ಹಾಲುಗುಂದ;ವಿದ್ಯುತ್ ತಂತಿ ತಗುಲಿ‌ ಕಾಫಿ ಬೆಳಗಾರ ದುರ್ಮರಣ

Feb 11, 2026 - 17:30
 0  3.5k
ಹಾಲುಗುಂದ;ವಿದ್ಯುತ್ ತಂತಿ ತಗುಲಿ‌ ಕಾಫಿ ಬೆಳಗಾರ ದುರ್ಮರಣ

ಮಡಿಕೇರಿ;ಸ್ಪಿಂಕರ್ಲ್ ಮೂಲಕ ತೋಟಕ್ಕೆ ನೀರು ಹಾಯಿಸುವ ಸಂದರ್ಭದಲ್ಲಿ ತೋಟದಲ್ಲಿ ಹಾದುಗೋಗಿರುವ ವಿದ್ಯುತ್ ತಂತಿ ತಗುಲಿ ಬೆಳಗಾರ ಮೃತಪಟ್ಟ ಘಟನೆ ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಗ್ರಾಮದಲ್ಲಿ ನಡೆದಿದೆ. ಕೊಪ್ಪಡ ಜಿಮ್ಮ(67) ಮೃತ ದುರ್ದೈವಿ. ನೆಲದಿಂದ ಕೇವಲ 8 ಅಡಿ ದೂರದಲ್ಲಿ ವಿದ್ಯುತ್ ತಂತಿ ಹಾದುಹೋಗಿದ್ದು,ಚೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಲವಾರು ಬಾರಿ ಇಲಾಖೆಗೆ ದೂರು ನೀಡಿದರು ಸಹಾ ಹೆಚ್ಚುವರಿ ಕಂಬಗಳನ್ನು ಮತ್ತು ವಿದ್ಯುತ್ ತಂತಿಯನ್ನು ಅಳವಡಿಸುವ ಕೆಲಸಕ್ಕೆ ಇಲಾಖೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 0
Sad Sad 4
Wow Wow 0