ಅಕ್ರಮ ಸಂಬಂಧ ಶಂಕೆ:ತಾತನಿಂದಲೇ‌ ಮೊಮ್ಮಗನ‌ ಹತ್ಯೆ

Apr 30, 2026 - 09:08
 0  2.3k
ಅಕ್ರಮ ಸಂಬಂಧ ಶಂಕೆ:ತಾತನಿಂದಲೇ‌ ಮೊಮ್ಮಗನ‌ ಹತ್ಯೆ
ಅಪ್ಪು

ವಿರಾಜಪೇಟೆ;ಒಂದೇ ಲೈನ್ ಮನೆಯಲ್ಲಿ ವಾಸವಿದ್ದ ತೋಟದ ಕಾರ್ಮಿಕರ ನಡುವೆ ಅಕ್ರಮ ಸಂಬಂಧದ ವಿಚಾರ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿ ನಡೆದಿದೆ.

ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಟೋಳಿ ಗ್ರಾಮದ ನಿವಾಸಿ ಅಮ್ಮಣಕುಟ್ಟಂಡ ಗಣೇಶ್ ಅವರ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಪಣಿ ಎರವರ ಸಂಜು ಅಲಿಯಾಸ್ ಅಯ್ಯಪ್ಪ (19) ಹತ್ಯೆಯಾದ ವ್ಯಕ್ತಿ. ಪಣಿ ಎರವರ ಅಪ್ಪು ಪ್ರಾಯ (65) ಕೊಲೆಗೈದು ಬಂಧಿನಾದ ವ್ಯಕ್ತಿ.

ಘಟನೆ ವಿವರ: ವಿರಾಜಪೇಟೆ ಆರ್ಜಿ ಬೇಟೋಳಿ ಗ್ರಾಮದ ಎ. ಗಣೇಶ್ ಅವರ ತೋಟದ ಲೈನ್ ಮನೆಯಲ್ಲಿ ಮೃತ ವ್ಯಕ್ತಿ ಸಂಜು ಮತ್ತು ಕೊಲೆಗೈದ ತಾತ ಅಪ್ಪು ವಾಸವಿದ್ದರು. ಕಳೆದ ಮೂರು ತಿಂಗಳ ಹಿಂದೆ ಕೆಲಸ ಒತ್ತಡದ ನಿಮಿತ್ತ ಗಣೇಶ್ ಮಂಜು ಮತ್ತು ಸಿಂಧು ಕಾರ್ಮಿಕ ದಂಪತಿಗಳನ್ನು ಸಂಪರ್ಕಿಸುತ್ತಾರೆ. ಮಾಲೀಕರ ಅಪೇಕ್ಷೆ ಮೇರೆಗೆ ಕಾರ್ಮಿಕ ದಂಪತಿಗಳು ಹಿರಿಯ ಮಗಳು ಕಾವೇರಿಯನ್ನು ಪೊನ್ನಂಪೇಟೆಯ ಕಿರುಗೂರುನಲ್ಲಿ ಅಣ್ಣಣ ಬಳಿ ಬಿಟ್ಟು ,ಎರಡನೇ ಮಗಳು ದಿವ್ಯಳೊಂದಿಗೆ ಗಣೇಶ್ ಅವರ ಲೈನ್ ಮನೆಗೆ ಆಗಮಿಸುತ್ತಾರೆ.

ಕೆಲಸ ಬಗ್ಗೆ ಮಾತನಾಡಲು ಸಂಜು ಮತ್ತು ಮಂಜು ಮನೆಗೆ ಬಂದು ಹೋಗುವುದು ಮಾಡುತ್ತಿದ್ದ, ಇದನ್ನು ಗಮನಿಸಿದ್ದ ವೃದ್ದ ಅಪ್ಪು ಮಂಜು ಪತ್ನಿ ಸಿಂಧಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅಪಾರ್ಥ ಕಲ್ಪಿಸುತ್ತಾನೆ ಅಪ್ಪು ( ವೃದ್ದ) .ಇದೇ ವಿಷಯವಾಗಿ ಹಲವು ಬಾರಿ ಈರ್ವರ ನಡುವೆ ಮಾತಿನ ಚಕಾಮುಕಿ ಅಲ್ಲದೆ ಜಗಳ ನಡೆಯುತ್ತದೆ. ಜಗಳ ಬಿಡಿಸಲು ಹಲವು ಭಾರಿ ದಂಪತಿಗಳು ಪ್ರಯತ್ನಪಟ್ಟಿದ್ದಾರೆ.

ಹೀಗಿರುವಾಗ 28-04-2026 ರಂದು ಬೆಳಿಗ್ಗೆ ತೋಟದ ಮಾಲೀಕ ಗಣೇಶ್ ಅವರು ಹೊಸ ಮನೆ ಕಟ್ಟುವ ಸ್ಥಳಕ್ಕೆ ಕಾರ್ಮಿಕರನ್ನು ಅಂದರೆ ಸಂಜು ಮತ್ತು ಮಂಜು ತೆರಳಲು ತಿಳಿಸಿದ್ದಾರೆ. ನಂತರ ‌ನನಗೆ ( ಸಿಂದು) ಗೆ ಹೂವಿನ ಗಿಡಕ್ಕೆ‌ ನೀರು ಎರೆಯಲು ತಿಳಿಸುತ್ತಾರೆ. ಕೆಲಸ ಮುಗಿದ ಬಳಿಕ ಸಂಜೆ ಮಂಜು ಮತ್ತು ಸಂಜು ಲೈನ್ ಮನೆಗೆ ಆಗಮಿಸಿದ್ದಾರೆ. ಎಂದಿನಂತೆ ಸಂಜು ಮತ್ತು ವೃದ್ದ ಅಪ್ಪು ನಡುವೆ, ನಿನಗೆ ಎಷ್ಟೋ ಬಾರಿ ಹೇಳಿದರು ಸಿಂದು ವಿನ ಸಂಪರ್ಕ ಬಿಡುವುದಿಲ್ಲ. ಅಲ್ಲದೆ ನೀನು ನನ್ನ ಪತ್ನಿಯನ್ನು ಕೊಲೆ ಮಾಡಿದ್ದೀಯ ಎಂದು ಜಗಳ ವಾಗಿದೆ.

ಜಗಳ ಸಾಮಾನ್ಯ ಎಂದು ಸಿಂಧ ಮತ್ತು ಮಂಜು ದಂಪತಿಗಳು ಸುಮ್ಮನಿದ್ದರು.ಜಗಳವು ತಾರಕ್ಕೇರಿತು.ಸಿಟ್ಟಿನಿಂದ ವೃದ್ದ ಅಪ್ಪು ಮನೆಯಲ್ಲಿದ್ದ ಕಪಾತ್ ಕತ್ತಿಯಿಂದ ಸಂಜುವಿನ ಮೇಲೆ ಪ್ರಹಾರ ಮಾಡಿದ್ದಾನೆ.ಪರಿಣಾಮ ಸಂಜುವಿನ ಕುತ್ತಿಗೆ ಭಾಗಕ್ಕೆ ಮತ್ತು ಕಾಲು ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಬಳಿಕ ಹಲ್ಲೆ ಮಾಡಿದ ವೃದ್ದ ಅಪ್ಪು ಹಲ್ಲೆ ಮಾಡಿದ ಕತ್ತಿಯೊಂದಿಗೆ ಪರಾರಿಯಾಗಿದ್ದಾನೆ.

 ರಕ್ತದ ಮಡುವಿನಲ್ಲಿದ್ದ ಸಂಜುವನ್ನು ಗಮನಿಸಿದ ಕಾರ್ಮಿಕ ದಂಪತಿಗಳು ಹೆದರಿ ಮಾಲೀಕ ಗಣೇಶ್ ಅವರಿಗೆ ಮಾಹಿತಿ ತಿಳಿಸಿದ್ದಾರೆ. ಕಾರ್ಮಿಕರೊಂದಿಗೆ ಗಣೇಶ್ ಗಾಯಳುವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಗೆ ತೆರಳಲು ತಿಳಿಸಿದ್ದಾರೆ. ರಾತ್ರಿ 10-45 ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ. ಸಂಜು ಮೃತನಾಗುತ್ತಾನೆ. ಸಿಂದು ( ಮಂಜು ನ ಪತ್ನಿ) ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 2
Sad Sad 1
Wow Wow 0