ಜೂನ್ 02ಕ್ಕೆ ಮುಖ್ಯಮಂತ್ರಿಗಳ ಭೇಟಿ : ಪೂರ್ವಭಾವಿ ಸಭೆ

May 22, 2026 - 14:34
 0  355
ಜೂನ್ 02ಕ್ಕೆ ಮುಖ್ಯಮಂತ್ರಿಗಳ ಭೇಟಿ : ಪೂರ್ವಭಾವಿ ಸಭೆ

ಪೊನ್ನಂಪೇಟೆ: ಮುಂದಿನ ತಿಂಗಳ ಜೂನ್ 2 ರಂದು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಗೋಣಿಕೊಪ್ಪದಲ್ಲಿ ಹಕ್ಕು ಪತ್ರ, ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಬೃಹತ್ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಈ ಸಂಬಂಧ ಪೂರ್ವಭಾವಿ ತಯಾರಿಗಾಗಿ, ಇಂದು ಪೊನ್ನಂಪೇಟೆ ಬ್ಲಾಕಿನ ಎಲ್ಲಾ ವಲಯ ಅಧ್ಯಕ್ಷರುಗಳ ಹಾಗೂ ಪ್ರಮುಖರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ರೂಪರೇಷ ಹಾಗೂ ವಿವಿಧ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯ ಅಧ್ಯಕ್ಷೆತೆಯನ್ನು ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮಿದೇರಿರ ನವೀನ್ ರವರು ವಹಿಸಿದರು.

ಈ ಸಭೆಯಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷರು ಆಶಾ ಪೂಣಚ್ಚ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಎ.ಜೆ ಬಾಬು, ಹಿರಿಯರು ಮುಕಳೇರ ಕುಶಾಲಪ್ಪ, ತಾಲೂಕು ಪ್ರಚಾರ ಸಮಿತಿಯ ಅಧ್ಯಕ್ಷರು ಟಾಟು ಮೊಣ್ಣಪ್ಪ, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರು ಕುಲ್ಲಚಂಡ ಪ್ರಮೋದ್ ಗಣಪತಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು ಜಮ್ಮಡ ಸೊಮ್ಮಣ್ಣ, ಕಾರ್ಮಿಕ ಘಟಕದ ಅಧ್ಯಕ್ಷರು ಮಂಜುಳಾ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಪಂಕಜ, ಎಸ್ ಟಿ ಘಟದ ಅಧ್ಯಕ್ಷರು ಮಣಿಕುಂಞ, ತಾಲೂಕು ಯುವ ಅಧ್ಯಕ್ಷರು ಮಲ್ಲಂಡ ಧ್ಯಾನ್ ದೇವಯ್ಯ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಜುನೈದ್ ಹಾಗೂ ಪೊನ್ನಂಪೇಟೆ ಬ್ಲಾಕ್ ನ ಎಲ್ಲಾ ವಲಯ ಅಧ್ಯಕ್ಷರುಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 1
Love Love 0
Funny Funny 0
Angry Angry 0
Sad Sad 0
Wow Wow 0