Kodagu

ಐದು ವರ್ಷ ಹಿಂದಿನ ಹಾತೂರು-ಕಳತ್ಮಾಡು ಕೊಲೆ ಪ್ರಕರಣ:ಆರೋಪಿಗಳು‌ ಖುಲಾಸೆ

admincoorgdaily

ಐದು ವರ್ಷ ಹಿಂದಿನ ಹಾತೂರು-ಕಳತ್ಮಾಡು ಕೊಲೆ ಪ್ರಕರಣ:ಆರೋಪಿಗಳು‌ ಖುಲಾಸೆ

ವೀರಾಜಪೇಟೆ: ಆಸ್ತಿ ವಿಚಾರದಲ್ಲಿ ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಕೊಲೆ ಆರೋಪಿಗಳನ್ನು ಎರಡನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಧೀಶ ಎಸ್. ನಟರಾಜ್ ಅವರು ಖುಲಾಸೆಗೊಳಿಸಿದ್ದಾರೆ.

ಹಾತೂರು-ಕಳತ್ಮಾಡು ಗ್ರಾಮದ ಬಿ‌.ಜಿ ಉದಯಶಂಕರ್ ಎಂಬುವವರನ್ನು 09-09-2021ರಂದು ಬಿ.ಎಸ್ ಸಂದೀಪ್,ಮಹಮದ್ ಸುಲೈಮಾನ್ ಅಲಿಯಾಸ್ ವಿನೋದ್ ಪೂಜಾರಿ(ಮೃತ ಪಟ್ಟಿದ್ದಾರೆ)‌ ಹಾಗೂ ಸುಂದರ ಬಿ.ಜಿ. ಎಂಬವರು ಮಾರುತಿ ವ್ಯಾಗನರ್ (ಕೆ.ಎ. 19 ಎಂಡಿ 0737) ಕಾರಿನಲ್ಲಿ ಹುಣಸೂರು ತಾಲೂಕಿನ ಹೈರಿಗೆ ಗ್ರಾಮಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ನಂತರ ಮೃತದೇಹವನ್ನು ಕಳತ್‌ಮಾಡು ಗ್ರಾಮದ ಮನೆಗೆ ತಂದು ಇರಿಸಿ ಸ್ವಾಭಾವಿಕವಾಗಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಿದ್ದರು ಎಂಬ ಆರೋಪ ಎದುರಿಸಿದ್ದರು.

 ಸಿದ್ದಾಪುರ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡು ಇದೊಂದು ಸ್ವಾಭಾವಿಕ ಸಾವಲ್ಲ, ಕೊಲೆ ಎಂದು ಮೂವರು ಆರೋಪಿಗಳ ವಿರುದ್ಧ 302, 201 ರೆಡ್ ವಿತ್ 34 ಪ್ರಕರಣ ದಾಖಲಿಸಿಕೊಂಡು ವಿರಾಜಪೇಟೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ, ಕೊಲೆ ಆರೋಪದಲ್ಲಿ ಸರಿಯಾದ ಸಾಕ್ಷಾಧಾರಗಳು ಇಲ್ಲದ ಕಾರಣ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆರೋಪಿಗಳ ಪರ ವಕೀಲ ವಿ.ಪಿ. ರಮೇಶ್ ವಾದಿಸಿದ್ದರು.