ಪುಟಾಣಿನಗರದಲ್ಲಿ ಗಣಪತಿ ಹಬ್ಬದ ಸಂಭ್ರಮಕ್ಕೆ ಭರ್ಜರಿ ತಯಾರಿ
ಮಡಿಕೇರಿ;ಅಣ್ಣಾ... ಬೇಗ ಬನ್ನಿ! ಬ್ಯಾನರ್ ಕಟ್ಟಬೇಕು... ಮಳೆ ಇದೆ, ಬೇಗ ಬನ್ನಿ! ಇದು ಕಳೆದ ಎರಡು ಮೂರು ದಿನಗಳಿಂದ ಕೇಳಿ ಬರುತ್ತಿರುವ ಮಾತುಗಳು ಮಳೆ ಸುರಿಯುತ್ತಿದ್ದರೂ ಯುವಕರ ಉತ್ಸಾಹ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಬ್ಯಾನರ್ ಕಟ್ಟಲು ಮಳೆ ಅಡ್ಡಿಯಾದರೂ, ಹಬ್ಬದ ಸಿದ್ಧತೆ ಮಾತ್ರ ಭರ್ಜರಿಯಾಗಿ ಸಾಗುತ್ತಿದೆ. ಇದು ಮಡಿಕೇರಿಯ ಪುಟಾಣಿನಗರದ ಯುವಕರ ಉತ್ಸಾಹದ ಚಿತ್ರಣ.
ಇನ್ನು ಕೆಲವೇ ದಿನಗಳಲ್ಲಿ ಗಣಪತಿ ಹಬ್ಬ ಬರಲ್ಲಿದೆ.... ಹೀಗಾಗಿ ಕಳೆದ ಒಂದು ತಿಂಗಳಿನಿಂದಲೇ ಪುಟಾಣಿನಗರದ ಯುವಕರು ಹಗಲು-ರಾತ್ರಿ ಎನ್ನದೇ ಸಿದ್ಧತೆಯಲ್ಲಿ ತೊಡಗಿದ್ದಾರೆ. ತಮ್ಮ ಏರಿಯಾದ ಗಣಪತಿ ಹಬ್ಬವನ್ನು ಈ ಬಾರಿ ಇನ್ನಷ್ಟು ಅದ್ದೂರಿಯಾಗಿ, ವಿಭಿನ್ನವಾಗಿ ಹಾಗೂ ಜನಾಕರ್ಷಣೆಯಾಗಿ ಆಚರಿಸಬೇಕು ಎಂಬ ಉತ್ಸಾಹ ಯುವಕರಲ್ಲಿ ಮನೆಮಾಡಿದೆ. 33ನೇ ವರ್ಷದ ಗಣಪತಿ ಹಬ್ಬಕ್ಕೆ ಅದ್ದೂರಿ ರೂಪ ನೀಡಲು ಯುವ ಸಮೂಹ ಈಗಾಗಲೇ ಸಿದ್ಧವಾಗಿದೆ. ಮಳೆ ಇರಲಿ... ಕೆಲಸದ ಒತ್ತಡ ಇರಲಿ.
ಯಾವುದಕ್ಕೂ ಜಗ್ಗದೇ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವ ಯುವಕರು, “ನಮ್ಮ ಏರಿಯಾದ ಹಬ್ಬ..ನಮ್ಮ ಜವಾಬ್ದಾರಿ” ಎನ್ನುವಂತೆ ಸಿದ್ಧತೆ ನಡೆಸುತ್ತಿದ್ದಾರೆ. ಬ್ಯಾನರ್ ಕಟ್ಟುವುದರಿಂದ ಹಿಡಿದು ಅಲಂಕಾರ, ಕಾರ್ಯಕ್ರಮಗಳ ಸಿದ್ಧತೆ ಸೇರಿದಂತೆ ಪ್ರತಿಯೊಂದು ಕೆಲಸದಲ್ಲೂ ಯುವಕರೇ ಮುಂಚೂಣಿಯಲ್ಲಿದ್ದಾರೆ. ಇದೀಗ ಪುಟಾಣಿನಗರದಲ್ಲಿ ಕೇಳಿಬರುತ್ತಿರುವುದು ಒಂದೇ ಮಾತು. ಗಣಪತಿ ಹಬ್ಬ ಇನ್ನಷ್ಟು ಅದ್ದೂರಿಯಾಗಬೇಕು... ನಮ್ಮ ಹಬ್ಬ ಎಲ್ಲರ ಗಮನ ಸೆಳೆಯಬೇಕು! ಯುವಕರ ಉತ್ಸಾಹ, ಒಗ್ಗಟ್ಟು ಮತ್ತು ಶ್ರಮಕ್ಕೆ ಸಾಕ್ಷಿಯಾಗುತ್ತಿದೆ
ವರದಿ:ಮಲ್ಲಿಕಾರ್ಜುನ ಪಬ್ಲಿಕ್ ಟಿವಿ ಮಡಿಕೇರಿ
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
