1.5 ಕೋಟಿ ವೆಚ್ಚದ ಕೇಮಾಡ್- ಕುಂಬಳದಾಳು- ಮೂರ್ನಾಡು ರಸ್ತೆ ನವೀಕರಣಕ್ಕೆ ಡಾ ಮಂತರ್ ಗೌಡ ಚಾಲನೆ

Feb 19, 2026 - 10:36
 0  335
1.5 ಕೋಟಿ ವೆಚ್ಚದ ಕೇಮಾಡ್- ಕುಂಬಳದಾಳು- ಮೂರ್ನಾಡು ರಸ್ತೆ ನವೀಕರಣಕ್ಕೆ ಡಾ ಮಂತರ್ ಗೌಡ ಚಾಲನೆ

ಮಡಿಕೇರಿ: ಬಹು ಕಾಲದಿಂದ ದುರಸ್ತಿ ಕಾಣದೆ ಇದ್ದ ಮಡಿಕೇರಿ ತಾಲೂಕಿನ ಕೇಮಾಡ್ ಕುಂಬಳದಾಳು, ಮೂರ್ನಾಡು ರಸ್ತೆ ನವೀಕರಣದ 1.5 ಕೋಟಿ ರೂ ವೆಚ್ಚದ ಕಾಮಗಾರಿಗೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡರವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

 ಮಾನ್ಯ ಮುಖ್ಯಮಂತ್ರಿಗಳು ಶಾಸಕರ ವಿಶೇಷ ಅನುದಾನವಾಗಿ ನೀಡಿದ 50 ಕೋಟಿ ರೂಗಳ ಅನುದಾನದಲ್ಲಿ ಸದರಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಗೆ ತಾವು ಸಿದ್ದರಿಲ್ಲ.ಕಾಮಗಾರಿ ಉತ್ತಮವಾಗಿದ್ದರೆ ಮಾತ್ರ ಬಿಲ್ ಪಾವತಿ ಮಾಡಲಾಗುವುದು ಎಂದು ಡ ಮಂತರ್ ಗೌಡ ರವರು ಸ್ಪಷ್ಟಪಡಿಸಿದರು.

 ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ ರವರು ಮಾತನಾಡಿ ಈ ಬಾಗದ ಜನರ ಬಹುಕಾಲದ ಬೇಡಿಕೆ ಈ ರಸ್ತೆ ಅಭಿವೃದ್ಧಿ ಆಗಿದ್ದು ಮಾನ್ಯ ಶಾಸಕರು ವಿಶೇಷ ಕಾಳಜಿ ವಹಿಸಿ ಜನರ ಕೋರಿಕೆಯನ್ನು ಈಡೇರಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಹನೀಫ್,ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ, ಪ್ರಚಾರ ಸಮಿತಿ ಅಧ್ಯಕ್ಷರಾದ ವಿ.ಜಿ.ಮೋಹನ್, ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಮೈಸಿ ಕತ್ತಣಿರ,ಸಾಮಾಜಿಕ ಜಾಲತಾಣದ ಪ್ರಮುಖರಾದ ಶಾಫಿ ಕೊಟ್ಟಮುಡಿ,ವಲಯ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ, ಗ್ರಾಮ ಪಂಚಾಯತ್ ಸದಸ್ಯರಾದ ಕಡ್ಲೆರ ಟೈನಿ,ಚೌರಿರ ಅನಿತಾ,ಚೌರಿರ ನವೀನ್,ಮೊಯ್ದು, ಪ್ರಮುಖರಾದ ಅಪ್ರು ರವೀಂದ್ರ,ಕಲಿಯಂಡ ಸಂಪತ್, ಕೊಳುಮಂಡ ರಫೀಕ್,ಕವನ್ ಕೊತ್ತೋಳಿ,ಕಾರ್ಮಿಕ ಘಟಕದ ಅಧ್ಯಕ್ಷ ದಿನೇಶ್,ಮಡಿಕೇರಿ ಮಹಿಳಾ ಘಟಕದ ಅಧ್ಯಕ್ಷೆ ಶಶಿ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 0