ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಜಾಥಾ; ಹಿಂದೂಗಳು ಸಂಘಟಿತರಾಗಬೇಕು;ಶ್ರೀಕಾಂಕ್ ಶೆಟ್ಟಿ ಕಾರ್ಕಳ

Apr 2, 2026 - 09:09
 0  388
ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಜಾಥಾ;  ಹಿಂದೂಗಳು ಸಂಘಟಿತರಾಗಬೇಕು;ಶ್ರೀಕಾಂಕ್ ಶೆಟ್ಟಿ ಕಾರ್ಕಳ
ಜಾಥಾ

ನಾಪೋಕ್ಲು: ಕೊಡಗಿನ 35 ನಾಡುಗಳಲ್ಲಿ ನಾಪೋಕ್ಲು ಅತ್ಯಂತ ಶ್ರೇಷ್ಠ ನಾಡು ಇಗ್ಗುತಪ್ಪ ದೇವರ ನೆಲೆಯಾದ ನಾಲ್ಕು ನಾಡಿನಲ್ಲಿ ಹಿಂದುಗಳು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯಕಾರಿ ಸಮಿತಿಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

  ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಹಿಂದು ಜನಜಾಗೃತಿ ಜಾಥಾದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ದಿಕ್ಕೂಚಿ ಭಾಷಣ ಮಾಡಿದರು.

 ಹಿಂದೂ ಸಮಾಜದಲ್ಲಿ ಅನೇಕ ಜಾತಿಮತ, ಪಂಥಗಳು ಇದ್ದು ಸಮಾಜದೊಳಗಡೆ ಜಾತಿ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಆಗುತ್ತಿದೆ, ಸಮಾಜದಲ್ಲಿ ಬೆಂಕಿ ಹುಟ್ಟದ ಹಾಗೆ ಜಾಗೃತ ಮಾಡಬೇಕಾಗಿದೆ. ಹಿಂದೂ ಸಮಾಜ ಸಂಘಟನೆ ಆಗಬೇಕಾದ ಅನಿವಾರ್ಯತೆ ಇದೆ. ಹಿಂದೂ ಸಮಾಜ ಸಂಘಟಿತ ಸಮಾಜ ಎಂಬ ಧೈಯವನ್ನು ಇಟ್ಟುಕೊಂಡು ಇಂದಿನ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದರು.

ನಾಪೋಕ್ಲು ಸುರಕ್ಷಾ ಸಮಿತಿ ಸಂಚಾಲಕ ಕರಮಂಡ ಲವ ನಾಣಯ್ಯ ಮಾತನಾಡಿ, 'ರಾಷ್ಟ್ರೀಯ ಸ್ವಯಂಸೇವಾ ಸಂಘಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಜಿಲ್ಲೆಯ 80 ಮಂಡಲಗಳಲ್ಲಿ ಹಿಂದೂ ಸಮಾವೇಶವನ್ನು ಆಯೋಜಿಸಲಾಗಿದೆ. ನಾಲ್ಕುನಾಡಿನಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು.

ನಾಪೋಕ್ಲು ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಮಿತಿ ಸದಸ್ಯ ಕೊಕ್ಕೇರ ಅಜಿತ್‌, ನಾಪೋಕ್ಲು ಹಿಂದೂ ಸುರಕ್ಷಾ ಸಮಿತಿಯ ಸಹ ಸಂಚಾಲಕರಾದ ರಾಧಾಕೃಷ್ಣ ರೈ, ಬಿ.ಎಂ.ಪ್ರತಿಪ, ಬಿಜೆಪಿ ಮುಖಂಡರಾದ ಕೆ.ಜಿ.ಬೋಪಯ್ಯ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಕಾರ್ಯದರ್ಶಿ ಚಲನ್, ಮುಖಂಡರಾದ ಎ.ಕೆ ಮನುಮುತ್ತಪ್ಪ, ಮಣವಟ್ಟಿರ ಹರೀಶ್‌ ಕುಶಾಲಪ್ಪ, ಅಪ್ಪಚಿರ ಗೌತಮ್, ಪಾಡಿಯಮ್ಮಂಡ ಮನು ಮಹೇಶ್ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಮುನ್ನ ನಾಪೋಕ್ಲು ಭಗವತಿ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು. ಹಳೆ ತಾಲೂಕು ಜಂಕ್ಷನ್ ಬಳಿ ಶಿವಾಚಾಳಿಯಂಡ ಜಗದೀಶ್ ಈಡುಗಾಯಿ ಒಡೆದು ಮೆರವಣಿಗೆಗೆ ಚಾಲನೆ ನೀಡಿದರು.

ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಬೋಜೇಗೌಡ, ಕೊಡಗು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುನಿಲ್, ಹಿಂದುದು ಸುರಕ್ಷಾ ಸಮಿತಿಯ ಸದಸ್ಯ ಕಾಂಗಡ ಜಾಲಿ ಪೂವಪ್ಪ, ಸರಸ್ವತಿ ಮನೋಹರಿ, ಹೇಮಾ ಅಜಿತ್ ಮಾದಾಪುರ ಭಾಗವಹಿಸಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 0