ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನ ಆಡಳಿತ ಮಂಡಳಿಯಿಂದ ಶಾಸಕ ಪೊನ್ನಣ್ಣ ಅವರೊಂದಿಗೆ ಸಮಾಲೋಚನೆ
admincoorgdaily

ಮಡಿಕೇರಿ; ದಕ್ಷಿಣ ಭಾರತದ ಏಕೈಕ ಮೃತ್ಯುಂಜಯ ದೇವಸ್ಥಾನ ಆಗಿರುವ ಪೊನ್ನಂಪೇಟೆ ತಾಲೂಕು ಬಾಡಗರಕೇರಿಯ ಇತಿಹಾಸ ಪ್ರಸಿದ್ಧ ಶ್ರೀ ಮೃತುಂಜಯ ದೇವಸ್ಥಾನದ ಆಡಳಿತ ಮಂಡಳಿಯಿಂದ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿದ ಎಸ್ ಪೊನ್ನಣ್ಣ ಅವರನ್ನು ವಿರಾಜಪೇಟೆ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭ ದೇವಸ್ಥಾನದ ವಾರ್ಷಿಕ ಉತ್ಸವ ಮಾರ್ಚ್ 8ರಂದು ನಡೆಯಲಿದ್ದು ಶಾಸಕರನ್ನು ಆಡಳಿತ ಮಂಡಳಿಯಿಂದ ಅಹ್ವಾನ ಪತ್ರ ನೀಡಿ ಆಹ್ವಾನಿಸಲಾಯಿತು.
ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ, ನಾಡ್ ತಕ್ಕರಾದ ಕಾಯಪಂಡ ಆಯ್ಯಪ್ಪ,ಕಾರ್ಯದರ್ಶಿ ಬಲ್ಯಮೀದೇರಿರ ಸಂಪತ್,ಉಪಾಧ್ಯಕ್ಷ ಕಾಯಪಂಡ ಸ್ಟಾಲಿಲ್ ಗಣಪತಿ, ದೇವಸ್ಥಾನ ಆಡಳಿತ ಮಂಡಳಿಯ ಕಾಯಪಂಡ ಕಾವೇರಪ್ಪ,ಅಣ್ಣೀರ ಲೋಕೇಶ್, ಮಲ್ಲೇoಗಡ ನರೇಂದ್ರ,ಬಲ್ಯಮೀದೇರಿರ ರನ್ನು,ಮೀದೇರಿರ ಜೈ ಗಣಪತಿ ,ಬಲ್ಯಮೀದೇರಿರ ಚೇತನ್ ಸೋಮಣ್ಣ,ಅಣ್ಣೀರ ಪ್ರತೀಕ್ ಪೊನ್ನಣ್ಣ ಹಾಗೂ ಅಣ್ಣೀರ ಹರೀಶ್ ಮಾದಪ್ಪ ಇದ್ದರು.