ನಿಟ್ಟೂರು ಕಾರ್ಮಾಡಿನಲ್ಲಿ ಕಾಫಿ ಮಂಡಳಿಯ ಸಭೆ

Jul 7, 2026 - 18:12
 0  151
ನಿಟ್ಟೂರು ಕಾರ್ಮಾಡಿನಲ್ಲಿ ಕಾಫಿ ಮಂಡಳಿಯ ಸಭೆ

ಪೊನ್ನಂಪೇಟೆ: ಸುಸ್ಥಿರ ಕಾಫಿ ಕೃಷಿಗೆ ಅನುಸರಿಸಬೇಕಾದ ಉತ್ತಮ ಕೃಷಿ ಪದ್ಧತಿಗಳ ಕುರಿತು ಗೊಣಿಕೊಪ್ಪಲು ಕಾಫಿ ಮಂಡಳಿಯ ವತಿಯಿಂದ ನಿಟ್ಟೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಮಟ್ಟದ ಕಾಫಿ ಬೆಳೆಗಾರರ ಸಭೆಯನ್ನು ಹಿರಿಯ ಕಾಫಿ ಬೆಳೆಗಾರರಾದ ಮಾಚಂಗಡ ಡಿಕ್ಕಿ ಅಯ್ಯಣ್ಣನವರು ಉದ್ಘಾಟಿಸಿದರು.

ಬಾಳೆಲೆ ವಲಯ ಕಾಫಿ ಮಂಡಳಿಯ ಸಹಾಯಕ ವಿಸ್ತರಣಾಧಿಕಾರಿ ಗಳಾದ ಮಹಿಜಾರವರು ಪ್ರಸ್ತುತ ಕಾಫಿ ಬೆಳೆಗಾರರಿಗೆ ಕಾಫಿ ಮಂಡಳಿಯ ವತಿಯಿಂದ ಲಭ್ಯವಿರುವ ವಿವಿಧ ಯೋಜನೆಗಳು, ಸೇವೆಗಳ ಬಗ್ಗೆ ಮಾಹಿತಿ ನೀಡಿರುವುದರೊಂದಿಗೆ ಕೊಳೆ ರೋಗ, ಬೆರ್ರಿ ಬೋರ್ ,ಸಾರ್ಟ್ ಹೋಲ್ ಬೋರ್ ರೋಗಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಕೃಷಿ ಪದ್ಧತಿಗಳು ಕಾಫಿ ಬೆಳೆ ಅಭಿವೃದ್ಧಿಗೆ ಪೂರಕವಾದ ತೋಟ ನಿರ್ವಹಣಾ ವಿಧಾನಗಳ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಿ ವೈಜ್ಞಾನಿಕ ಕಾಫಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು ಕಾಫಿ ಕೃಷಿಯಲ್ಲಿ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದೆಂದು ಮಾಹಿತಿ ನೀಡಿದರು.

ಕಾಫಿ ಮಂಡಳಿಯ ಮಣ್ಣು ವಿಜ್ಞಾನಿಗಳಾದ ಪ್ರಪೂಲ ಕುಮಾರಿ ಕಾಫಿ ಕೃಷಿಯಲ್ಲಿ ಪೌಷ್ಟಿಕಾಂಶಗಳ ನಿರ್ಮಾಣೆ ಕಾಫಿ ಗಿಡಗಳ ಕಂಬ ಚಿಗುರಿ ನಿಂದ ಗಿಡ ಬೆಳೆಸುವ ವಿಧಾನದ ಕುರಿತು ಪ್ರಾತ್ಯಕ್ಷಿಕೆ ನೀಡುತ್ತಾ ಕಾಫಿ ಬೆಳೆಗಾರರು ಎರಡು ವರ್ಷಗಳಿಗೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ಅನುಗುಣವಾಗಿ ಗಿಡಗಳ ಆರೈಕೆಗೆ ಮಾರ್ಗ ಸೂಚಿ ಸಿದ್ದಪಡಿಸಿ ಕೊಳ್ಳುವಂತೆ ತಿಳಿಸಿದರು ಕಾಫಿ ಇಂಡಿಯಾ ಆಫ್ ಗೆ ನೋಂದಣಿ ಕಾರ್ಯವನ್ನು ಕಾಪಿ ಮಂಡಳಿಯ ಸಹಾಯಕ ಸಿಬ್ಬಂದಿ ಧಕ್ಷಿತಾ ನೆರವೇರಿಸಿದರು ,ಕೊಳುವಂಡ ಧನ್ಯ ಪ್ರಾರ್ಥನೆ ನೆರವೇರಿಸಿದರು.

ಪಡಿಞರಂಡ ಪ್ರಭು ಕುಮಾರ್ ಸ್ವಾಗತಿಸಿ ನಿರೂಪಿಸಿದರು ವೇದಿಕೆಯಲ್ಲಿ ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಾಟಿಮಾಡ ಶರೀನ್ ಮತ್ತಣ್ಣ, ಶ್ರೀ ಕಾಲಭೈರವ ದೇವಸ್ಥಾನದ ಕಾರ್ಯದರ್ಶಿಗಳಾದ ಕೊಟ್ಟಂಗಡ ಮಧು ಮಂಜುನಾಥ್, ಮಾಜಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಾಚಂಗಡ ಸುಜಾ ಪೂಣಚ್ಚ, ಗೊರುಗೋಡು ಅಯ್ಯಪ್ಪ ಸಂಘದ ಅಧ್ಯಕ್ಷರಾದ ಕಳ್ಳೇಂಗಡ ಶಾಂತ ಉತಯ್ಯ, ಇಗ್ಗುತ್ತಪ್ಪ ಸಂಘದ ಅಧ್ಯಕ್ಷರಾದ ಮುಕ್ಕಾಟಿರ ಚಿಮ್ಮು ಸೋಮಯ್ಯ, ಕಾರ್ಯದರ್ಶಿಗಳಾದ ಫ್ರಿನ್ಸ್ ಪೊನ್ನಪ್ಪ ,ವಿಜಯ ಗ್ರಾಮೀಣ ಯುವಕ ಸಂಘದ ಅಧ್ಯಕ್ಷರಾದ ಮುಕ್ಕಾಟಿರ ವಿಕಾಸ್ ಉತ್ತಪ್ಪ ಪ್ರಮುಖರಾದ ಗಣಂಗಡ ಸುಧೀಪ್ ಸೇರಿದಂತೆ ಮೂವತ್ತು ಅಯ್ದಿ ಕಾಫಿ ಬೆಳೆಗಾರರು ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0