ಆಲೂರು ಸಿದ್ದಾಪುರ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್ ಗಾರ್ಡನ್ ಶಾರದಾ ಅಕಾಡೆಮಿಯಲ್ಲಿ ಯುಕೆಜಿ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

Mar 28, 2026 - 10:51
 0  212
ಆಲೂರು ಸಿದ್ದಾಪುರ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್ ಗಾರ್ಡನ್  ಶಾರದಾ ಅಕಾಡೆಮಿಯಲ್ಲಿ ಯುಕೆಜಿ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಶನಿವಾರಸಂತೆ : ಮಕ್ಕಳ ಭವಿಷ್ಯ ಪ್ರಾರಂಭ ಆಗುವುದೇ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಾರೆ ಹಾಗೂ ತಳಪಾಯ ಹೇಗಿದೆ ಹಾಗೆ ಬೆಳೆಯುತ್ತಾರೆ ಎಂದು ಮಡಿಕೇರಿ ಕ್ವೀನ್ಸ್ ಅಕಾಡೆಮಿ ಮುಖ್ಯಸ್ಥರಾದ ರಾಣಿ ಅಂತೋಣಿ ಡಿಸೋಜ ಅಭಿಪ್ರಾಯಪಟ್ಟರು.ಇವರು ಆಲೂರು ಸಿದ್ದಾಪುರ ಅದಿತಿ ಲಿಟ್ಲ್ ಫೀಟ್ಸ್ ಕಿಂಡರ್ ಗಾರ್ಡನ್ ಶಾರದಾ ಅಕಾಡೆಮಿ,ಇಲ್ಲಿ ಯುಕೆಜಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಎಷ್ಟೇ ಕಲಿತರು ಅದು ಕಡಿಮೆ ಎನ್ನುವಷ್ಟು ಮಟ್ಟಿಗೆ ಬಂದಿದ್ದು, ಈ ಅಕಾಡೆಮಿಯ ಸಂಸ್ಥಾಪಕರಾದ ರೀನಾ ಇವರ ಸತತ ಪರಿಶ್ರಮದಿಂದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದು, ಯಾವುದೇ ಫಲಾಪೇಕ್ಷೆ ಬಯಸದೆ ಮಕ್ಕಳು ಉತ್ತಮ ವಿದ್ಯಾವಂತರಾಗಬೇಕು ಎನ್ನುವ ದೃಷ್ಟಿ ಇಟ್ಟುಕೊಂಡು ಶಾಲೆ ಪ್ರಾರಂಭ ಮಾಡಿದ್ದಾರೆ ಎಂದರು.

 ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಉದ್ಯಮಿ ಜಯಕುಮಾರ್, ಈ ಶಾಲೆ ಇತ್ತೀಚಿಗೆ ಪ್ರಾರಂಭ ಆದರೂ ಸಹ ಮಕ್ಕಳ ಕಲಿಕೆಯಿಂದಾಗಿ ವೇಗವಾಗಿ ಬೆಳೆಯುತ್ತಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಕೆ ಮಾಡಿದರು. ಅರೋಗ್ಯ ಕೇಂದ್ರ ನಮಿತಾ ಮಾತನಾಡಿ, ಇಂದು ಮಕ್ಕಳನ್ನು ಎಷ್ಟೇ ಜಾಗರುಕತೆಯಿಂದ ನೋಡಿಕೊಂಡರು ಸಾಲದು. ಅಂತಹದರಲ್ಲಿ ಈ ಅಕಾಡೆಮಿ ಸ್ಥಾಪನೆ ಮಾಡಿ ಪುಟ್ಟ ಮಕಳನ್ನು ತಿದ್ದಿ ತೀಡಿ ಅತ್ಯುತ್ತಮ ಮಕ್ಕಳಾಗಿ ರೂಪಿಸುವ ಜವಾಬ್ದಾರಿ ತೆಗೆದುಕೊಂಡು ರೀನಾ ರವರು ದೊಡ್ಡ ಸಾಹಸಕ್ಕೆ ಕೈ ಹಾಕಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷೆ ಕೆ. ಪಿ ರೀನಾ ಮಾತನಾಡಿ ನಾನು ಬೇರೆ ಬೇರೆ ಉದ್ಯೋಗ ಮಾಡಿಕೊಂಡಿದ್ದೆ, ಆದರೆ ನನಗೆ ಶಿಕ್ಷಕಿ ಆಗಬೇಕು ಎಂಬ ನನ್ನ ಕನಸಾಗಿತ್ತು. ಅದು ಆಗಿರಲಿಲ್ಲ. ಕೊನೆಗೆ ಅನೇಕರ ಮಾರ್ಗದರ್ಶನ ಪಡೆದು ಶಿಕ್ಷಕಿಯಾದೆ.ಆದರೆ ನಾನೆ ಒಂದು ಶಿಕ್ಷಣ ಸಂಸ್ಥೆ ಪ್ರಾರಂಭ ಮಾಡಿದರೆ ಒಳ್ಳೆಯದು ಎಂದು ಅರಿತು ಇಲ್ಲಿ ಈ ಅಕಾಡೆಮಿ ಸ್ಥಾಪನೆ ಮಾಡಿದ್ದೇನೆ. ಇದಕ್ಕೆ ಅನೇಕರ ಸಹಕಾರ ಇದೆ.

ನಾನು ಈ ಶಾಲೆ ಸ್ಥಾಪನೆ ಮಾಡಿರೋದು ಹಣ ಸಂಪಾದನೆ ಅಲ್ಲದಿದ್ದರೂ ಉತ್ತಮ ವಿದ್ಯಾವಂತರನ್ನು ಈ ಸಮಾಜಕ್ಕೆ ನೀಡುವ ಉದ್ದೇಶ ನನ್ನದಾಗಿದೆ. ಮಕ್ಕಳು ಈ ವಾತಾವರಣದಲ್ಲಿ ಉತ್ತಮ ರೀತಿಯ ಅಭಿವೃದ್ಧಿ ಕಾಣುತಿದ್ದಾರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಈ ಅಕಾಡೆಮಿ ಎಂದರು.

 ಈ ಸಂದರ್ಭದಲ್ಲಿ ಶಿಕ್ಷಕರಾದ ಅಂಕಿತಾ, ಲಲಿತಮ್ಮ ಜೆ. ಡಿ, ಡಯಾನಾ ಕೆ. ಜೆ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಗಣ್ಯರನ್ನು ಸನ್ಮಾನ ಮಾಡಲಾಯಿತು. ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0