ಆನೆ ದಾಳಿಗೆ ಕೃಷಿಕ ಬಲಿ: ಶಾಸಕ ಡಾ.ಮಂತರ್ ಗೌಡ ಭೇಟಿ,ಕುಟುಂಬಸ್ಥರಿಗೆ ಸಾಂತ್ವನ
admincoorgdaily

ಶನಿವಾರಸಂತೆ: ಕೃಷಿ ಕಾರ್ಯಕ್ಕೆ ತಮ್ಮ ಜಮೀನಿಗೆ ತೆರಳಿದ್ದ ಸಂದರ್ಭದಲ್ಲಿ ದುರದೃಷ್ಟವಶಾತ್ ಆನೆ ದಾಳಿಗೆ ಬಲಿಯಾದ ಗಣಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಗಯ್ಯಪುರಹ ಗ್ರಾಮದ ಪೊನ್ನಪ್ಪ ರವರ ನಿವಾಸಕ್ಕೆ ಶಾಸಕರಾದ ಶ್ರೀ ಡಾ.ಮಂತರ್ ಗೌಡ ರವರು ಭೇಟಿ ನೀಡಿ ಕುಟುಂಬದ ಸದಸ್ಯರುಗಳಿಗೆ ಸಾಂತ್ವನ ತಿಳಿಸಿದರು.
ಸರ್ಕಾರದ ವತಿಯಿಂದ ವಿತರಣೆ ಮಾಡಲಾಗುವ 20 ಲಕ್ಷ ರೂಪಾಯಿ ಪರಿಹಾರ ಚೆಕ್ ಕುಟುಂಬದ ಸದಸ್ಯರಿಗೆ ಹಸ್ತಾಂತರ ನಡೆಸಿದರು. . ಈ ಸಂದರ್ಭದಲ್ಲಿ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಿ ಬಿ ಸತೀಶ್, ಸ್ಥಳೀಯ ಮುಖಂಡರು ನಿವಾಸಿಗಳು ಉಪಸ್ಥಿತರಿದ್ದರು.