ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ: ರಾಜ್ಯ ಉಪಾಧ್ಯಕ್ಷೆ ವೀಣಾ ಅಚ್ಚಯ್ಯ ನವರಿಂದ ಜಿಲ್ಲೆಯಾದ್ಯಂತ ನಡೆದ ಸರಣಿ ಸಭೆ

Oct 26, 2025 - 11:21
 0  448
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ: ರಾಜ್ಯ ಉಪಾಧ್ಯಕ್ಷೆ ವೀಣಾ ಅಚ್ಚಯ್ಯ ನವರಿಂದ ಜಿಲ್ಲೆಯಾದ್ಯಂತ ನಡೆದ ಸರಣಿ ಸಭೆ

ಹಾಸನ: ಜಿಲ್ಲೆಯ ವಿವಿಧ ವಿಧಾನ ಸಭಾ ಕ್ಷೇತ್ರಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿಗಳು ಆದ ಶ್ರೀಮತಿ ವೀಣಾ ಅಚ್ಚಯ್ಯ ನವರು ಇಂದು ಜಿಲ್ಲಾ ಮುಖಂಡರೊಂದಿಗೆ ಭೇಟಿ ನೀಡಿ ಹಾಸನ ,ಚನ್ನರಾಯಪಟ್ಟಣ, ಹೊಳೆ ನರಸೀಪುರ ಮತ್ತು ಅರಕಲಗೂಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಭೆ ನಡೆಸಿದರು.

 ಕಾಂಗ್ರೆಸ್ ಪಕ್ಷದ ಸಾಧನೆಗಳು,ಪಕ್ಷದ ನಾಯಕರ, ಪಕ್ಷದ ಚುನಾಯಿತ ಸದಸ್ಯರ ಜನಪರ ಕಾರ್ಯಗಳನ್ನು ಜನರಿಗೆ ಅರಿವಿಕೆ ನೀಡುವ ಸಲುವಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಕಾರ್ಯನಿರ್ವಹಿಸುವಂತೆ ಕಾಂಗ್ರೆಸ್ ರಾಷ್ಟ್ರೀಯ ಸಮಿತಿ ನಿರ್ದೇಶನ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಸೊರಕೆಯವರು ಸೂಚನೆ ನೀಡಿದ್ದು ಈಗಾಗಲೇ ಹಾಸನ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹಿರಿಯ ವಕೀಲ ದೇವರಾಜೇ ಗೌಡ ರವರನ್ನು ನೇಮಕ ಮಾಡಲಾಗಿದ್ದು ಜಿಲ್ಲಾ ಸಮಿತಿ ರಚನೆಯಾಗಿದೆ.

ಪ್ರತಿ ವಿಧಾನ ಸಭಾ ಕ್ಷೇತ್ರ, ಪ್ರತಿ ಬ್ಲಾಕ್ ನಲ್ಲಿ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರ ನೇಮಕಾತಿ ನಡೆಯಲಿದೆ ಎಂದು ವೀಣಾ ಅಚ್ಚಯ್ಯನವರು ಮಾಹಿತಿ ನೀಡಿದರು.ಈ ಸಮಿತಿ ಸಕ್ರಿಯವಾದ ನಂತರ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರಚಾರ ಸಮಿತಿ ರಚನೆ ಮಾಡಲು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಯವರು ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಪ್ರಚಾರ ಸಮಿತಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಸಹಕಾರ ನೀಡಬೇಕು ಎಂದು ಕೋರಿದರು.

ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಇ.ಹೆಚ್.ಲಕ್ಷಣ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷದ ಅತ್ಯಂತ ಅನುಭವಿ ನಾಯಕಿಯಾಗಿರುವ ವೀಣಾ ಅಚ್ಚಯ್ಯ ನವರು ತಮ್ಮ ಜಿಲ್ಲೆಗೆ ಉಸ್ತುವಾರಿ ಗಳಾಗಿ ನೇಮಕಗೊಂಡಿರುವುದು ಸಂತಸ ತಂದಿದ್ದು ಅವರ ಮಾರ್ಗದರ್ಶನಲ್ಲಿ ಪ್ರಚಾರ ಸಮಿತಿಯನ್ನು ಜಿಲ್ಲೆಯಲ್ಲಿ ಸಧೃಡಗೊಳಿಸಲು ತಾವು ಮತ್ತು ಜಿಲ್ಲಾ ಸಮಿತಿ ಬದ್ದರಾಗಿದ್ದು ಎಲ್ಲಾ ನೆರವು ನೀಡುವುದ ರೊಂದಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯೊಂದಿಗೆ ಸಮನಾಗಿ ಕೊಂಡೊಯ್ಯಳಾಗುವುದು ಎಂದು ಭರವಸೆ ನೀಡಿದರು.

 ಮಾಜಿ ಎಂ.ಎಲ್.ಸಿ ಗೋಪಾಲಸ್ವಾಮಿ ಯವರು ಮಾತನಾಡಿ ವೀಣಾಅಚ್ಚಯ್ಯ ನವರು ಪಕ್ಷದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯೆಯಾಗಿ ಅನೇಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದು ಹಾಸನ ಜಿಲ್ಲೆಯಲ್ಲಿಯೂ ಪ್ರಚಾರ ಸಮಿತಿಯನ್ನು ಬಲಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಅರಕಲಗೂಡು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ತಾಲ್ಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷರಾದ ಶ್ರೀಧರ್ ಗೌಡ ಮಾತನಾಡಿ ವೀಣಾ ಅಚ್ಚಯ್ಯ ನವರು ಅತ್ಯಂತ ಅನುಭವಿ ರಾಜಕಾರಿಣಿಯಾಗಿದ್ದು ಅವರ ಉಸ್ತುವಾರಿಯಲ್ಲಿ ಪಕ್ಷ ಸಂಘಟನೆ ಜಿಲ್ಲೆಯಲ್ಲಿ ಉತ್ತಮವಾಗಿ ಆಗಲಿದೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.

ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜ್ ಗೌಡ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ,ಹಾಸನ ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್,ಹೊಳೆನರಸೀಪುರ ಲಕ್ಷ್ಮಣ, ಸೋಮಶೇಖರ್ ಕಬ್ಬಳಿಗೆರೆ,ಹೆಚ್.ವಿ.ರಾಜೇ ಗೌಡ, ಲೇಬರ್ ಸೆಲ್ ರಾಜ್ಯ ಉಪಾಧ್ಯಕ್ಷರಾದ ಗೋಪಾಲ ಗೌಡ, ಕೊಡಗು ಕಾಂಗ್ರೆಸ್ ಮುಖಂಡರಾದ ತೆನ್ನಿರ ಮೈನಾ, ಮೀನಾಜ್ ಪ್ರವೀಣ್, ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0