ವಾಣಿಜ್ಯ ಸಿಲಿಂಡರ್ ಕೊರತೆಯಿಂದಾಗಿ ಹೋಟೆಲ್‌ಗಳು ಬಂದ್;ಸಹಾಯಧನ ಮಂಜೂರು ಮಾಡಲು ಮನವಿ ಸಲ್ಲಿಕೆ
admincoorgdaily

ಮಡಿಕೇರಿ;ಮಧ್ಯ ಪ್ರಾಚ್ಯ ಯುದ್ಧದ ಕಾರಣದಿಂದ ವಾಣಿಜ್ಯ ಬಳಕೆಯ ಸಿಲಿಂಡರ್ ಕೊರತೆ ಉಂಟಾಗಿ ಹೋಟೆಲ್ ಗಳು ಬಂದ್ ಮಾಡುತ್ತಿದ್ದು ಹೋಟೆಲ್ ಉದ್ಯಮದಿಂದ ಜೀವನ ಸಾಗಿಸುತ್ತಿರುವ ಅಸಂಘಟಿತ ಕಾರ್ಮಿಕರು ಬೀದಿ ಪಾಲಾಗಿದ್ದು ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಸರ್ಕಾರದಿಂದ ಸಹಾಯಧನ ಮಂಜೂರು ಮಾಡುವಂತೆ ಎಸ್.ಡಿ.ಟಿ.ಯು. ವತಿಯಿಂದ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭ ನಿಯೋಗದಲ್ಲಿ ಎಸ್ ಡಿ ಟಿ ಯು ಕೊಡಗು ಜಿಲ್ಲಾ ಸಮಿತಿಯ ಎಂ.ಎ. ಅಬ್ದುಲ್ ರಜಾಕ್, ಅಲ್ತಾಫ್ ಕೊಂಡಂಗೇರಿ, ಅಜೀಸ್ ಕುಶಾಲನಗರ ಇವರು ಉಪಸ್ಥಿತರಿದ್ದರು.