ಹಾಕತ್ತೂರು;ಕಾರು ಅಪಘಾತಕ್ಕೆ ವ್ಯಕ್ತಿ ಬಲಿ
admincoorgdaily

ಮಡಿಕೇರಿ;ಕಾರು ಅಪಘಾತಕ್ಕೆ ವ್ಯಕ್ತಿ ಬಲಿಯಾಗಿರುವ ಘಟನೆ ಹಾಕತ್ತೂರು - ಮರಗೋಡು ರಸ್ತೆ ಬಕ್ಕ ಬಳಿ ನಡೆದಿದೆ.ಬಿದ್ರುಪಣೆ ಪ್ರವೀಣ್ 35 ಮೃತ ದುರ್ದೈವಿ. ಬಿದ್ರುಪಣೆ ಸೋಮಣ್ಣ ಅವರ ಕಿರಿಯ ಪುತ್ರ ಪ್ರವೀಣ್ (35 ವರ್ಷ) ಮೃತಪಟ್ಟಿದ್ದಾರೆ.
ಶುಕ್ರವಾರ ರಾತ್ರಿ 9.00 ಗಂಟೆ ಗೆ ಸಂಭವಿಸಿದ ಅಕಾಲಿಕ ರಸ್ತೆ ಅಪಘಾತದಲ್ಲಿ ಪ್ರವೀಣ್ ಮೃತಪಟ್ಟಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.