ಗೋಣಿಕೊಪ್ಪ; ಹಕ್ಕು ಪತ್ರ ವಿತರಣೆಗೆ ಕಾರಣಕರ್ತರಾದವರಿಗೆ ಸನ್ಮಾನ

Feb 13, 2026 - 13:48
 0  344
ಗೋಣಿಕೊಪ್ಪ; ಹಕ್ಕು ಪತ್ರ ವಿತರಣೆಗೆ ಕಾರಣಕರ್ತರಾದವರಿಗೆ ಸನ್ಮಾನ

ಗೋಣಿಕೊಪ್ಪ;ಕಳೆದ 40 ವರ್ಷಗಳ ಹಿಂದೆ ಗೋಣಿಕೊಪ್ಪಲು ನಿವೇಶನ ರಹಿತ ಬಡ ಜನರಿಗೆ ಅಗಿನ ಆಡಳಿತವು 1ನೇ , 2ನೇ ಹಾಗೂ 5ನೇ ವಿಭಾಗದಲ್ಲಿ 200ಕ್ಕೂ ಹೆಚ್ಚು ನಿವೇಶನ ರಹಿತ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಿದ್ದರು. ಆದರೆ ಯಾರಿಗೂ ನಿವೇಶನದ ಹಕ್ಕು ಪತ್ರ ನೀಡಿರಲಿಲ್ಲ. ಈಗ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ವಿಶೇಷ ಆಸಕ್ತಿ ವಹಿಸಿ, ಸ್ಥಳೀಯ ಬಡ ಜನರಿಗೆ ಹಕ್ಕುಪತ್ರ ಕೊಡಿಸಲು ಯಶಸ್ವಿಯಾಗಿದ್ದಾರೆ.

ಆದ್ದರಿಂದ ನಿಸರ್ಗ ಬಡಾವಣೆಯ 2ನೇ ವಿಭಾಗ 3ನೇ ವಾರ್ಡ್ ನಿವಾಸಿಗಳು ಕೃತಜ್ಞತೆ ಸಲ್ಲಿಸಿದ್ದು , ಕ್ಷೇತ್ರದ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ ರವರಿಗೂ ಹಾಗೂ ಹಕ್ಕು ಪತ್ರ ಆಗಲು ಕಾರಣಕರ್ತರಾದ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಪಿಡಿಒ ತಿಮ್ಮಯ್ಯ, ಉಪಾಧ್ಯಕ್ಷೆ ಶ್ರೀಮತಿ ಮಂಜುಳಾ, ಪೊನ್ನಂಪೇಟೆ ತಾಲೂಕು ಕೆಡಿಪಿ ಸದಸ್ಯರು, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಹಾಗೂ ಸಮಾಜ ಸೇವಕರಾದ ಕೆ.ಎಂ ಅಜಿತ್ ಅಯ್ಯಪ್ಪ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ ಮುಕುಂದ, ಮಾಜಿ ಉಪಾಧ್ಯಕ್ಷ ಕೆ.ಎಂ ತಿಮ್ಮಯ್ಯ , ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ಬಿ.ಎನ್ ಪ್ರಕಾಶ್, ಸಿವಿಲ್ ಇಂಜಿನಿಯರ್ ಕಡೇಮಡ ಮುತ್ತಪ್ಪ , ಗೋಣಿಕೊಪ್ಪಲು ಹಿರಿಯ ವಕೀಲರಾದ ಕಾಶಿಯಪ್ಪ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇರ್ಷಾದ್ ಇವರುಗಳನ್ನು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಮಂಜುಳಾ ಹಾಗೂ ಪೊನ್ನಂಪೇಟೆ ತಾಲೂಕು ಕೆಡಿಪಿ ಸದಸ್ಯ ಟಿ.ಕೆ ಅಬ್ದುಲ್ ಸಮದ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಜಲೀಲ್, ಪೊನ್ನಂಪೇಟೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಟಿ.ಕೆ ಖಾಲಿದ್ ನೇತೃತ್ವದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

 ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ನಾಯಂದಿರ ಶಿವಾಜಿ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಶೀದ್, ಕೊಡಗು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸದಸ್ಯೆ ಶ್ರೀಮತಿ ನೂರೇರ ಧನ್ಯ ಪದವಿ, ಉಪಸ್ಥಿತರಿದ್ದರು. ಟಿ.ಕೆ ಅಬ್ದುಲ್ ಸಮದ್ ಸ್ವಾಗತಿಸಿ, ಹಿರಿಯರಾದ ಗೋವಿಂದಪ್ಪ ನವರು ವಂದಿಸಿದರು.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 0
Sad Sad 0
Wow Wow 0