ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಪಿಯೂ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ ಕುರಿತ ತರಬೇತಿ ಕಾರ್ಯಗಾರ
ಕುಶಾಲನಗರ, ಜು.6: ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್ ಸಂಸ್ಥೆ) ಯಲ್ಲಿ ಸೋಮವಾರ ಆರಂಭಗೊಂಡ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಉಪನ್ಯಾಸಕರಿಗೆ ಸಂಯೋಜಿತ ಪಠ್ಯಕ್ರಮ (ಇಂಟಿಗ್ರೇಟೆಡ್ ಕರಿಕುಲಂ )ಕುರಿತು ತರಬೇತಿ ಕಾರ್ಯಗಾರವನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕೂಡಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕೊಡಗು ಜಿಲ್ಲೆ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ( ರಿ )ಹಾಗೂ ಉಪನ್ಯಾಸಕರ
ಸಂಘದ ಸಂಯುಕ್ತ ಆಶಯದಲ್ಲಿ ನಡೆಯಿತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎ. ಗಣಪತಿ, ಸರ್ಕಾರವು ಸರ್ಕಾರಿ ಪಿಯೂ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಸಿಇಟಿ ಮತ್ತು ನೀಟ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿರುವುದನ್ನು ಮನಗಂಡು ವಿಜ್ಞಾನ ಉಪನ್ಯಾಸಕರಿಗೆ ಇಂತಹ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳನ್ನು ಕಾಲೇಜು ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಲು ತರಬೇತಿಯನ್ನು ಹಮ್ಮಿಕೊಂಡಿದೆ.
ಈ ತರಬೇತಿಯಲ್ಲಿ ಸಂಪನ್ಮೂಲ ಉಪನ್ಯಾಸಕರು ಹೇಳಿಕೊಡುವ ವಿಚಾರಗಳನ್ನು ತಿಳಿದು ಕಾಲೇಜುಗಳಲ್ಲಿ ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು ನೋಡಲ್ ಅಧಿಕಾರಿ ಹಾಗೂ ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತನಾಡಿ, ಕೊಡಗು ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ವರ್ಷ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ ವಿಜ್ಞಾನ ವಿಷಯಗಳಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.
ಹಾಗಾಗಿ ಅವರಿಗೆ ಸಿಇಟಿ ನೀಟ್ ಗಳಿಗೆ ತರಬೇತಿ ನೀಡಿದರೆ ಸರ್ಕಾರಿ ಕಾಲೇಜುಗಳು ಉತ್ತಮ ಹೆಸರನ್ನು ಗಳಿಸಬಹುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ಉಪನ್ಯಾಸಕಿ ದಮಯಂತಿ ಕಾರ್ಯಗಾರದ ಉದ್ದೇಶವನ್ನು ತಿಳಿಸಿದರು. ಕಾರ್ಯಗಾರದಲ್ಲಿ ಡಯಟ್ ಸಂಸ್ಥೆಯ ನೋಡಲ್ ಅಧಿಕಾರಿ ಹೇಮಂತ್ ರಾಜ್ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ನ ಪ್ರಾಂಶುಪಾಲ ರಾಮಚಂದ್ರ ರಾಜೇ ಅರಸ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಉಪನ್ಯಾಸಕರ ಬೋಧನಾ ಸಾಮರ್ಥ್ಯ ಹಾಗೂ ವೃತ್ತಿ ಕ್ಷಮತೆಯನ್ನು ವೃದ್ಧಿಸಲು ಸಾಧ್ಯವಾಗುತ್ತವೆ. ಈ ಕಾರ್ಯಾಗಾರದಿಂದ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ದಪಡಿಸಲು ಸಹಕಾರಿಯಾಗಿದೆ ಎಂದರು. ಸಂಪನ್ಮೂಲ ಉಪನ್ಯಾಸಕರಾದ ಮೋಹನ್ ಸರ್ವರನ್ನು ಸ್ವಾಗತಿಸಿದರು. ಸಂಪನ್ಮೂಲ ಉಪನ್ಯಾಸಕಿ ಕೆ.ಎನ್. ಪಲ್ಲವಿ ವಂದಿಸಿದರು ಉಪನ್ಯಾಸಕ ಎಸ್.ಎಚ್. ಈಶ ಕಾರ್ಯಕ್ರಮ ನಿರೂಪಿಸಿದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0

