ಡಿ. ಚೆನ್ನಮ್ಮ ಕಾಲೇಜಿನಲ್ಲಿ ವೖತ್ತಿ ಮಾಗ೯ದಶ೯ನ ಕಾಯಾ೯ಗಾರ

Feb 26, 2026 - 16:54
 0  409
ಡಿ. ಚೆನ್ನಮ್ಮ ಕಾಲೇಜಿನಲ್ಲಿ ವೖತ್ತಿ ಮಾಗ೯ದಶ೯ನ ಕಾಯಾ೯ಗಾರ

ಮಡಿಕೇರಿ ಫೆ. 26 - ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಮಡಿಕೇರಿಯ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ವೃತ್ತಿ ಮಾರ್ಗದರ್ಶನ ವ್ಯಕ್ತಿತ್ವ ವಿಕಸನ ಮತ್ತು ಪರೀಕ್ಷಾ ಸಿದ್ಧತೆ ಕುರಿತು ಕಾರ್ಯಗಾರ ಜರುಗಿತು.

 ಪಿಯುಸಿ ನಂತರದ ಶಿಕ್ಷಣದ ಕುರಿತಾಗಿ ವೃತ್ತಿ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ಸಂಪನ್ಮೂಲ ವ್ಯಕ್ತಿ ಪುತ್ತೂರಿನ ಅಕ್ಷರ ಚಾರಿಟೇಬಲ್ ಟ್ರಸ್ಟ್ ನ ಪ್ರೊಜೆಕ್ಟ್ ಮ್ಯಾನೇಜರ್ ಹೇಮಂತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿಶ್ವೇಶ್ವರ ಭಟ್ ಪರೀಕ್ಷಾ ಸಿದ್ಧತೆಯನ್ನು ಕುರಿತು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

 ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಜೆಕ್ಟ್ ಸೆಕ್ರೆಟರಿ ರತನ್ ತಮ್ಮಯ್ಯ ಮಾತನಾಡಿ, ಗ್ರಾಮೀಣ ಶಾಲಾ ವಿದ್ಯಾಥಿ೯ಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವ ಗುರಿ ಹೊಂದುವಂತೆ ಸ್ಪೂತಿ೯ದಾಯಕ ಉದಾಹರಣೆಗಳೊಂದಿಗೆ ಕರೆ ನೀಡಿದರು.

ಮಡಿಕೇರಿ , ರೋಟರಿ ಸದಸ್ಯ ಎಂ. ಈಶ್ವರ ಭಟ್, ರೋಟರಿ ಮಡಿಕೇರಿ ಯ ಕಾರ್ಯದರ್ಶಿ ಸೋಮಣ್ಣ ಬಿ ಎಂ ಹಾಜರಿದ್ದರು. ಸಭೆಯಲ್ಲಿ ಪ್ರಾಂಶುಪಾಲರಾದ ಸಿ ಜಿ ಮಂದಪ್ಪ ಹಾಜರಿದ್ದರು. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1