ಸಂಕಷ್ಟದಲ್ಲಿದ್ದವರೊಂದಿಗೆ ಕೈ ಜೋಡಿಸಿ; ಶಾರ್ಜಾದಲ್ಲಿ ನಡೆದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಕೊಡಗು ಕನೆಕ್ಟ್ 2026 ಕಾರ್ಯಕ್ರಮದಲ್ಲಿ ಶಾಸಕ ಮಂತರ್ ಗೌಡ ಸಲಹೆ

Feb 22, 2026 - 19:18
 0  476
ಸಂಕಷ್ಟದಲ್ಲಿದ್ದವರೊಂದಿಗೆ ಕೈ ಜೋಡಿಸಿ; ಶಾರ್ಜಾದಲ್ಲಿ ನಡೆದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್  ಕೊಡಗು ಕನೆಕ್ಟ್ 2026 ಕಾರ್ಯಕ್ರಮದಲ್ಲಿ ಶಾಸಕ ಮಂತರ್ ಗೌಡ ಸಲಹೆ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯ ಸಿಲ್ವರ್ ಜ್ಯುಬಿಲಿ ಪ್ರಯುಕ್ತ “ಕನೆಕ್ಟ್ ಕೊಡಗು 2026” ಕಾರ್ಯಕ್ರಮವು ಶಾರ್ಜಾ ಅಲ್ ಬಥಾಯ ಗಾರ್ಡನ್ ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡ ಈ ಮಹಾ ಕುಟುಂಬ ಸಂಗಮ ಸಾಮಾಜಿಕ ಏಕತೆ ಹಾಗೂ ಸಹೋದರತ್ವದ ಅಪೂರ್ವ ವೇದಿಕೆಯಾಗಿದ್ದು, ಹೊಸ ಇತಿಹಾಸ ನಿರ್ಮಾಣವಾಯಿತು. ದೇಶ ಹಾಗೂ ವಿದೇಶಗಳಿಂದ ಆಗಮಿಸಿದ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು,ಮಕ್ಕಳ ಆಟೋಟ ಸ್ವರ್ದೆ, ಮಹಿಳೆಯರಿಗಾಗಿ ವಿಶೇಷ ತರಬೇತಿ ಮತ್ತು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ಉಚಿತ ವೈದ್ಯಕೀಯ ಅರೋಗ್ಯ ತಪಾಸಣಾ ಶಿಬಿರ ಹಾಗೂ ದಫ್ ಪ್ರದರ್ಶನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

 ಕುಟುಂಬ ಸಮೇತರಾಗಿ ಭಾಗವಹಿಸಿದ ಜನರು ಉತ್ಸಾಹಭರಿತರಾಗಿ ಕಾರ್ಯಕ್ರಮವನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಪಾಲ್ಗೊಂಡು ಮಾತನಾಡಿ ಕೊಡಗಿನವರನ್ನು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸೇರಿಸುವ ಕಾರ್ಯ ಶ್ಲಾಘನೀಯವಾಗಿದೆ.

ನಮ್ಮವರು ಎಲ್ಲಿದ್ದರೂ ಸಂಕಷ್ಟದಲ್ಲಿರುವಾಗ ಅವರೊಂದಿಗೆ ನಾವು ಕೈಜೋಡಿಸಬೇಕು. ದಿನನಿತ್ಯದ ವ್ಯಸ್ತ ವೇಳಾಪಟ್ಟಿಯ ನಡುವೆಯೂ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುವುದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದು ಹೇಳಿದ ಅವರು ನಿಮ್ಮಲ್ಲರ ಪ್ರೀತಿ ವಿಶ್ವಾಸಕ್ಕೆ ಆಭಾರಿಯಾಗಿದ್ದೇನೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹೊಸ್ಕೇರಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಮಾತನಾಡಿ, ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿಯಿಂದ ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕೊಡಗಿನ ಹಲವು ಬಡವರಿಗೆ ಸಹಾಯವಾಗುತ್ತಿದೆ. ಸಂಘಟನೆ ತನ್ನ ಧ್ಯೇಯೋದ್ದೇಶಗಳನ್ನು ಮತ್ತಷ್ಟು ವಿಸ್ತರಿಸಿ ಮಡಿಕೇರಿ ಕೇಂದ್ರ ಭಾಗದ ಸರಕಾರಿ ಮೆಡಿಕಲ್ ಕಾಲೇಜಿನ ಬಡ ರೋಗಿಗಳ ಜೊತೆಗಿರುವವರಿಗೆ ಅಗತ್ಯ ಸೌಲಭ್ಯಗಳು ಒದಗಿಸುವ ಕೇಂದ್ರ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಿರುವುದು ಮಾದರಿ ಕಾರ್ಯ ಎಂದರು.

ಅರಬ್ ರಾಷ್ಟ್ರಗಳಲ್ಲಿ ನೆಲಸಿರುವ ಅನಿವಾಸಿ ಭಾರತೀಯರು ಬಹುತೇಕರು ತಮ್ಮ ಕುಟುಂಬ ಊರಿನಲ್ಲಿದ್ದು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಅತ್ಯಗತ್ಯ ಈ ನಿಟ್ಟಿನಲ್ಲಿ ಸಂಘಟನೆ ಸ್ಲಾಘನೀಯ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದರು.

 ಎಸ್‌ವೈಎಸ್ ರಾಜ್ಯಾಧ್ಯಕ್ಷರು ಹಾಗೂ ಕೊಡಗು ಸುನ್ನಿ ವೆಲ್ಫೇರ್ ನ ಬೆಂಗಳೂರು ಅಧ್ಯಕ್ಷರಾದ ಬಷೀರ್ ಸಅದಿ ಮಾತನಾಡಿ ಸಂಘಟನೆಯು ಕಳೆದ 25ವರ್ಷಗಳಲ್ಲಿ ಮಾಡಿದ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮುಂದೆಯು ನಿಮ್ಮ ಸೇವೆಯು ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್. ಎ.ಹಂಸ ಕೊಟ್ಟಮುಡಿ,ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾಧ್ಯಕ್ಷ ಲತೀಫ್ ಸುಂಟಿಕೊಪ್ಪ,ವಕೀಲ ಸುಫಿಯಾನ್ ಮಡಿಕೇರಿ ಹಾಗೂ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಕಾರ್ಯದರ್ಶಿ ಇಸ್ಮಾಯಿಲ್ ಅಯ್ಯಂಗೇರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ದುಬೈ ಪೊಲೀಸ್ ಮುಖ್ಯಸ್ಥರಾದ ಹಿಸ್ ಎಕ್ಸಲೆನ್ಸಿ ಉಮರ್ ಅಲ್ ಮರ್ಝೂಕಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಭಾರತ ಹಾಗೂ ಯುಎಇ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಶ್ಲಾಘಿಸಿದರು.

ಇದೆ ಸಂದರ್ಭ 25ನೇ ವಾರ್ಷಿಕ ಪ್ರಯುಕ್ತ ಸೌರಭ ಎಂಬ ಶೀರ್ಷಿಕೆಯಲ್ಲಿ ಹೊರತಂದ ಸ್ಮರಣ ಸಂಚಿಕೆಯನ್ನು ಎಲ್ಲಾ ಅತಿಥಿಗಳ ಸಮ್ಮುಖದಲ್ಲಿ ಮಾನ್ಯ ಶಾಸಕರಾದ ಡಾ.ಮಂಥರ್ ಗೌಡ ಬಿಡುಗಡೆ ಮಾಡಿದರು. ಈ ಸಂದರ್ಭ ಅಲಿ ಮುಸ್ಲಿಯಾರ್ (ಬಹರೈನ್), ತುಮಕೂರು ಮಾಜಿ ಶಾಸಕ ರಫೀಕ್ ಅಹ್ಮದ್, ಹಂಝ ಮುಸ್ಲಿಯಾರ್ (ಸೌದಿ ಅರೇಬಿಯಾ), ಅರಪಾತ್ ನಾಪೋಕ್ಲು,ಅಹ್ಮದ್ ಸಿ.ಎಚ್. ನಾಪೋಕ್ಲು,ರಿಯಾಝ್ ಕೊಟ್ಟಮುಡಿ,ಕಬೀರ್ (ಕತಾರ್) ಸಂಘಟನೆಯ ಸ್ಥಾಪಕ ಅಧ್ಯಕ್ಷರಾದ ಇಬ್ರಾಹಿಂ ಫೈಝಿ ಚಾಮಿಯಾಲ,ವೆಲ್ಫೇರ್ ಯುಎಇ ಸಮಿತಿ ಹಾಗೂ ಸ್ವಾಗತ ಸಮಿತಿ ನಾಯಕರು ಸೇರಿದಂತೆ ಭಾರತ ಮತ್ತು ಜಿಸಿಸಿ ದೇಶಗಳಿಂದ ಆಗಮಿಸಿದ ಅನೇಕ ಗಣ್ಯರು ಉಪಸ್ಥಿತರಿದ್ದರು.

 :ಕ್ರೀಡಾಕೂಟದ ಫಲಿತಾಂಶಗಳು: ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಾಲಿಬಾಲ್ ಪಂದ್ಯಾವಳಿಯಲ್ಲಿ ಆರ್ ವೈಸಿ ಎಮ್ಮೆಮಾಡು ಪ್ರಥಮ,ಗುಂಡಿಕೆರೆ ದ್ವಿತೀಯ ಫುಟ್ಬಾಲ್ ನಲ್ಲಿ ಚಾಮಿಯಾಲ ಪ್ರಥಮ,ಬೆಲ್ಟ್ ಹೌಸ್ ಕೊಂಡಗೇರಿ ದ್ವಿತೀಯ, ಹಗ್ಗಜಗ್ಗಾಟದಲ್ಲಿ ಚಾಮಿಯಾಲ ಪ್ರಥಮ, ಆರ್ ವೈಸಿ ಎಮ್ಮೆಮಾಡು ದ್ವಿತೀಯ, ದಫ್ ಸ್ಪರ್ಧೆಯಲ್ಲಿ ಗುಂಡಿಕೆರೆ ಚಾಂಪಿಯನ್ ಪಟ್ಟ ಅಲಂಕರಿಸಿ ಗಣ್ಯರಿಂದ ಪ್ರಶಸ್ತಿಯನ್ನು ಪಡೆದುಕೊಂಡರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0