ದೇವರಕೊಲ್ಲಿ ಶ್ರೀಚಾಮುಂಡೇಶ್ವರಿ ದೇವಾಲಯದ ಕಲಾಭವನಕ್ಕೆ ಜ. 14 ರಂದು ಭೂಮಿಪೂಜೆ

Jan 12, 2026 - 14:55
 0  194
ದೇವರಕೊಲ್ಲಿ ಶ್ರೀಚಾಮುಂಡೇಶ್ವರಿ ದೇವಾಲಯದ ಕಲಾಭವನಕ್ಕೆ ಜ. 14 ರಂದು ಭೂಮಿಪೂಜೆ

ಮಡಿಕೇರಿ ಜ 12 - ದೇವರಕೊಲ್ಲಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ನೂತನವಾಗಿ ಉದ್ದೇಶಿತ ಶ್ರೀ ಚಾಮುಂಡೇಶ್ವರಿ ಕಲಾಭವನಕ್ಕೆ ಭೂಮಿಪೂಜೆ ಮತ್ತು ಮಕರ ಸಂಕ್ರಾಂತಿ ಪೂಜಾಮಹೋತ್ಸವ ಜನವರಿ 14 ರಂದು ಬುಧವಾರ ಜರುಗಲಿದೆ.

ಜ.14 ರಂದು ಬುಧವಾರ ಬೆಳಗ್ಗೆ 10.45 ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಕನಾ೯ಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಇವರು ಕಲಾಮಂದಿರಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಪೂವಾ೯ಹ್ನ 11 ಗಂಟೆಗೆ ಆಯೋಜಿತ ಸಭಾಕಾಯ೯ಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರ ಶಾಸಕರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದು, ಟಿ.ಶ್ಯಾಮ್ ಭಟ್, ಶ್ರೀ ಚಾಮುಂಡೇಶ್ವರಿ ದೇವಾಲಯದ ಅಧ್ಯಕ್ಷರಾದ ಯಶೋಧರ ಬಿ.ಜೆ. ಹಾಜರಿರುವ ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ., ಮೈಸೂರಿನ ಉದ್ಯಮಿ ನರೇಶ ಚೆರಿಯಮನೆ, ಮದೆನಾಡು ಪ್ರಾಥಮಿಕ ಕೖಷಿ ಪತ್ತಿನ ಸಹಕಾರ ಸಂಘದ, ಅಧ್ಯಕ್ಷ ಧನಂಜಯ್ ಅಗೋಳಿಕಜೆ , ಶ್ರೀ ಧಮ೯ಸ್ಥಳ ಗ್ರಾಮೀಣಾಭಿವೖದ್ದಿ ಯೋಜನೆಯ ಸಂಪಾಜೆ ವಲಯಾಧಿಕಾರಿ ಸಂತೋಷ್ ಕುಮಾರ್, ಶ್ರೀ ಚಾಮುಂಡೇಶ್ವರಿ ದೇವಾಲಯದ ಉಪಾಧ್ಯಕ್ಷ ರಾಜು ಕೆ.ಆರ್ ಹಾಜರಿರುತ್ತಾರೆ . ಮಧ್ಯಾಹ್ನ 12.30 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಜರುಗಲಿದ್ದು, ಮಧ್ಯಾಹ್ನ 1 ಗಂಟೆಯಿಂದ ಅನ್ನಸಂತಪ೯ಣೆ ಜರುಗಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ. .

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0