ಸಮರ್ಪಕ ಆಹಾರ ವಿತರಣೆಯಲ್ಲಿ ವ್ಯತ್ಯಾಸ; ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ಮುಂಭಾಗದಲ್ಲಿ ಸಂಜೆ ಪೋಷಕರ ಹಾಗೂ ಸಾರ್ವಜನಿಕರ ಪ್ರತಿಭಟನೆ

ಸಮರ್ಪಕ ಆಹಾರ ವಿತರಣೆಯಲ್ಲಿ ವ್ಯತ್ಯಾಸ; ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದ ಮುಂಭಾಗದಲ್ಲಿ ಸಂಜೆ ಪೋಷಕರ ಹಾಗೂ ಸಾರ್ವಜನಿಕರ ಪ್ರತಿಭಟನೆ

ಪೊನ್ನಂಪೇಟೆ: ಕ್ರೀಡಾ ವಸತಿ ನಿಲಯದಲ್ಲಿ ಇತ್ತೀಚಿಗೆ ವಿದ್ಯಾರ್ಥಿಗಳಿಗೆ, ಸಮರ್ಪಕವಾಗಿ ಗುಣಮಟ್ಟದ ಆಹಾರ, ಹಾಗೂ ಇಲಾಖೆಯ ನಿಯಮದಂತೆ ಆಹಾರ ವಿತರಿಸುತ್ತಿಲ್ಲ ಎಂಬ ಆರೋಪದಡಿಯಲ್ಲಿ ಇಂದು ಪೋಷಕರು ಹಾಗೂ ಸಾರ್ವಜನಿಕರು ಸಂಜೆ ವಿದ್ಯಾರ್ಥಿನಿಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಆಹಾರ ಮಾಡುವ ಗುತ್ತಿಗೆದಾರರು ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು.

ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಕೂಡ ಕಳಪೆ ಆಹಾರ ಮಟ್ಟದ ಗುಣದ ಬಗ್ಗೆ ತಮ್ಮ ಅನಿಸಿಕೆಗಳನ್ನು ಈ ಸಂದರ್ಭ ವ್ಯಕ್ತಪಡಿಸಿದರು. ಈ ಬಗ್ಗೆ ಕ್ರೀಡಾ ಇಲಾಖೆಯ ಮುಖ್ಯಸ್ಥರಿಗೆ ದೂರವಾಣಿ ಮೂಲಕ ವಿಚಾರವನ್ನು ಕೂಡ ತಿಳಿಸಲಾಯಿತು. ನಂತರ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯನವರ ಗಮನಕ್ಕೆ ಪೋಷಕರು ದೂರವಾಣಿ ಮೂಲಕ ಇಲ್ಲಿಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ನಂತರ ಈ ಸಂಬಂಧ ನಾಳೆ ಬೆಳಿಗ್ಗೆ ಶನಿವಾರ 11 ಗಂಟೆಗೆ ಪೋಷಕರು ಹಾಗೂ ಅಧಿಕಾರಿಗಳ ಸಭೆಯನ್ನು ಏರ್ಪಡಿಸಿ ಪೋಷಕರು ಆರೋಪಿಸಿರುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ಗುಣಮಟ್ಟದ ಆಹಾರ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅರುಣ್ ಮಾಚಯ್ಯನವರು ಸ್ಪಷ್ಟಪಡಿಸಿದ ನಂತರ ಪೋಷಕರು ಪ್ರತಿಭಟನೆಯನ್ನು ಕೈ ಕೈಬಿಟ್ಟ ಘಟನೆ ನಡೆದಿದೆ.

ಕಳೆದ ಒಂದು ವರ್ಷಗಳ ಹಿಂದೆ ಕ್ರೀಡಾ ವಸತಿ ನಿಲಯದಲ್ಲಿ ಆಹಾರ ವಿತರಿಸುವ ಗುತ್ತಿಗೆಯನ್ನು ಹೆಚ್. ಚಿತ್ರ ಎಂಬುವರು ಪಡೆದಿದ್ದರು ಅವರ ಗುತ್ತಿಗೆ ಅವಧಿ ಮುಗಿದಿದ್ದರೂ ಕೂಡ ಕ್ರೀಡ ಇಲಾಖೆ ಟೆಂಡರ್ ಪ್ರಕ್ರಿಯೆಯನ್ನು ನಡೆಸಿದೆ ಇವರನ್ನೇ ಮುಂದುವರಿಸಿರುವುದು ಕೂಡ ಇದೀಗ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕ್ರೀಡಾ ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದವರು ಆಗಾಗ ಈ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಿರುವುದೇ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಲಾಗಿದೆ