ಮಡಿಕೇರಿಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ವಾರ್ಷಿಕೋತ್ಸವ ಹಾಗೂ2026ರ ಕ್ಯಾಲೆಂಡರ್ ಬಿಡುಗಡೆ

Jan 9, 2026 - 09:28
 0  170
ಮಡಿಕೇರಿಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ವಾರ್ಷಿಕೋತ್ಸವ ಹಾಗೂ2026ರ ಕ್ಯಾಲೆಂಡರ್ ಬಿಡುಗಡೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಕೊಡಗು ಜಿಲ್ಲಾ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ವತಿಯಿಂದ 5ನೇ ವರ್ಷದ ವಾರ್ಷಿಕೋತ್ಸವ ಹಾಗೂ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮಡಿಕೇರಿಯ ಆರೋಗ್ಯ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ.ಡಾ.ಸತೀಶ್ ಕುಮಾರ್ ಕೆ, ಎಂ. ರವರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡುತ್ತಾ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳು ಬಹಳ ಅಗತ್ಯವಿದ್ದು ಇವರಿಂದಲೇ ಸಾಂಕ್ರಾಮಿಕ ರೋಗಗಳು ನಿರ್ಮೂಲನೆ ಮತ್ತು ನಿಯಂತ್ರಣಕ್ಕೆ ಬಂದಿರುವುದು ಶ್ಲಾಘನೀಯವೆಂದರು.

ತಮ್ಮ ವೃತ್ತಿಗೆ ಚುತಿ ಬರದಂತೆ ಕರ್ತವ್ಯ ನಿರ್ವಹಿಸುವ ಮೂಲಕ ಸಂಘಟನೆ ಬೆಳೆಸಿಕೊಂಡು ಹೋಗುವಂತೆ ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎಲ್.ಶ್ರೀನಿವಾಸ್ ಮತ್ತು ಜಿಲ್ಲಾ ಎನ್ಫೋಸ್೯ ಮೆಂಟ್ ಅಧಿಕಾರಿಗಳಾದ ಡಾ.ಆನಂದ್.ಎನ್ ರವರು 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ ಶುಭ ಕೋರಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘ ಕೊಡಗು ಜಿಲ್ಲಾ ಶಾಖೆ ಅದ್ಯಕ್ಷರಾದ ಜಿ.ವಿ.ಶ್ರೀನಾಥ್ ರವರು ಮಾತನಾಡಿ ನಮ್ಮ ವೃಂದವು ಸಾರ್ವಜನಿಕ ಬದುಕಿನಲ್ಲಿ ಸಾಂಕ್ರಾಮಿಕ ರೋಗಗಳು ಬರದಂತೆ ಮುಂಜಾಗ್ರತಾ ಕ್ರಮವಾಗಿ ಸೇವೆ ಸಲ್ಲಿಸುತ್ತಿದ್ದೇವೆ ಹಾಗೂ ಮೇಲಾಧಿಕಾರಿಗಳ ಆದೇಶದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾ ಬರುತ್ತಿದ್ದು,ನಮಗೆ ಅಧಿಕಾರಿಗಳು ನಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತ ನಮ್ಮೊಂದಿಗೆ ಸೌಜನ್ಯದಿಂದ ನಡೆದುಕೊಳ್ಳುತ್ತಾ ಗೌರವಿಸುತ್ತಿರುವುದಕ್ಕೆ ಕೃತಜ್ಞತೆ ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಇದೇ ಸಹಕಾರ ನೀಡುವಂತೆ ಕೋರಿದರು.

ಕಾರ್ಯಕ್ರಮದಲ್ಲಿ ಪದೊನ್ನೊತ್ತಿ ಪಡೆದು ಹಾಸನ ಜಿಲ್ಲೆಗೆ ವರ್ಗಾವಣೆಗೊಂಡ ಜಿಲ್ಲಾ ಮೇಲ್ವಿಚಾರಕರಾದ ಕಾಂತರಾಜು ಹಾಗೂ ಮೂರ್ನಾಡು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ದ.ಕನ್ನಡಕ್ಕೆ ವರ್ಗಾವಣೆ ಆದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚರಣ್ ಕುಮಾರ್ ರವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಡಗು ಜಿಲ್ಲಾ ಅದ್ಯಕ್ಷರಾದ ಅರುಣ್ ಕುಮಾರ್ ಎಂ.ಸಿ, ಖಜಾಂಚಿ ರಾಜೇಶ್ ಪಿ.ಡಿ, ರಾಜ್ಯ ಪರಿಷತ್ತಿನ ಬಾಬಣ್ಣ, ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿ ಡಾ.ಮಧುಸೂದನ್ ಎ.ಆರ್, ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್, ಸೋಮವಾರಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಇಂಧುದರ್, ಸಂಘದ ಗೌರವ ಅದ್ಯಕ್ಷ ಮಹೇಶ್, ಕಾರ್ಯದರ್ಶಿ ವಿಜೇಂದ್ರ, ಖಜಾಂಚಿ ವಿಶ್ವಜ್ಞ, ಉಪಾಧ್ಯಕ್ಷ ಶ್ರೀನಿವಾಸ್, ಜನಾರ್ದನ ರಾವ್, ಮುತ್ತು, ಶಶಿಕಾಂತ್, ಲೋಕೇಶ್, ಪ್ರವೀಣ್ ಮತ್ತಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0