ಹೇಳಿ ತಕ್ಷಣ ಈ ವಿಷಯವನ್ನು ತೋಟದ ರೈಟರ್ ಚಂದ್ರ ರವರಿಗೆ ನಾಗೇಶ್ ರವರು ಫೋನ್ ಮಾಡಿ ತಿಳಿಸಿರುತ್ತಾರೆ. ನಂತರ ಪಿರ್ಯಾದಿಯವರು ಹೋಗಿ ನೋಡಿದಾಗ ಗಂಡನ ಮೃತ ದೇಹವಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿಯವರು ಗಂಡನ ಮೃತ ದೇಹವನ್ನು ನೋಡಲಾಗಿ ಮುಖದ ಮೇಲೆ ರಕ್ತಗಾಯವಾಗಿದ್ದು, ಇರುವುದು ಕಂಡು ಬಂದಿರುತ್ತದೆ.
ಮಹೇಶನಿಗೆ ಪಿರ್ಯಾದಿರವರ ಗಂಡನ ಮೇಲೆ ಹಾಗೂ ಪಿರ್ಯಾದಿರವರ ಮೇಲಿನ ಹಳೆಯ ದ್ವೇಷದಿಂದ ಪಿರ್ಯಾದಿಯವರ ಗಂಡನನ್ನು ಕೊಲೆ ಮಾಡುವ ಉದ್ದೇಶದಿಂದ ಪಿರ್ಯಾದಿರವರ ಗಂಡನನ್ನು ಲೈನ್ ಮನೆಯಿಂದ ಬಲವಂತವಾಗಿ ತೋಟಕ್ಕೆ ಕರೆದುಕೊಂಡು ಹೋಗಿ ಯಾವುದೋ ಆಯುಧದಿಂದ ಕೊಲೆ ಮಾಡಿರುತ್ತಾನೆ. ಆದುದರಿಂದ ಪಿಯಾದಿರವರ ಗಂಡನನ್ನು ಕೊಲೆ ಮಾಡಿರುವ ಮಹೇಶನ ಮೇಲೆ ಸೂಕ್ತ ಕಾನೂನು ದೂರು ನೀಡಿದ್ದಾರೆ.