ದೀಕ್ಷಾಳಿಗೆ ಬಿ.ಕಾಂ.ನಲ್ಲಿ 3 ನೇ ರ‍್ಯಾಂಕ್
ಕುಶಾಲನಗರ, ಮೇ.22: ಬೆಂಗಳೂರಿನ ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ವತಿಯಿಂದ ದೀಕ್ಷಾಳಿಗೆ ಬಿ.ಕಾಂ.ಪದವಿಯಲ್ಲಿ 3 ನೇ ರ‍್ಯಾಂಕ್ ಲಭಿಸಿದೆ.
ಮೂಲತಃ ಜಿಲ್ಲೆಯ ತೊರೆನೂರು ಮೂಲದ ಕೊಲ್ಲಿಯ ಟಿ.ಕೆ.ಪಾಲಾಕ್ಷಪ್ಪ ಮತ್ತು ಲಲಿತ ದಂಪತಿಯ ಮೊಮ್ಮಗಳಾದ ದೀಕ್ಷಾ, ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ತನಕ ಅಭ್ಯಾಸ ಮಾಡಿದ್ದು, ಬೆಂಗಳೂರಿನ ಮಲ್ಲೇಶ್ವರಂ ಮಹಿಳಾ ಕಾಲೇಜಿನಲ್ಲಿಯ ಪಿಯೂಸಿ ಮತ್ತು ಬಿ.ಕಾಂ., ಪದವಿಯನ್ನು ಅಭ್ಯಾಸ ಮಾಡಿರುತ್ತಾರೆ.
ವಿದ್ಯಾರ್ಥಿನಿ ದೀಕ್ಷಾ ಅವರ ಸಾಧನೆಯನ್ನು ಗುರುತಿಸಿ ಬೆಂಗಳೂರಿನಲ್ಲಿ ಮಲ್ಲೇಶ್ವರಂ ಮಹಿಳಾ ಕಾಲೇಜಿನಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.
ಈ ವಿದ್ಯಾರ್ಥಿನಿಯ ಶೈಕ್ಷಣಿಕ ಸಾಧನೆಯನ್ನು ಕೊಡಗು ಜಿಲ್ಲಾ ವೀರಶೈವ- ಲಿಂಗಾಯತ ನೌಕರರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ. ವಿದ್ಯಾರ್ಥಿನಿ ದೀಕ್ಷಾ, ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮುಂಡುಗೋಡು ಗ್ರಾಮದ ಕೃಷಿಕ ಕುಟುಂಬದ ಎಂ.ಬಿ.ಪ್ರಸನ್ನ ಹಾಗೂ ಮಧು ದಂಪತಿಯ ಪುತ್ರಿಯಾಗಿದ್ದಾಳೆ.
