ಜಿಲ್ಲಾಧಿಕಾರಿ ವೆಂಕಟ್ ರಾಜಾ ರವರಿಗೆ ರಾಜಕೀಯ ಪಕ್ಷದ ಪ್ರತಿನಿಧಿಗಳಿಂದ ಬೀಳ್ಕೊಡುಗೆ
admincoorgdaily

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿಗಳಾಗಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಕರ್ನಾಟಕ ಸರ್ವೆ ಸೆಟಲ್'ಮೆಂಟ್ ಮತ್ತು ಲ್ಯಾಂಡ್ ರೆಕಾರ್ಡ್ ಇಲಾಖೆಯ ಆಯಕ್ತರಾಗಿ ಉನ್ನತ ಹುದ್ದೆಗೆ ವರ್ಗಾವಣೆಗೊಂಡಿರುವ ಶ್ರೀ ವೆಂಕಟ್ ರಾಜಾ ( ಭಾ.ಆ.ಸೇ) ರವರನ್ನು ಚುನಾವಣೆ ಸಂಭಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ತೆನ್ನಿರ ಮೈನಾ ಹಾಗೂ ಸಜಿಲ್ ಕೃಷ್ಣ ರವರು ಗೌರವಿಸಿ ಬೀಳ್ಕೊಟ್ಟರು.
ಈ ಸಂಧರ್ಭ ಮಾತನಾಡಿದ ತೆನ್ನಿರ ಮೈನಾ ರವರು ಜಿಲ್ಲಾಧಿಕಾರಿಗಳಾಗಿ ಕೊಡಗಿನ ಸ್ಥಿತಿಗತಿಗಳು ,ಕಂದಾಯ ವ್ಯವಸ್ಥೆಗಳನ್ನು ಬಹುಬೇಗ ಅರ್ಥೈಸಿಕೊಂಡು ಉತ್ತಮವಾಗಿ ಸೇವೆ ಸಲ್ಲಿಸಿದ ವೆಂಕಟ್ ರಾಜಾ ರವರ ಸೇವೆಯನ್ನು ಕೊಡಗಿನ ಜನತೆ ಸದಾ ಸ್ಮರಿಸಿಕೊಳ್ಳುತ್ತಾರೆ,ಹಾಗೂ ಚುನಾವಣೆಗೆ ಸಂಭಂದಿಸಿದಂತೆ ಅತ್ಯಂತ ಕಾಳಜಿಯಿಂದ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲನೆ ಮಾಡುವಲ್ಲಿ ಬದ್ದತೆಯಿಂದ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಜನತೆಯ ನಡುವೆ ಕೆಲಸ ಮಾಡಿದ್ದು ಸಂತೃಪ್ತಿ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ವೆಂಕಟ್ ರಾಜಾ ರವರು ಜಿಲ್ಲೆಯಲ್ಲಿ ಆದ ಸವಿ ಅನುಭವ ಚಿರಸ್ಮರಣೀಯ ವಾಗಿರುತ್ತದೆ ಎಂದು ಹೇಳಿದರು.ಮುಂದಕ್ಕೂ ಕೊಡಗಿನ ವಿಚಾರ ಬಂದಾಗ ವಿಶೇಷ ಆಸಕ್ತಿವಹಿಸುವ ಭರವಸೆ ನೀಡಿದರು.