ಭರವಸೆ ನೀಡಿದ್ದೆ ಈಡೇರಿಸಲು ಬದ್ದನಾಗಿದ್ದೇನೆ;ಶಾಸಕ ಎಎಸ್ ಪೊನ್ನಣ್ಣ

Jan 17, 2026 - 12:59
 0  686
ಭರವಸೆ ನೀಡಿದ್ದೆ ಈಡೇರಿಸಲು ಬದ್ದನಾಗಿದ್ದೇನೆ;ಶಾಸಕ ಎಎಸ್ ಪೊನ್ನಣ್ಣ

ಮಡಿಕೇರಿ; ಚುನಾವಣೆ ಸಂಧರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದು ಅದನ್ನು ಈಡೇರಿಸಲು ಬದ್ದನಿದ್ದೇನೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಸ್ಪಷ್ಟನೆ ನೀಡಿದ್ದಾರೆ.

ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರವನಾಡು ಹಾಗೂ ಮದೆ ಪಂಚಾಯತ್ ವ್ಯಾಪ್ತಿಯ ಅವಂದೂರು ಗ್ರಾಮದಲ್ಲಿ ವಿವಿಧ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಕ್ಷೇತ್ರದ್ಯಾದಂತ ರಸ್ತೆಗಳ ಅಭಿವೃದ್ಧಿ ಗೆ ಮನವಿಗಳ ಮಹಾಪೂರವೇ ಹರಿದು ಬರುತ್ತಿದ್ದು ಆದ್ಯತೆ ಮೇರೆಗೆ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ ಅವರು ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

 ಬೆಟ್ಟಗೇರಿ ಕೇಟೋಳಿ ಕಾರುಗುಂದ ರಸ್ತೆ,ಕಾಳೇರಮ್ಮನ ಕುಟುಂಬಸ್ಥರ ರಸ್ತೆ, ಕಡ್ಯದ ಕುಟುಂಬಸ್ಥರ ರಸ್ತೆ, ನಿಂಗಪ್ಪನ ಕುಟುಂಬದವರ ಮನೆಗೆ ಹೋಗುವ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಅವರು ಹೆರವನಾಡು ಮೇದರ ಸಮುದಾಯ ಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ತಮ್ಮ ನೆಚ್ಚಿನ ಶಾಸಕರು ತಮ್ಮ ಮನೆಗೆ ಬಂದು ಆತಿಥ್ಯ ಸ್ವೀಕರಿಸಿದನ್ನು ಕಂಡು ಹರ್ಷಗೊಂಡ ಗ್ರಾಮಸ್ಥರು ಅವರನ್ನು ಸನ್ಮಾನಿಸಿದರು. ಮಕ್ಕಳು ಮತ್ತು ಮಹಿಳೆಯರು ಶಾಸಕರೊಂದಿಗೆ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ತಮ್ಮ ಕುಟುಂಬದ ಐತಿಹಾಸಿಕ ಹಿನ್ನಲೆಗಳನ್ನು ಶಾಸಕರಿಗೆ ವಿವರಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ರಾದ ತೆನ್ನಿರ ಮೈನಾ, ಬೆಟ್ಟಗೇರಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೊಡಗನ ತೀರ್ಥ ಪ್ರಸಾದ್,ಬೆಟ್ಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಳಿಯಂಡ ಕಮಲಾ ಉತ್ತಯ್ಯ,ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಹೊಸೂರು ಸೂರಜ್,ಡಿಸಿಸಿ ಸದಸ್ಯರಾದ ಕೇಟೋಳಿರ ಮೋಹನ್ ರಾಜ್,ಪಿ.ಎಲ್.ಸುರೇಶ್ ಸಂಪಾಜೆ,ಕೊಡವ ಸಾಹಿತ್ಯ ಅಕಾಡಮಿ ಸದಸ್ಯರಾದ ನಾಪಂಡ ಗಣೇಶ್, ಪ್ರಮುಖರಾದ ಕಾಳೇರಮ್ಮನ ಕುಮಾರ್,ಬಾಳಾಡಿ ಪ್ರತಾಪ್ ಕುಮಾರ್,ಪೂಜಾರಿರ ಪ್ರದೀಪ್ ಕುಮಾರ್, ಪಟ್ಟಡ ದೀಪಕ್,ಮಜೀದ್ ಬೆಟ್ಟಗೇರಿ, ಶಾಹಿದ್ ಬೆಟ್ಟಗೇರಿ,ಕೋಡಿ ಮೋಟಯ್ಯ,ಅರಂಬೂರು ನಾಗೇಶ್,ಹನೀಫ್ ಸಂಪಾಜೆ ಸೇರಿದಂತೆ ಕೇಟೋಳಿ ಕುಟುಂಬಸ್ಥರು, ಕಾಳೇರಮ್ಮನ ಕುಟುಂಬಸ್ಥರು, ಕಡ್ಯದ ಕುಟುಂಬಸ್ಥರು, ನಿಂಗಪ್ಪನ ಕುಟುಂಬಸ್ಥರು, ಮೇದರ ಕಾಲೋನಿ ನಿವಾಸಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1