ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿಯ ಹತ್ಯೆ ಮಾಡಿ ಬೆಡ್ ನನ್ನೊಳಗೆ ಬಚ್ಚಿಟ್ಟು ಪತಿ ಪರಾರಿ! : ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ

Oct 8, 2025 - 22:06
 0  816
ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿಯ ಹತ್ಯೆ ಮಾಡಿ ಬೆಡ್ ನನ್ನೊಳಗೆ ಬಚ್ಚಿಟ್ಟು ಪತಿ ಪರಾರಿ! :  ಮೂರು ದಿನಗಳ ಬಳಿಕ ಪ್ರಕರಣ ಬೆಳಕಿಗೆ
Photo credit: Decan herald

ಬೆಳಗಾವಿ, ಅ. 08: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಭೀಕರವಾದ ಹತ್ಯೆ ಪ್ರಕರಣ ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ.

 ಮದುವೆಯಾದ ನಾಲ್ಕು ತಿಂಗಳಲ್ಲೇ ಪತಿ ಆಕಾಶ್ ಎಂಬಾತ ಪತ್ನಿ ಸಾಕ್ಷಿ ಕಂಬಾರ (20) ಅವರನ್ನು ಕೊಲೆಗೈದು, ಶವವನ್ನು ಬೆಡ್ ನೊಳಗೆ ಮುಚ್ಚಿಟ್ಟು ಪರಾರಿಯಾದ ಘಟನೆ ನಡೆದಿದೆ.

 ಘಟನೆಯ ಬಗ್ಗೆ ತಿಳಿದಂತೆ ಮೂಡಲಗಿ ತಹಶೀಲ್ದಾರ್ ಶ್ರೀಶೈಲ್ ಗುಡಮೆ ಮತ್ತು ಗೋಕಾಕ್ ಡಿವೈಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೂರು ದಿನಗಳ ಹಿಂದೆ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಆರೋಪಿ ಪತಿ ಶವವನ್ನು ಬಚ್ಚಿಟ್ಟು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಊರಿಗೆ ಹೋಗಿದ್ದ ಅತ್ತೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಸಾಕ್ಷಿ ಕಂಬಾರ ಮತ್ತು ಆಕಾಶ್ ಅವರ ವಿವಾಹ ನಾಲ್ಕು ತಿಂಗಳ ಹಿಂದೆ ನಡೆಯಿತ್ತು. ಈ ಘಟನೆ ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪರಾರಿಯಾದ ಪತಿಯನ್ನು ಬಂಧಿಸಲು ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

What's Your Reaction?

Like Like 1
Dislike Dislike 1
Love Love 0
Funny Funny 1
Angry Angry 1
Sad Sad 5
Wow Wow 0