ಧರ್ಮಸ್ಥಳ ಸಂಘದಿಂದ ಎಮ್ಮೆಮಾಡು ಗ್ರಾಮದ ರೋಗಿಯೊಬ್ಬರಿಗೆ ವಾಕರ್ ಕೊಡುಗೆ

Mar 28, 2026 - 00:11
 0  386
ಧರ್ಮಸ್ಥಳ ಸಂಘದಿಂದ ಎಮ್ಮೆಮಾಡು ಗ್ರಾಮದ ರೋಗಿಯೊಬ್ಬರಿಗೆ ವಾಕರ್ ಕೊಡುಗೆ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಮ್ಮೆಮಾಡು ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಸಂಕಷ್ಟ ಎದುರಿಸುತ್ತಿದ್ದ ಸಂಘದ ಸದಸ್ಯರೊಬ್ಬರ ಪತಿಗೆ ವಾಕರ್ ಅನ್ನು ಕೊಡುಗೆಯಾಗಿ ವಿತರಿಸಲಾಯಿತು.

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಪೋಕ್ಲು ಶುಭಾಷ್ ನಗರ ಕಾರ್ಯಕ್ಷೇತ್ರದ ಎಮ್ಮೆಮಾಡು ಗ್ರಾಮದ ಅಲ್ ಅನ್ಸಾರ್ ಸಂಘದ ಸದಸ್ಯರಾದ ಆಮಿನ ಎಂಬುವವರ ಪತಿ ಕರೀಮ್ ಎಂಬುವವರು ಆರೋಗ್ಯ ಸಮಸ್ಯೆಯಿಂದ ನಡೆದಾಡಲು ಕಷ್ಟಕರವಾಗಿದ್ದು ಸಂಘದಿಂದ ವಾಕರ್ ಕೊಡಿಸುವಂತೆ ಸಂಘದ ಸದಸ್ಯೆಯಾಗಿರುವ ಪತ್ನಿ ಆಮಿನ ಅವರು ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ್ ಅವರಿಗೆ ಮನವಿ ಸಲ್ಲಿಸಿದ್ದರು.

ಮನವಿಯನ್ನು ಸ್ವೀಕರಿಸಿದ ಅವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಗಮನಕ್ಕೆ ತರಲಾಗಿತ್ತು.ಧರ್ಮಾಧಿಕಾರಿಯವರ ನಿರ್ದೇಶನದಂತೆ ಸಂಘದ ಮೇಲ್ವಿಚಾರಕರಾದ ಸುನಿಲ್ ಅವರು ಕರೀಮ್ ಅವರ ಮನೆಗೆ ಭೇಟಿ ನೀಡಿ ವಾಕರ್ ಅನ್ನು ವಿತರಿಸಿದರು. ಈ ಸಂದರ್ಭ ನಾಪೋಕ್ಲು ಸುಭಾಷ್ ನಗರ ಒಕ್ಕೂಟದ ಅಧ್ಯಕ್ಷೆ ಮುತ್ತುರಾಣಿ,ಸೇವಾ ಪ್ರತಿನಿಧಿ ಉಮಾಲಕ್ಸ್ಮಿ,ಸಂಘದ ಸದಸ್ಯೆ ಮಿಶ್ರಿಯ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0