ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್.ಪಿ ಶೇಷಾದ್ರಿ ಹೃದಯಾಘಾತದಿಂದ ನಿಧನ
admincoorgdaily

ಶನಿವಾರಸಂತೆ:ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶನಿವಾರಸಂತೆ ಹೋಬಳಿ ಹುಣಸೆ ಕಾಯಿ ಹೊಸಳ್ಳಿ ಗ್ರಾಮದ ಕಾಫಿ ಬೆಳೆಗಾರರಾದ ಹೆಚ್.ಪಿ ಶೇಷಾದ್ರಿ ಅವರು ಇಂದು ಹೃದಯಘಾತದಿಂದ ನಿಧನರಾಗಿದ್ದಾರೆ.ಈ ಹಿಂದೆ ಅವರು ನಿಡ್ತ ಮಂಡಲ ಪಂಚಾಯತಿಯ ಪ್ರಧಾನರಾಗಿ, ನಿಡ್ತ ಫ್ಯಾಕ್ಸ್ ಅಧ್ಯಕ್ಷರಾಗಿ ಶನಿವಾರಸಂತೆ ಭಾರತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾಗಿ, ಮಾಲಂಬಿ ಮಳೆ ಮಲ್ಲೇಶ್ವರ ದೇವಸ್ಥಾನ ಇದರ ಸಂಸ್ಥಾಪಕ ಖಜಾಂಚಿಯಾಗಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಅವರು ಸೇವೆಯನ್ನು ಸಲ್ಲಿಸಿದ್ದಾರೆ.