ಅಕ್ರಮ ಚಿಪ್ಪು ಹಂದಿಯ ಚಿಪ್ಪು ಪತ್ತೆ; ಕಾರು ಸಮೇತ ಮೂವರ ಬಂಧನ

May 6, 2026 - 16:25
 0  1.8k
ಅಕ್ರಮ ಚಿಪ್ಪು ಹಂದಿಯ ಚಿಪ್ಪು ಪತ್ತೆ; ಕಾರು ಸಮೇತ ಮೂವರ ಬಂಧನ

ಮಂಗಳೂರು;ದಿನಾಂಕ 05-05-2026 ರಂದು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ದೊರೆತ ಮಾಹಿತಿಯಂತೆ ಮಂಗಳೂರು ಕದ್ರಿ ಉದ್ಯಾನವನದ ಬಳಿಯಲ್ಲಿ ಚಿಪ್ಪು ಹಂದಿಯ ಚಿಪ್ಪುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದಾರೆ ಎಂಬುದಾಗಿ ದೊರೆತ ಮಾಹಿತಿಯಂತೆ ಸಮಯ ಮದ್ಯಾಹ್ನ 03.00 KA 05 MS 1049 2 ಗಂಟೆಗೆ ಮಂಗಳೂರು ಕದ್ರಿ ಉದ್ಯಾನವನದ ಬಳಿಯಲ್ಲಿ ಹೋಗಿ ದೃಡಪಡಿಸಿಕೊಂಡು ಬಣ್ಣದ ಮಾರುತಿ, ಸ್ವೀಫ್ಟ್ ಕಾರಿನಲ್ಲಿ ಮೂರು ಜನ ಅಸಾಮಿಗಳು ಇದ್ದು ಚಿಪ್ಪು ಹಂದಿಯ ಚಿಪ್ಪುಗಳನ್ನು (pangolin scales) ಮಾರಾಟಕ್ಕೆ ಯತ್ನಿಸುತ್ತಿದ್ದವರನ್ನು ಖಚಿತಪಡಿಸಿಕೊಂಡು ತಕ್ಷಣ ದಾಳಿ ಮಾಡಿ ಮೂರು ಜನ ಆರೋಪಿಗಳನ್ನು ಮತ್ತು ಸ್ವತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

 ಸದರಿ ಆರೋಪಿಗಳಿಂದ 1. 5.200 ಕಿ.ಗ್ರಾಂ ತೂಕದ ಚಿಪ್ಪು ಹಂದಿಯ ಚಿಪ್ಪುಗಳು (pangolin scales) ಹಾಗೂ ಅಂದಾಜು 3 ಲಕ್ಷ ಮೌಲ್ಯದ .KA 05 MS 1049 ಬಿಳಿ ಬಣ್ಣದ ಮಾರುತಿ, ಸ್ವಿಫ್ಟ್ ಕಾರನ್ನು ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಾದ ಹೆಚ್ ಆರ್ ಜಗದೀಶ ಪ್ರಾಯ 50 ವರ್ಷ, ರಾಮಶೆಟ್ಟಿ, ಬೆಂಗಳೂರು ದಕ್ಷಿಣ, 2. ಸಿದ್ದು ನಾಯ್ಕ ಪ್ರಾಯ:38 ವರ್ಷ, ತಂದೆ: ದಿ: ತೋಳಚ್ಚ ನಾಯ್, ಕನಕಪುರ 3. ಬಾಬು ಪ್ರಾಯ: 48 ವರ್ಷ, ತಂದೆ: ಪೌತಿ ಟಿಪ್ಪು ಸಾಬ್, ಬನಶಂಕರಿ 2ನೇ ಹಂತ, ಬೆಂಗಳೂರುರವರುಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮಾನ್ಯ ಪೊಲೀಸ್ ಮಹಾನಿರೀಕ್ಷಕರು, ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು, ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್‌ನೆಟ್ಟೂರು ಐಪಿಎಸ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸು ಉಪನಿರೀಕ್ಷಕರಾದ ಶ್ರೀ ದಿಲೀಪ್ ಜಿ ಆರ್ ಹಾಗೂ ಸಿಬ್ಬಂದಿಗಳಾದ ತಾರನಾಥ ಎಸ್ ಮತ್ತು ಅಬ್ದುಲ್‌ರವೂಫ್‌ರವರು ಪಾಲ್ಗೊಂಡಿದ್ದಾರೆ.

What's Your Reaction?

Like Like 0
Dislike Dislike 0
Love Love 2
Funny Funny 1
Angry Angry 0
Sad Sad 0
Wow Wow 0