Kodagu

ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ

admincoorgdaily

ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ತಪಾಸಣೆ

ಪೊನ್ನಪೇಟೆ, ಜ.27:- ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಮರೂರು ತಿತಿಮತಿ ಆಶ್ರಮ ಶಾಲೆಯಲ್ಲಿ 170 ವಿದ್ಯಾರ್ಥಿಗಳಿಗೆ ಕಣ್ಣಿನಪೊರೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು.

 ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಹಾಗೂ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಆಸ್ಪತ್ರೆ ವತಿಯಿಂದ ಮಂಗಳವಾರ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡಗಳ ಜಿಲ್ಲಾ ಅಧಿಕಾರಿ ಎಸ್. ಹೊನ್ನೇಗೌಡ ಉದ್ಘಾಟಿಸಿ ಮಾತನಾಡಿದ ಅವರು ಬುಡಕಟ್ಟು ಸಂಶೋಧನಾ ಸಂಸ್ಥೆ ರಾಜ್ಯಾದ್ಯಂತ ಆಶ್ರಮ ಶಾಲೆಗಳಲ್ಲಿ ಆರೋಗ್ಯ ತಪಾಸಣೆ ಮಾಡಿಸುತ್ತಾ ಬರುತ್ತಿದೆ.

ಇದರಿಂದ ಮಕ್ಕಳಿಗೆ ಅನುಕೂಲವಾಗಿದೆ ಎಂದ ಅವರು ಕೊಡಗಿನಲ್ಲಿ 218 ಬುಡಕಟ್ಟು ಕಾಲೋನಿಗಳಿದ್ದು ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಶ್ರಮ ಶಾಲೆಗಳ ಸುತ್ತಮುತ್ತಲ ಕಾಲೋನಿಗಳ ಜನರು ಹಾಗೂ ವಿದ್ಯಾರ್ಥಿಗಳಿಗೆ ಫೆಬ್ರವರಿ 15ರೊಳಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

 ಸರ್ಕಾರ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಮರೂರು ತಿತಿಮತಿ ಆಶ್ರಮಶಾಲೆ ಹಾಗೂ ಕುಶಾಲನಗರ ಆಶ್ರಮ ಶಾಲೆಗಳನ್ನು 1ನೇ ತರಗತಿಯಿಂದ ಪಿಯುಸಿ ವರೆಗೆ ಮೇಲ್ದರ್ಜೆಗೇರಿಸಿ 16 ಕೋಟಿ ರೂಗಳನ್ನು ಮಂಜೂರು ಮಾಡಿದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತೇಜರಾಜ ಅಲಸಬಾಳ್, ಮುಖ್ಯಶಿಕ್ಷಕರಾದ ಪ್ರಶಾಂತ್ ಕುಮಾರ್, ಡಾ. ವಿನಯ್. ಡಾ. ನಂದಿನಿ, ಡಾ. ಪ್ರಕೃತಿ, ಸುಹೇಬ್, ನದೀಮ್, ಮನೋಜ್, ಪ್ರಮೋದ್, ರಾಜು ಹಾಜರಿದ್ದರು.