ಅರಮೇರಿಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮ
ವಿರಾಜಪೇಟೆ ಜ:31: ಅನೇಕ ಧರ್ಮ ಸಂಸ್ಕೃತಿಗಳು ಜೀವಿಸಿ ಕಣ್ಮರೆಯಾದ ನಿದರ್ಶಗಳಿವೆ. ಯಾವ ಧರ್ಮ ಪ್ರಾರಂಭ ತಿಳಿದಿಲ್ಲವೋ, ಅಂತ್ಯ ಕಾಣುವುದಿಲ್ಲವೋ ಅದೇ ಸನಾತನ ಧರ್ಮ ಹಿಂದೂ ಧರ್ಮ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸುಳ್ಯ ವಿಭಾಗದ ಕಾರ್ಯವಾಹಕ ಸುಭಾಷ್ ಚಂದ್ರ ಕಳಂಜೆ ಅವರು ಅಭಿಮತ ವ್ಯಕ್ತಪಡಿಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ಅರಮೇರಿ ಮಂಡಲ ವತಿಯಿಂದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ವಿದ್ಯಾಪೀಠದ ಶಾಲಾ ಮೈದಾನದಲ್ಲಿ ಬೃಹತ್ ಹಿಂದೂ ಸಂಗಮ ಸಮಾವೇಶ ನಡೆಯಿತು.
ಕಾರ್ಯಕ್ರಮಕ್ಕೆ ಆಗಮಿಸಿ ದಿಕ್ಸೂಚಿ ಭಾಷಣ ಮಾಡಿದ ಸುಭಾಷ್ ಚಂದ್ರ ಅವರು, ಸಾವಿರಾರು ವರ್ಷಗಳ ಇತಿಹಾಸ ಉಳ್ಳ ಭಭವ್ಯ ಭಾರತದಲ್ಲಿ ಹಿಂದೂ ಧರ್ಮದ ಆಚರಣೆಯ ಮೇಲೆ ದೇಶಿ ಮತ್ತು ವಿದೇಶಿಗಳ ಅಕ್ರಮಣ ನಡೆಯಿತು. ಪ್ರಾರಂಭ ಮತ್ತು ಅಂತ್ಯ ಕಾಣದ ಸನಾತನ ಧರ್ಮವು ಇಂದಿಗೂ ಅಜಮಾರವಾಗಿ ನೆಲೆಕಂಡಿದೆ. ವೀರರ ನಾಡು ಯೋಧರ ನಾಡು ಕೃಷಿ ನಾಡು ಎಂದು ಕೊಡಗನ್ನು ವರ್ಣಿಸುತ್ತೇವೆ. ಈ ಮಣ್ಣಿನ ಧೀಮಂತ ಸಂಸ್ಕೃತಿ ಉಳಿವಿಗಾಗಿ ಆಚರಣೆಗಳು ಹಬ್ಬ ಹರಿದಿನಗಳು ಸಂಸ್ಕೃತಿಗಳನ್ನು ಮರೆಯದೆ ಪಾಲಿಸುವಂತಾಗಬೇಕು. ಹಿಂದೂ ಸಂಸ್ಕೃತಿ ಆರ್.ಎಸ್.ಎಸ್ ಪರಿಚಯ ಮಾಡಲಿಲ್ಲ. ಬದಲಿಗೆ ದೇವಾದಿ ದೇವತೆಗಳು ಸೃಷ್ಟಿ ಮಾಡಿದ ಪುಣ್ಯಭೂಮಿ, ಇದು. ಇಲ್ಲಿ ಹುಟ್ಟಿರುವ ನಾವು ಪುಣ್ಯವಂತರು. ಆಚರಣೆಗಳು, ಸಂಸ್ಕೃತಿ, ದೇಶ, ರಾಷ್ಟೃ ಜಾಗೃತಿಗಾಗಿ ಸಮಾಜ ಸಂಘಟನೆಗಾಗಿ ಆರ್.ಎಸ್.ಎಸ್ ಜಾಗೃತಿಯ ಕಾರ್ಯನಿರ್ವಹಿಸಕೊಂಡು ತನ್ನ 100 ವರ್ಷ ಪೂರೈಸಿದೆ. ಜಾತಿ, ವರ್ಗ, ವರ್ಣಗಳ ನಡುವೆ ಘರ್ಷಣೆಗಳನ್ನು ಉಂಟುಮಾಡುವ ಬಾಹ್ಯ ಶಕ್ತಿಗಳ ವಿರುದ್ದ ಹೋರಾಟಕ್ಕೆ ಹಿಂದೂ ಸಮಾಜ ಕಠಿ ಬದ್ಧರಾಗಬೇಕು. ಪ್ರಸ್ತುತವಾಗಿ ತಮ್ಮ ಭಾಷೆಗಳ ಮೇಲೆ ಆಂಗ್ಲ ಭಾಷೆಯ ದಬ್ಬಾಳಿಕೆಯಿಂದ ಮಾತೃ ಭಾಷೆ ಮರೆಯುವ ಹಂತ ತಲುಪಿದೆ. ಅಧುನಿಕತೆಯ ಹೆಸರಿನಲ್ಲಿ ಸಂಬ್ಗಳು ಮರೆಮಾಚಿವೆ. ಪರಿಸರ ಕಾಳಜಿಯನ್ನು ಮರೆತು ನಾವು ಅನಾರೋಗ್ಯ ಪೀಡಿತರಾಗುತ್ತಿದ್ದೇವೆ. ಕುಟುಂಗಗಳಲ್ಲಿ ಸಾಮರಸ್ಯಯಿಲ್ಲದೆ ಕುಟುಂಬ ವಿಭಜನೆಯತ್ತಾ ಸಾಗಿದೆ. ಸಂಘ ಮಾರ್ಗದರ್ಶನ ನೀಡಿರುವ ಪಂಚ ಪರಿವರ್ತನೆಯಿಂದ ಸುಭಿಷ್ಟ ಸಮಾಜ ನಿರ್ಮಾಣ ಮಾಡಲು ಪಣತೊಡಲು ಸಿದ್ದರಾಗೋಣ ಎಂದು ಕರೆ ನೀಡಿದರು.
ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಚಾಲನೆ ನೀಡಿ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಸಭಾ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಪೀಠಾಧೀಪತಿಗಳಾದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಜೀಗಳು, ಸಂಘಟನಾತ್ಮಕ ಸಮಸ್ಯೆಗಳು ಎದುರಾದಲ್ಲಿ ಸಂಘಟನೆಯ ಶಕ್ತಿ ಜಾಗೃತವಾಗಬೇಕು. ವಿದೇಶಿಯೋರ್ವ ಭಾರತದಲ್ಲಿ ಹುಟ್ಟುವ ಪ್ರತಿಯೊಬ್ಬ ವ್ಯಕ್ತಿ ಧರ್ಮದಲ್ಲೇ ಹುಟ್ಟುತ್ತಾನೆ, ಧರ್ಮದಲ್ಲೇ ಬದುಕುತ್ತಾನೆ ಧರ್ಮದಲ್ಲೇ ಅಂತ್ಯವಾಗುತ್ತಾನೆ. ನಮ್ಮ ಆಚಾರ ವಿಚಾರಗಳು ಹಲವು ಇದ್ದರು ಹುಟ್ಟುನಿಂದ ಅಂತ್ಯದವರೆಗೂ ಧರ್ಮವೇ ಎಲ್ಲ.ನಮ್ಮ ಅಸ್ಮಿತೆ, ಸಂಸ್ಕೃತಿಯ ಉಳಿಯು ಧರ್ಮವನ್ನು ಕಾಪಾಡುವುದು.ಆಧುನಿಕತೆಯಲ್ಲಿ, ತಂತ್ರಜ್ಞಾನದಲ್ಲಿ ಜನಸಂಖ್ಯೆಯಲ್ಲಿ, ಆರ್ಥಿಕ ವ್ಯವಸ್ಥೆಯಲ್ಲಿ, ಕೃಷಿ ಪದ್ದತಿಯಲ್ಲಿ ಬಲಿಷ್ಟವಾಗಿ ಮುಂದುವರೆಯುತ್ತಿರುವ
ನಮ್ಮ ರಾಷ್ಟ್ರಕ್ಕೆ ಜಾತಿ ವ್ಯವಸ್ಥೆ ವರ್ಗ, ವರ್ಣ ವ್ಯವಸ್ಥೆ,ಮೇಲು ಕೀಲು ಎನ್ನುವ ವ್ಯವಸ್ಥೆಗಳಿಂದಾಗಿ ಹಿನ್ನಡೆ ಅನುಭವಿಸುತಿದ್ದೇವೆ. ಇದನ್ನು ದಮನ ಮಾಡಲು ಸಂಘಟಿತ ಸಧರ್ಮ ಪರಿವಾಖ್ಯದಡಿಯಲ್ಲಿ ಸಮಾಜ ಪರಿವರ್ತನೆಗೆ ನಾವುಗಳು ಅಣಿಯಾಗಬೇಕು. ಜಗತ್ತಿನಲ್ಲಿ ಕೊಡುವ ಶಕ್ತಿಯಿರುವಂತದ್ದು ಇರ್ವರಿಗೆ ಮಾತ್ರ ಒಂದು ಧರೆಗೆ ಇನ್ನೋಂದು ದರಿದ್ರೆಗೆ, ಅಂದರೆ ಭೂಮಿ ಮತ್ತು ತಾಯಿಗೆ.ತಾಯಿಯು ಉತ್ತಮ ಸಂತಾನ, ಉತ್ತಮ ಆಲೋಚನೆ, ಉತ್ತಮ ಗುಣವನ್ನು ಮತ್ತು ರಾಷ್ಠೃ ಭಕ್ತಿಯ ಚಿಂತನೆಯನ್ನು ಕರುಣಿಸಬೇಕು. ಧರ್ಮ ಚಿಂತನೆ, ರಾಷ್ಟ್ರ ಭಕ್ತಿ, ಜಾಗೃತ ಸಮಾಜ ಉದ್ದಾರಕ್ಕೆ ಸಮಾಜದ ಪ್ರತಿಯೋಬ್ಬರು ನಿರ್ಮಾತರಾಗಬೇಕು ಎಂದು ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ಸಂಚಾಲಕರಾದ ರಾಜೀವ್ ಕಾರ್ಯಪ್ಪ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಸೋಮೆಯಂಡ ಕೆ.ಪೂವಮ್ಮ, ಬಾಳೆಕುಟ್ಟೀರ ಮಂದಣ್ಣ, ಮತ್ತು ಕಟ್ಟೇರ ಕಾವೇರಪ್ಪ ಉಪಸ್ಥಿತರಿದ್ದರು.
ಮಲ್ಲಂಮಟ್ಟಿ ಜಂಕ್ಷನ್ ನಿಂದ ಆರಂಭವಾದ ಶೋಭಾಯಾತ್ರೆಯು ಶ್ರೀ ಶಾಂತಮಲ್ಲಿಕಾರ್ಜುನ ವಿದ್ಯಾಪೀಠದ ಶಾಲಾ ಮೈದಾನದಲ್ಲಿ ಕೊನೆಗೊಂಡಿತ್ತು. ಕೊಡಗಿನ ಸಾಂಪ್ರದಾಯಿಕ ವಾಲಗ ವಾದ್ಯ, ಕುಂಞರ ಕಾವೇರಿಯಪ್ಪ ತಂಡದವರಿಂದ ದುಡಿಕೊಟ್ಟ್ ಪಾಟ್, ಹೆಗ್ಗಳ ರುಧ್ರಂ ಮಹಿಳಾ ತಂಡದಿಂದ ಚೆಂಡೆ ವಾದ್ಯ, ತೋಮರ ಗ್ರಾಮದ ಶಾರದ ತಂಡದವರಿಂದ ಉರುಟ್ಟಿಕೊಟ್ಟ್ ಪಾಟ್ ಶೋಭಾಯಾತ್ರೆಗೆ ಸಾತ್ ನೀಡಿತು. ಮೈತಾಡಿ, ಅರಮೇರಿ, ಮತ್ತು ಕದನೂರು ಗ್ರಾಮದ ಹಿಂದೂ ಭಾಂದವರು ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು.
ಆಯೋಜನಾ ಸಮಿತಿಯ ಅಧ್ಯಕ್ಷರಾದ ಸೋಮೆಯಂಡ ರೇಶಾ ತಿಮ್ಮಯ್ಯ, ಕುಂಬೇಯಂಡ ಗಣೇಶ್, ಹಿಂದೂ ಸಂಗಮ ಅಯೋಜನಾ ಸಮಿತಿಯ ಸದಸ್ಯರು ಕಾರ್ಯಕರ್ತರು ಸೇರಿದಂತೆ ಅರಮೇರಿ ಮಂಡಲದ ವಿವಿಧ ಭಾಗಗಳಿಂದ ಆಗಮಿಸಿದ ಹಿಂದೂ ಭಾಂದವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ವರದಿ;ಕಿಶೋರ್ ಕುಮಾರ್ ಶೆಟ್ಟಿ
What's Your Reaction?
Like
1
Dislike
0
Love
0
Funny
0
Angry
0
Sad
1
Wow
0
