ಅಯ್ಯಂಗೇರಿ:ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ
ಭಾಗಮಂಡಲ:ಅಯ್ಯಂಗೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ಉದ್ಘಾಟನೆಯನ್ನು ಇಂದು ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ನೆರವೇರಿಸಿದರು.
ಈ ಹಿಂದೆ ಅಯ್ಯಂಗೇರಿ ಗ್ರಾಮ ಪಂಚಾಯತ್ ಸ್ವಂತ ಕಟ್ಟಡ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಗಮನಿಸಿದ ಮಾನ್ಯ ಶಾಸಕರು, ನೂತನ ಕಟ್ಟಡಕ್ಕೆ ಮಂಜೂರಾತಿ ಒದಗಿಸಿದ್ದರು.
ಇಂದು ಸುಸಜ್ಜಿತವಾಗಿ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾನ್ಯ ಶಾಸಕರು, ಗ್ರಾಮ ಪಂಚಾಯತ್ ಜವಾಬ್ದಾರಿ ಸಂವಿಧಾನದ ಅಡಿಯಲ್ಲಿ ಅತ್ಯಂತ ಪ್ರಮುಖವಾಗಿರದ್ದು. ಗ್ರಾಮದ ಜನರಿಗೆ ನೇರವಾಗಿ ಸಂಪರ್ಕಕ್ಕೆ ಸಿಗುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಪ್ರತಿನಿಧಿಗಳಂತೆ ಜನರ ಕಷ್ಟಗಳಿಗೆ ಸ್ಪಂದಿಸಲು ತುಂಬಾ ಅನುಕೂಲಕರವಾಗಿದೆ.
ಗ್ರಾಮ ಪಂಚಾಯತ್ ಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸ ಬೇಕು ಮತ್ತು ಜನಸೇವೆಯ ಉದ್ದೇಶದಿಂದ ಚುನಾವಣೆಗೆ ನಿಲ್ಲಬೇಕೆ ಹೊರತು ಪ್ರತಿಷ್ಠೆಗೆ ಅಲ್ಲ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಯದುವೀರ್ ಒಡೆಯರ್, ಪಂಚಾಯಿತಿ ಅಧ್ಯಕ್ಷೇ ಪುಷ್ಪ ಮತ್ತು ಉಪಾಧ್ಯಕ್ಷೆ ಮಿಶ್ರಿಯ, ಪಂಚಾಯಿತಿ ಸದಸ್ಯರು ಆದ ನಾಳಿಯ0ಡ ಪಟ್ಟು ಚಂಗಪ್ಪ, ಆಚಿರ ಕಾವೇರಮ್ಮ, ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ಮತ್ತು ರಶೀದ್ ಅಯ್ಯಂಗೇರಿ ಮತ್ತು ಪಕ್ಷದ ಪ್ರಮುಖರು ಆದ ವಲಯ ಅಧ್ಯಕ್ಷರು ಅಬ್ದುಲ್ ರೆಹಮಾನ್ ,ಸಾಬಿರ್ ಜಲೀಲ್ ,ಮಮ್ಮಧ್ ,ಬಷೀರ್, ಸೂರಜ್ ಹೊಸೂರು, ಬಲ್ಲಮಾವಟಿ ವಲಯ ಅಧ್ಯಕ್ಷರಾದ ಮಣವಟ್ಟಿರ ದಯಾ ಚಿಣ್ಣಪ್ಪ, ತೋಲoಡ ನಂದ, ಅಪ್ಪಚೆಟ್ಟೊಳoಡ ಮಿಥುನ್ ಮಾಚಯ್ಯ, ಮುಂತಾದವರು ಆಹ್ವಾನಿತ ಅತಿಥಿ ಗಣ್ಯರು ಉಪಸ್ಥಿತರಿದ್ದರು.
What's Your Reaction?
Like
1
Dislike
0
Love
1
Funny
0
Angry
0
Sad
0
Wow
1
