ಹುಲಿತಾಳ : ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಹಾನಿ : ತಪ್ಪಿದ ಬಾರಿ ಅನಾಹುತ ಮನೆಯೊಳಗಿದ್ದವರು ಅಪಾಯದಿಂದ ಪಾರು
ಮಡಿಕೇರಿ : ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಹಲವೆಡೆ ಅನಾಹುತಗಳು ಸಂಭವಿಸಿವೆ. ಮಡಿಕೇರಿ ತಾಲೂಕಿನ ಹುಲಿತಾಳ ಗ್ರಾಮದಲ್ಲಿ ಎಚ್.ಟಿ. ಜಾನಕಿ ಎಂಬವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ.
ರಾತ್ರಿ ಸುಮಾರು 8.30ರ ವೇಳೆಗೆ ಮನೆಯ ಮುಂಭಾಗದ ಕೋಣೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್, ಆ ವೇಳೆ ಮನೆಯಲ್ಲಿ ಇದ್ದರೂ ಅಪಾಯದಿಂದ ಪಾರಾಗಿದ್ದಾರೆ. ಮನೆಯೊಳಗಿನ ವಸ್ತುಗಳು ಜಖಂಗೊಂಡಿದ್ದು, ಉಳಿದ ಕೋಣೆಗಳ ಗೋಡೆಗಳಿಗೂ ಬಿರುಕು ಬಿದ್ದಿದೆ ಎಂದು ಜಾನಕಿಯವರ ಪುತ್ರ ಹರೀಶ್ ತಿಳಿಸಿದ್ದಾರೆ. ಸ್ಥಳೀಯ ಪಂಚಾಯಿತಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
✍🏻ಅಶೋಕ್_ಮಡಿಕೇರಿ