ಹೊನವಳ್ಳಿ ಗ್ರಾಮದ ನಿವಾಸಿ ಎಚ್.ವಿ.ಕೃಪಾ ಗೆ ಪಿಎಚ್‌ಡಿ ಪದವಿ

Feb 9, 2026 - 11:09
 0  386
ಹೊನವಳ್ಳಿ ಗ್ರಾಮದ ನಿವಾಸಿ ಎಚ್.ವಿ.ಕೃಪಾ ಗೆ ಪಿಎಚ್‌ಡಿ ಪದವಿ

ಸೋಮವಾರಪೇಟೆ:ತಾಲ್ಲೂಕಿನ ಹೊನವಳ್ಳಿ ಗ್ರಾಮದ ನಿವಾಸಿ ಎಚ್.ವಿ.ಕೃಪಾ ಗೆ ಪಿಎಚ್‌ಡಿ ದೊರೆತ್ತಿದೆ. ದಾವಣಗೆರೆ ವಿಶ್ವವಿದ್ಯಾಲಯ ವತಿಯಿಂದ ತೋಳಹುಣಸೆಯ ಶಿವಗಂಗೋತ್ರಿ ಅವರಣದಲ್ಲಿ ಈಚೆಗೆ ನಡೆದ 13ನೇ ಘಟಿಕೋತ್ಸವದಲ್ಲಿ ಕೃಪಾಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲಟ್ ಪದವಿ ಪ್ರದಾನ ಮಾಡಿದರು.

ಉಪಕುಲಪತಿ ಚಂದ್ರಶೇಖರ್ ಕಂಬಾರ ಇದ್ದರು. ಅಧುನಿಕ ಕನ್ನಡ ಕಾದಂಬರಿ ಪರಿಸರವಾದಿ ವಿಮರ್ಶೆಯ ನೆಲೆಗಳು ಕುರಿತು ಕೃಪಾ ಅವರು ಸಿದ್ಧಪಡಿಸಿದ ಮಹಾಪ್ರಬಂಧಕ್ಕೆ ಪಿಎಚ್ಡಿ ದೊರೆತಿದ್ದು, ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮಹಾಂತೇಶ ಪಾಟೀಲ ಇವರ ಸಂಶೋಧನೆಗೆ ಮಾರ್ಗದರ್ಶನ ನೀಡಿದ್ದರು.

ಹೊನವಳ್ಳಿ ಗ್ರಾಮದ ಕಾಫಿ ಬೆಳೆಗಾರರಾದ ಎಚ್.ಪಿ.ವೀರೇಶ್- ರೂಪ ದಂಪತಿಗಳ ಪುತ್ರಿಯಾಗಿದ್ದಾರೆ. ಡಾ. ಎಚ್.ವಿ.ಕೃಪಾ ಅವರು ಪ್ರೋ ಕಬಡ್ಡಿ ಆಟಗಾರ ರತನ್ ಕೂತಿ, ಅವರ ಪತ್ನಿ. ಚಿತ್ರ:7ಎಸ್‌ಪಿಟಿ3- ಸೋಮವಾರಪೇಟೆ ತಾಲ್ಲೂಕಿನ ಹೊನವಳ್ಳಿ ಗ್ರಾಮದ ಎಚ್.ವಿ.ಕೃಷಾ ದಾವಣೆಗೆರೆ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲಟ್ ಅವರಿಂದ ಪಡೆದುಕೊಂಡರು. ಉಪಕುಲಪತಿ ಚಂದ್ರಶೇಖರ್ ಕಂಬಾರ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0