ಗೋಣಿಕೊಪ್ಪ: ಸರ್ಕಾರಿ ಮಾದರಿ ‌ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

Jan 27, 2026 - 13:34
Jan 27, 2026 - 13:35
 0  289
ಗೋಣಿಕೊಪ್ಪ: ಸರ್ಕಾರಿ ಮಾದರಿ ‌ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ  ಗಣರಾಜ್ಯೋತ್ಸವ

ಗೋಣಿಕೊಪ್ಪ: 77ನೇ ವರ್ಷದ ಗಣರಾಜ್ಯೋತ್ಸವವನ್ನು ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲೂಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಧ್ವಜಾರೋಹಣ ನೆರವೇರಿಸಿದರು.

ನಂತರ ಮಾತನಾಡಿದ ಪ್ರಮೋದ್ ಗಣಪತಿ, ಭಾರತ ನಿರ್ಮಾಣಕ್ಕೆ ಹೋರಾಡಿದ ಮಾನ್ಯರನ್ನು ನೆನೆಸಿಕೊಳ್ಳುವುದು ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೇಶ ಕಟ್ಟಿದ ನಾಯಕರನ್ನು ನಿರ್ಧಾಕ್ಷೀಣ್ಯವಾಗಿ ಬಿಂಬಿಸುತ್ತಿರುವುದು ವೇದನೆಯ ವಿಚಾರ. ಇಂತಹ ಘಟನೆಗಳಿಗೆ ಮಕ್ಕಳ ಮನಸ್ಸು ಗೊಂದಲಕ್ಕೆ ಒಳಗಾಗಬಾರದು ನೈಜ ವಿಚಾರವನ್ನು ಅರಿತು ಭಾರತೀಯ ಎಂಬ ಹೆಮ್ಮೆಯನ್ನು ಎತ್ತಿ ಹಿಡಿಯಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.

ಶಾಲಾ ಅಭಿವೃದ್ಧಿ ಮತ್ತು ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಅಧ್ಯಕ್ಷತೆಯಲ್ಲಿ ಮಾತನಾಡಿ, ಗಣತಂತ್ರ ದೇಶವನ್ನು ಪ್ರಪಂಚದಲ್ಲಿ ಎತ್ತಿ ಹಿಡಿಯುವ ಮೂಲಕ ಈ ದೇಶದ ಪ್ರಗತಿ ಮತ್ತು ಆರ್ಥಿಕತೆಯ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಭಾರತ ಸ್ವ್ವಾತಂತ್ಯ್ರಗೊAಡ ನಂತರ ತನ್ನ ಅಸ್ತಿತ್ವಕ್ಕಾಗಿ ಸಂವಿಧಾನವನ್ನು ರಚಿಸಲಾಯಿತು. ಈ ಮೂಲಕ ಸಮಾನತೆಯನ್ನು ಎತ್ತಿ ಹಿಡಿಯುವ ಮೂಲಕ ಭಾರತದ ಐಕ್ಯತೆಯ ಕಡೆ ಗಮನಹರಿಸಲಾಗಿದೆ. ಈ ದೇಶವನ್ನು ಕಟ್ಟುವ ಮಹಾನ್ಯರನ್ನು ಸದಾ ನೆನೆಸಿಕೊಳ್ಳುವ ಮೂಲಕ ಮತ್ತು ಪ್ರೇರಣೆಯಾಗಿಸಿಕೊಳ್ಳುವ ಮೂಲಕ ಈ ದೇಶದ ಬಗ್ಗೆ ಹೆಚ್ಚಿನ ಗೌರವ ಹೊಂದಬೇಕು.

ಗಣತಂತ್ರ ದೇಶವನ್ನು ಮತ್ತಷ್ಟು ಬೆಳಗಲು ಪ್ರತಿಯೊಬ್ಬ ವಿದ್ಯಾರ್ಥಿಯು ಪಣತೊಡಬೇಕು. ಗಾಂಧಿ, ಅಂಬೇಡ್ಕರ್ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅಂತಹ ಮಹಾನ್ಯರು ನೀಡಿದ ಕೊಡುಗೆ ಅಪಾರವಾಗಿದೆ. ಅಂತಹ ಕೊಡುಗೆಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಈ ದೇಶಕ್ಕೆ ನೀಡಬೇಕು ಎಂದು ಕರೆ ನೀಡಿದರು.

ಶಾಲೆಯ ಮುಖ್ಯ ಶಿಕ್ಷಕ ಎಚ್. ಕೆ ಕುಮಾರ್ ಮಾತನಾಡಿ, 77ನೇ ಗಣರಾಜ್ಯೋತ್ಸವ ಆಚರಣೆ, ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ಪ್ರತಿನಿಧಿಸುತ್ತದೆ. ನಾವೆಲ್ಲರೂ ನೈತಿಕತೆಯನ್ನು ಮೈಗೂಡಿಸಿಕೊಂಡು, ಪ್ರಜಾಪ್ರಭುತ್ವದ ಮೌಲ್ಯಗಳು ಎತ್ತಿ ಹಿಡಿಯಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಭಾಷಣ ಮಾಡಿ ದೇಶಭಕ್ತಿ ಗೀತೆಗಳನ್ನು ಹಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್ ಪ್ರಕಾಶ್, ಕೊಣಿಯಂಡ ಬೊಜಮ್ಮ, ಅಪ್ಜಲ್, ಸಫುರಬಾನು, ಶಾಲೆಯ ಮೇಲು ಉಸ್ತುವಾರಿ ಸಮಿತಿ ಉಪಾಧ್ಯಕ್ಷೆ ದಿವ್ಯ, ಸದಸ್ಯರುಗಳಾದ ಗೌರಿ, ಅನಿತಾ, ಸೌಮ್ಯ, ಕಲಾ ಶಿಕ್ಷಕ ಸತೀಶ್ ಬಿ.ಆರ್, ದೈಹಿಕ ಶಿಕ್ಷಣ ಶಿಕ್ಷಕ ರಮಾನಂದ ಟಿ.ಡಿ, ಸಹಾಯಕ ಶಿಕ್ಷಕರುಗಳಾದ ಜೋಸ್ಲಿಯಾ ಎಂ.ಟಿ, ಜಯಶ್ರೀ ಎನ್ .ಕೆ, ಇಂದಿರಾ ಎಂ.ಸಿ, ಅನಿತಕುಮಾರಿ ಹೆಚ್.ಇ, ದಮಯಂತಿ ಎ.ಎಮ್, ಅರ್ಶಿಯಾ.ಬಿ, ಕ್ಲ್ಯೆಮಿಂಟನ್, ಸಹನ್ ಎಂ.ಬಿ, ಶಾರದ ಕೆ ಎಸ್, ನಾಗರಾಜು, ಸ್ನೇಹಾ ಕಾವೇರಮ್ಮ, ಸಿದ್ದರಾಜು, ಎನ್, ಮಂಜುಳ ವಿ, ಮತ್ತು ವಿಧ್ಯಾರ್ಥಿಗಳು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0