ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್‌ ಸೂಕ್ತವೇ: ಪ್ರತಾಪಸಿಂಹ ಪ್ರಶ್ನೆ

ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್‌ ಸೂಕ್ತವೇ: ಪ್ರತಾಪಸಿಂಹ ಪ್ರಶ್ನೆ

ಮೈಸೂರು:ದಸರಾ ಎನ್ನುವುದು ಜಾತ್ಯಾತೀತದ ಪ್ರತೀಕವಲ್ಲ. ಇದೊಂದು ಧಾರ್ಮಿಕ ಆಚರಣೆ ಆಗಿದೆ. ಹೀಗಾಗಿ ಭಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಸರಿಯೇ ಎಂದು ಪ್ರತಾಪಸಿಂಹ ಪ್ರಶ್ನಿಸಿದರು. ಮೈಸೂರಿನಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಭಾನು ಮುಷ್ತಾಕ್ ಅವರ ವೈಯುಕ್ತಿಕ ಧರ್ಮದ ಬಗ್ಗೆ ಹಾಗೂ ನಂಬಿಕೆ ಬಗ್ಗೆ ನಮಗೆ ಯಾವುದೇ ತಕರಾರು ಇಲ್ಲ. ಅದು ನಿಮ್ಮ ವೈಯಕ್ತಿಕ ವಿಚಾರ ಅದರ ಬಗ್ಗೆ ನಮಗೂ ಗೌರವವಿದೆ. ದಸರಾ ಎಂಬುದು ನಮ್ಮ‌ ಧಾರ್ಮಿಕತೆಯ ಪ್ರತೀಕ, ನಮ್ಮ ಹಬ್ಬವಾಗಿದೆ. ಇದನ್ನಾ ದಸರಾ, ನವರಾತ್ರಿ ಅಥವಾ ದುರ್ಗಾಪೂಜೆ ಏನೆಂದು ಬೇಕಾದರೂ ಕರೆದುಕೊಳ್ಳಿ. ಆದರೆ ಇದು ಧಾರ್ಮಿಕ ಹಬ್ಬ, ಧಾರ್ಮಿಕ‌ ಆಚರಣೆ ಆಗಿದೆ. ಮೈಸೂರಿನ ಯಧುವಂಶ ಶ್ರೀರಂಗಪಟ್ಟಣದಲ್ಲಿ ವಿಜಯನಗರ ಸಾಮ್ರಾಜ್ಯದ ಪತನ ನಂತರ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ.

ಇಂದಿಗೂ ಅರಮನೆಯಲ್ಲಿ ಶಾಸ್ತ್ರೋಕ್ತವಾಗಿ ಅರಮನೆಯಲ್ಲಿ ಆಚರಣೆಗಳು ನಡೆಯುತ್ತಿವೆ ಎಂದರು. ಪ್ರಜಾಪ್ರಭುತ್ವದ ಬಳಿಕ ಸಾರ್ವಜನಿಕ ಆಚರಣೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಹೊರತಾಗಿ ಇದು ಸೆಕ್ಯೂಲರಿಸಂ ಪ್ರತೀಕವಲ್ಲ. ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿ ಗೆ ಪೂಜೆ ಮಾಡಿ, ಪುಷ್ಪಾರ್ಚನೆ ಮಾಡಿ ವಿದ್ಯುಕ್ತವಾಗಿ ದಸರಾಗೆ ಚಾಲನೆ ನೀಡಲಾಗುತ್ತದೆ. ಭಾನು‌ ಮುಷ್ತಾಕ್ ಅವರಿಗೆ ತಾಯಿ ಚಾಮುಂಡಿ ಮೇಲೆ ನಂಬಿಕೆ ಇದಿಯಾ?, ನಮ್ಮ ಆಚರಣೆಗಳನ್ನು ಅವರು ಪಾಲಿಸುತ್ತಾ ಬಂದಿದ್ದಾರಾ? ಅವರನ್ನು ದಸರಾ ಉದ್ಘಾಟನೆಗೆ ಕರೆಯುವುದಾದರೆ ಅವರು ಇದುವರೆವಿಗೂ ತಾಯಿ ಚಾಮುಂಡಿ ಭಕ್ತೆ ಎಂದು ಎಲ್ಲಾದರೂ ತೋರಿಸಿಕೊಂಡಿದ್ದಾರಾ?, ಹಾಗಾದಾರೆ ಯಾಕಾದರೆ ಅವರನ್ನು ಕರೆಯುತ್ತಿದ್ದಿರಿ. ಇದು ಮೈಸೂರು ಮಹಾರಾಜರು ಪ್ರಾರಂಭಿಸಿದಂತಹ ಅಥವಾ ವಿಜಯನಗರ ಪತನ ನಂತರ ಮುಂದುವರೆಸಿಕೊಂಡು ಬಂದ ಆಚರಣೆ ಆಗಿದೆ ಎಂದರು.

 ಇದು ಸಂಪೂರ್ಣ ಧಾರ್ಮಿಕ ಕಾರ್ಯಕ್ರಮ ಆಗಿದೆ. ಎಲ್ಲೋ ಸರ್ಕಾರದ ಕಾರ್ಯಕ್ರಮದಲ್ಲಿ ಹೋಗಿ ಟೇಪ್ ಕಟ್ ಮಾಡುವ ಕಾರ್ಯಕ್ರಮವಲ್ಲ. ತಾಯಿ ಚಾಮುಂಡಿ ಮೇಲೆ ಅಚಲ, ನಂಬಿಕೆ ವಿಶ್ವಾಸವನ್ನು ಹಾಗೂ ಭಕ್ತಿ ಭಾವವನ್ನು ತೋರಿಸುವ ಕಾರ್ಯಕ್ರಮ‌, ಆಚರಣೆ ಇದಾಗಿದೆ. ಇದಕ್ಕೆ ಭಾನು ಮುಷ್ತಾಕ್ ಅವರು ಸೂಕ್ತ ವ್ಯಕ್ತಿ ಆಗುತ್ತಾರಾ?, ಮುಂದಿನ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಕರೆದು ಅಧ್ಯಕ್ಷರನ್ಮಾಗಿ ಮಾಡಿ ಗೌರವ ಕೊಡಿ. ಅದಕ್ಕೆ ಅವರು ಸೂಕ್ತ ವ್ಯಕ್ತಿ ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಬೂಕರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಧಾರ್ಮಿಕ ಅಚರಣೆಗೂ ಭಾನು ಮುಷ್ತಾಕ್ ಅವರಿಗೂ ಏನೂ ಸಂಬಂಧವಿದೆ. ಮಹಾರಾಜರು ಕಟ್ಟಿದ ವಿವಿಯಲ್ಲಿ ಓದಿ, ಅವರು ಕಟ್ಟಿದ ಅಣೆಕಟ್ಟು ನೀರು ಕುಡಿದ ನಿಮಗಂತೂ ಅವರ ಮೇಲೆ ಕೃತಜ್ಞತಾ ಭಾವ ಇಲ್ಲ. ದಸರಾ ಪರಂಪರೆಯನ್ನು ಒಡೆಯುವ ಕೆಲಸ ಯಾಕೆ ಮಾಡುತ್ತಿದ್ದಿರಿ? ಎಂದು ಪ್ರಶ್ನಿಸಿದರು. ಮೊದಲ ಬಾರಿ ಸಿಎಂ ಆದಾಗ ಬರಗೂರು ರಾಮಚಂದ್ರಪ್ಪರನ್ನು ಆಯ್ಕೆ ಮಾಡಿದಿರಿ. ಆತ ಇಲ್ಲಿಗೆ ಬಂದೂ ದೇವಾಲಯದ ಒಳಗೆ ಹೋಗಲ್ಲ, ದೀಪ ಹಚ್ಚಲ್ಲ ಎಂದರು. ಯಾಕಪ್ಪ ಬಂದಿರಿ ನೀವು ಅಲ್ಲಿಗೆ? ಹೀಗೆ ಇತಂಹ ಹಿಂದೂ ಆಚರಣೆಯ ವಿರೋಧಿಗಳನ್ನು ಏಕೆ ಕರೆಯುತ್ತೀರಿ. ಸದಾ ಹಿಂದೂ ಆಚರಣೆ, ಸಂಸ್ಕ್ಕೃತಿ ಬಗ್ಗೆ ತ್ವಿಚ್ಚಾವಾಗಿ ಮಾತನಾಡುವ ಗಿರೀಶ್ ಕಾರ್ನಾಡ್ ಅವರನ್ನು ಕರೆದಿದ್ದಿರಿ.

 ಈಗ ಮುಷ್ತಾಕ್ ಅವರನ್ನು ಕರೆಯುತ್ತಿದ್ದಿರಿ. ಅದರೊಟ್ಟಿಗೆ ಮಹಿಷಾ ದಸರೆಯಂತಹ ಅನಿಷ್ಠ ಪರಂಪರೆಯನ್ನು ಹುಟ್ಟು ಹಾಕಿದವರು ನೀವೇ ಇದ್ದಿರಿ. ಈ ರೀತಿಯ ಮೂಲಕ ಮಹಾರಾಜ ಮೇಲಿನ ದ್ವೇಷಕ್ಕೆ ಅವರ ಪರಂಪರೆಯನ್ನು ಒಡೆಯಲು ಹೊರಟಿದ್ದಿರಿ. ಯಾಕಾಗಿ ಇದನ್ನು ಮಾಡುತ್ತಿದ್ದಿರಿ ಎಂದರು. ನಾವು ಕೋವಿಡ್ ಸಂದರ್ಭದಲ್ಲಿ ಡಾ.ಮಂಜುನಾಥ್ ಹಾಗೂ ಮಾಜಿ ಸಿಎಂ‌ ಎಸ್.ಎಂ.ಕೃಷ್ಣ ಅವರನ್ನು ಕರೆದಿದ್ದೆವು. ಆಗ ಇಡೀ ಮೈಸೂರೇ ಅವರನ್ನು ಒಪ್ಪಿಕೊಂಡಿತ್ತು. ಎಸ್ ಎಲ್ ಬೈರಪ್ಪ ಅವರನ್ನು ಆಹ್ವಾನಿಸಿದೆವು. ಭಾನು ಮುಷ್ತಾಕ್ ಗೆ ಅವರು ಸರಿ ಸಮಾನರೇ ಅಲ್ಲ ಅವರದೇ ಆದ ದೊಡ್ಡ ಸಾಹಿತ್ಯ ಬಳಗ ಅವರಿಗಿದೆ.‌ ಧರ್ಮದಲ್ಲಿ ನಂಬಿಕೆ ಇರಿಸಿದ್ದವರನ್ನು ನಾವು ಕರೆದೆವು. ಅದಾದ ಬಳಿಕ ಬುಡಕಟ್ಟು ಸಮುದಾಯಕ್ಕೆ ಸೇರಿದ ದ್ರೌಪದಿ ಮರ್ಮು ಅವರನ್ನು ಕರೆದೆವು. ಆದರೆ ನೀವು‌ ಯಾವ ಪರಂಪರೆ ಹಾಕಿಕೊಡುತ್ತಿದಿರಿ ಸರ್, ನಿಮ್ಮ ಜಾತ್ಯಾತೀತ ಕಾರ್ಯಕ್ರಮ ಇದಲ್ಲ. ಇದೊಂದು ಧಾರ್ಮಿಕ ಆಚರಣೆಯಾಗಿದೆ. ಭಾನು ಮುಷ್ತಾಕ್ ಅವರ ಬಗ್ಗೆ ನಮಗೆ ಯಾವುದೇ ಅಪದವಿಲ್ಲ. ದಸರಾ ಹಿಂದೂ ಆಚರಣೆಯಾ ಅಥವಾ ಜಾತ್ಯಾತೀತ ಆಚರಣೆಯ ಹೇಳಬೇಕಿದೆ.

 ಭಾನುಮುಸ್ತಾಕ್ ಅವರು ಅಲ್ಲಾಹು ನಾ ಬಿಟ್ಟರೆ ಬೇರೆ ಯಾರು ದೇವರಲ್ಲ ಎಂದು ಅವರ ಧರ್ಮ ಹೇಳುತ್ತದೆ. ಈಗ ಅವರು ತಾಯಿ ಚಾಮುಂಡಿಗೆ ಪುಜೆ ಮಾಡಿದರೆ ಅವರ ಧರ್ಮಕ್ಕೆ ವಿರುದ್ಧ ಆಗಲ್ಲವೇ ಅದನ್ನು ಮಾಡುತ್ತಾರೆಯೇ ಕೇಳಿ ಹೇಳಿ?, ಅವರು ತಾಯಿ ಚಾಮುಂಡೇಶ್ವರಿ ಯಲ್ಲಿ ನಮಗೆ ನಂಬಿಕೆಯಿದೆ, ವಿಶ್ವಾಸವಿದೆ ವಿಶ್ವಾಸ ಇದೆ ಎಂದು ಹೇಳಲಿ ನಮಗೇನೂ ತಕರಾರು ಇಲ್ಲ ಎಂದು ತಿಳಿಸಿದರು.